ರೈಲ್ವೇ ಸಚಿವಾಲಯ

ಮೇಲುಡುಪು ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಆಂತರಿಕ ತಯಾರಿಕೆಯಲ್ಲಿ ಸಮಯದ ವಿರುದ್ಧ ಸೆಣಸುತ್ತಿರುವ ಭಾರತೀಯ ರೈಲ್ವೆ

Posted On: 07 APR 2020 12:45PM by PIB Bengaluru

ಮೇಲುಡುಪು ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಆಂತರಿಕ ತಯಾರಿಕೆಯಲ್ಲಿ ಸಮಯದ ವಿರುದ್ಧ ಸೆಣಸುತ್ತಿರುವ ಭಾರತೀಯ ರೈಲ್ವೆ

ರೈಲ್ವೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಪ್ರತಿದಿನ ಇಂತಹ 1000 ಸುರಕ್ಷಾ ಮೇಲುಡುಪು ಒದಗಿಸಲು ಶ್ರಮಿಸುತ್ತಿರುವ ರೈಲ್ವೆ

ಸದ್ಯದ  ಅಗತ್ಯವಾಗಿ, ಇತರ ಮುಂಚೂಣಿ ವೈದ್ಯಕೀಯ ವೃತ್ತಿಪರರಿಗೆ ಶೇ. 50 ರಷ್ಟನ್ನು ಪೂರೈಸಲು ರೈಲ್ವೆ ಪರಿಗಣನೆ

ಮೊದಲು ಇಂತಹ ಮೇಲುಡುಪು ತಯಾರಿಸಿದ ಜಗಧಾರಿ ರೈಲ್ವೆ ಕಾರ್ಯಾಗಾರ: ತಯಾರಿಕೆಗೆ ಸಜ್ಜಾಗಿರುವ ಸುಮಾರು 17 ರೈಲ್ವೆ ಕಾರ್ಯಾಗಾರಗಳು

 

ಭಾರತೀಯ ರೈಲ್ವೆಯು ಪಿಪಿಇ ಮಾದರಿಯ ಮೇಲುಡುಪು ಆಂತರಿಕ ಉತ್ಪಾದನೆಯನ್ನು ಮಿಷನ್ ಮೋಡ್ನಲ್ಲಿ ಕೈಗೆತ್ತಿಕೊಂಡಿದೆ. ಜಗಧಾರಿ ಕಾರ್ಯಾಗಾರದಿಂದ ತಯಾರಿಸಲಾದ ಮೇಲುಡುಪನ್ನು ಡಿಆರ್ಡಿಒ ಲ್ಯಾಬ್ನಲ್ಲಿ ಇತ್ತೀಚೆಗೆ ಪರೀಕ್ಷೆಗೊಳಪಡಿಸಿ ಉದ್ದೇಶಕ್ಕಾಗಿ ಅನುಮೋದಿಸಲಾಗಿದೆ. ವಿವಿಧ ವಲಯಗಳ ಇತರ ಕಾರ್ಯಾಗಾರಗಳು ಅನುಮೋದಿತ ವಿನ್ಯಾಸ ಮತ್ತು ವಸ್ತುಗಳನ್ನು ಸುರಕ್ಷಾ ಸಾಧನ ತಯಾರಿಕೆಯಲ್ಲಿ ಬಳಸಲಿವೆ. ಪಿಪಿಇ ಮೇಲುಡುಪು ರೈಲ್ವೆ ವೈದ್ಯರು ಮತ್ತು ರೈಲ್ವೆಯ ಆಸ್ಪತ್ರೆಗಳಲ್ಲಿ COVID  ಆರೈಕೆಯ ಮುಂಚೂಣಿಯಲ್ಲಿ ಕೆಲಸ ಮಾಡುವ ಅರೆವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ.

ರೈಲ್ವೆ ವೈದ್ಯರು ಮತ್ತು ಅರೆವೈದ್ಯರಿಗೆ ಪ್ರತಿದಿನ ಇಂತಹ 1000 ಸುರಕ್ಷಾ ಸಾಧನಗಳನ್ನು ತಯಾರಿಸಲು ರೈಲ್ವೆಯಲ್ಲಿ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಸುಮಾರು 17 ಕಾರ್ಯಾಗಾರಗಳಲ್ಲಿ ಇವುಗಳ ತಯಾರಿಕೆ ನಡೆಯಲಿದೆ.

ಹೊಸ ಪಿಪಿಇ ಉಡುಪಿನ ಶೇ.50 ರಷ್ಟನ್ನು ದೇಶದ ಇತರ ವೈದ್ಯಕೀಯ ವೃತ್ತಿಪರರಿಗೆ ಪೂರೈಸುವ ಬಗ್ಗೆ ರೈಲ್ವೆ ಪರಿಗಣಿಸುತ್ತಿದೆ.

ಎಲ್ಲಾ ಮೇಲುಡುಪುಗಳಿಗೆ ಸಂಬಂಧಿಸಿದ ವಸ್ತುಗಳನ್ನು  ವಿವಿಧ ದೊಡ್ಡ ಜವಳಿ ಉದ್ಯಮಗಳ ಬಳಿ ಇರುವ ಪಂಜಾಬ್ ಜಗಧಾರಿಯಲ್ಲಿ ಸಂಗ್ರಹಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ, ಉತ್ಪಾದನಾ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬಹುದು. COVID ವಿರುದ್ಧದ ಯುದ್ಧದಲ್ಲಿ ತೊಡಗಿರುವ ಇತರ ಸರ್ಕಾರಿ ಸಂಸ್ಥೆಗಳು ಭಾರತೀಯ ರೈಲ್ವೆಯ ಪಿಪಿಇ ಅಭಿವೃದ್ಧಿಯನ್ನು ಸ್ವಾಗತಿಸಿವೆ.

ಪಿಪಿಇಗಳ ತಾಂತ್ರಿಕ ಅಂಶಗಳು ಈಗ ಸಿದ್ಧವಾಗಿವೆ ಮತ್ತು ವಸ್ತುಗಳ ಪೂರೈಕೆದಾರರು ಸಿದ್ಧರಾಗಿದ್ದಾರೆ. ಈಗ ಉತ್ಪಾದನೆಯನ್ನು ಪ್ರಾರಂಭಿಸಬಹುದಾಗಿದೆ. COVID -19 ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿರುವ ನಮ್ಮ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಸಜ್ಜುಗೊಳಿಸಲು ಬೆಳವಣಿಗೆ ದೊಡ್ಡ ಉತ್ತೇಜನ ನೀಡಿದೆ.

ಭಾರತೀಯ ರೈಲ್ವೆ ತನ್ನ ಉತ್ಪಾದನಾ ಘಟಕಗಳು ಮತ್ತು ಕಾರ್ಯಾಗಾರಗಳಲ್ಲಿ ಅಗತ್ಯವಿರುವಷ್ಟು ದಿನಗಳವರೆಗೆ ಪ್ರತೀ ಹೊಲಿಗೆ ಯಂತ್ರದಿಂದ ಮೂರು ಸೆಟ್ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ.

ಕಡಿಮೆ ಅವಧಿಯಲ್ಲಿ ರೀತಿಯ ಪಿಪಿಇ ಅಭಿವೃದ್ಧಿಯು ಇತರರಿಗೆ ಅನುಸರಿಸುವ ಮಾದರಿಯಾಗಿದೆ ಮತ್ತು ಇದು ಮುಂಚೂಣಿಯಲ್ಲಿರುವವರಿಗೆ ಅತ್ಯಂತ ಪ್ರಮುಖವಾದ ರಕ್ಷಣಾ ಸಾಧನದ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

***



(Release ID: 1611951) Visitor Counter : 171