ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ – 19 ಅಪ್ ಡೇಟ್ಸ್
Posted On:
06 APR 2020 5:27PM by PIB Bengaluru
ಕೋವಿಡ್ – 19 ಅಪ್ ಡೇಟ್ಸ್
ದೇಶದಲ್ಲಿ ಕೋವಿಡ್-19ರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಕ್ಯಾಬಿನೆಟ್ ಕಾರ್ಯದರ್ಶಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ವಿವಿಧ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಮನಾಗಿ ನೂತನ ಮಟ್ಟದಲ್ಲಿ ಸಂವಾದ ನಡೆಸುತ್ತಿದ್ದಾರೆ. ಕೋವಿಡ್-19ಕ್ಕಾಗಿ ಜಿಲ್ಲಾ ಮಟ್ಟದ ಬಿಕ್ಕಟ್ಟು ನಿರ್ವಹಣಾ ಯೋಜನೆಯನ್ನು ಹೊಂದಲು ಎಲ್ಲಾ ಜಿಲ್ಲೆಗಳಿಗೆ ಸೂಚಿಸಲಾಗಿದೆ.
ಕೋವಿಡ್-19ರ ಹರಡುವಿಕೆಯನ್ನು ತಡೆಗಟ್ಟುವ ಸೌಲಭ್ಯಗಳನ್ನು ಸ್ಥಾಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಶಂಕಿತ ಮತ್ತು ಹೆಚ್ಚಿನ-ಅಪಾಯದ ವ್ಯಕ್ತಿಗಳನ್ನು ಇತರ ನಿರ್ಬಂಧಿತ ವ್ಯಕ್ತಿಗಳಿಂದ ಸಾಧ್ಯವಾದಷ್ಟು ಬೇಗ ಬೇರ್ಪಡಿಸುವತ್ತ ಗಮನ ಹರಿಸುತ್ತವೆ. ಮಾರ್ಗಸೂಚಿಗಳನ್ನು ಇಲ್ಲಿ ನೋಡಬಹುದು:
https://www.mohfw.gov.in/pdf/90542653311584546120quartineguidelines.pdf
ಕೋವಿಡ್-19 ರೋಗಿಗಳ ಚಿಕಿತ್ಸೆ / ರೋಗನಿರ್ಣಯ / ನಿರ್ಬಂಧದ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಿಸುವುದು, ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡುವ ಬಗ್ಗೆ ಸಚಿವಾಲಯವು ಮಾರ್ಗಸೂಚಿಗಳನ್ನು https://www.mohfw.gov.in/pdf/63948609501585568987wastesguidelines.pdf ನಲ್ಲಿ ಹೊರಡಿಸಿದೆ. ಇದರ ಜೊತೆಗೆ, ಕೋವಿಡ್-19ರ ಹರಡುವಿಕೆಯಿಂದ ಉಂಟಾಗುವ ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ಕೆಲವು ಶೈಕ್ಷಣಿಕ ವೀಡಿಯೊಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಾಲದಲ್ಲಿ ಸಹ ಹಾಕಲಾಗಿದೆ.
ಕ್ವಾರಂಟೈನ್ (ಬೇರ್ಪಡಿಕೆ) ಕೇಂದ್ರಗಳು, ಕೋವಿಡ್-19ಕ್ಕಾಗಿಯೇ ಮೀಸಲಾದ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು, ರೋಗಿಗಳ ಚಿಕಿತ್ಸೆ ಮತ್ತು ಕೋವಿಡ್-19ಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳಲು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಅಡಿಯಲ್ಲಿ ಹಣವನ್ನು ಬಳಸಲು ರಾಜ್ಯಗಳಿಗೆ ಈಗಾಗಲೇ ಸೂಚಿಸಲಾಗಿದೆ. ಇದರ ಜೊತೆಗೆ, ರಾಷ್ಟ್ರೀಯ ಆರೋಗ್ಯ ಮಿಷನ್ ಈಗಾಗಲೇ ರೂ. 1100 ಕೋಟಿಯನ್ನು ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಿದೆ ಮತ್ತು ರೂ. 3000 ಕೋಟಿ ಹೆಚ್ಚುವರಿ ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ. ಹಾಗೆಯೇ, ಎನ್ -95 ಮುಖಗವಸುಗಳು, ವೆಂಟಿಲೇಟರ್ ಗಳು ಮತ್ತು ವೈದ್ಯಕೀಯ ಉಡುಗೆಗಳನ್ನು (ಪಿಪಿಇ) ಕೇಂದ್ರೀಕರಿಸಿದ ಸ್ಥಳದಿಂದ ಸಂಗ್ರಹಿಸಿ ದೇಶದಾದ್ಯಂತ ಎಲ್ಲಾ ರಾಜ್ಯಗಳಿಗೆ ವಿತರಿಸಲಾಗುತ್ತಿದೆ.
ಪ್ರಸ್ತುತ, 4067 ದೃಢಪಡಿಸಿದ ಪ್ರಕರಣಗಳು ಮತ್ತು 109 ಸಾವುಗಳು ವರದಿಯಾಗಿವೆ. ಚೇತರಿಸಿಕೊಂಡ ನಂತರ 291 ಜನರನ್ನು ಗುಣಪಡಿಸಲಾಗಿದೆ/ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟು ದೃಢಪಡಿಸಿದ ಪ್ರಕರಣಗಳ ವಿಶ್ಲೇಷಣೆಯು ಈ ಕೆಳಗಿನ ವಿತರಣೆಯನ್ನು ಪ್ರಸ್ತುತಪಡಿಸಿದೆ:
- 47% ಜನರು - 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
- 34% ಜನರು - 40 ರಿಂದ 60 ವರ್ಷದೊಳಗಿನವರು
- 19% ಜನರು - 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು
ವರದಿಯಾದ ಕೋವಿಡ್-19ನಿಂದ ಆದ 109 ಸಾವುಗಳನ್ನು ವಿಶ್ಲೇಷಿಸುವಾಗ ಈ ಕೆಳಗಿನ ಅವಲೋಕನಗಳನ್ನು ಮಾಡಲಾಗಿದೆ:
ವಯಸ್ಸಿಗನುಗುಣವಾಗಿ ವಿತರಣೆ:
- ವಯಸ್ಸಾದವರಿಗೆ 63% ಸಾವುಗಳು ವರದಿಯಾಗಿದೆ (60 ಮತ್ತು ಅದಕ್ಕಿಂತ ಹೆಚ್ಚಿನವರು)
- 40 ರಿಂದ 60 ವರ್ಷದೊಳಗಿನ ಜನರಿಗೆ 30% ಸಾವುಗಳು ವರದಿಯಾಗಿದೆ
- 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 7% ಸಾವುಗಳು ವರದಿಯಾಗಿದೆ
ಈಗಿನಂತೆ, 86% ಸಾವಿನ ಪ್ರಕರಣಗಳು ಮಧುಮೇಹ, ದೀರ್ಘಕಾಲದ ಮೂತ್ರಪಿಂಡದ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿದ ಕೊಮೊರ್ಬಿಡಿಟಿಯನ್ನು (ಒಂದಕ್ಕಿಂದ ಹೆಚ್ಚು ಖಾಯಿಲೆಗಳು) ಪ್ರದರ್ಶಿಸಿವೆ. ವಯಸ್ಸಾದವರಲ್ಲಿ 19% ದೃಢಪಡಿಸಿದ ಪ್ರಕರಣಗಳು ವರದಿಯಾಗಿದ್ದರೂ, ಅವರಲ್ಲಿ 63% ಸಾವುಗಳು ಕಂಡುಬಂದಿರುವುದರಿಂದ, ವೃದ್ಧರು ಹೆಚ್ಚಿನ ಅಪಾಯದ ಗುಂಪಿನಲ್ಲಿದ್ದಾರೆ. ಇದಲ್ಲದೆ, 37% ಸಾವುಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಂದ ವರದಿಯಾಗಿದ್ದರೂ, ಸುಮಾರು, ಕೊಮೊರ್ಬಿಡಿಟಿ ಹೊಂದಿರುವ ಜನರಲ್ಲಿ 86% ಸಾವುಗಳು ಕೊಮೊರ್ಬಿಡಿಟಿ ಹೊಂದಿರುವ ಯುವಜನರು ಸಹ ಕೋವಿಡ್-19ಕ್ಕೆ ಒಳಗಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸೂಚಿಸುತ್ತದೆ.
ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು. ಕೋವಿಡ್-19ರ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : + 91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1611914)
Visitor Counter : 308
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam