ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಮತ್ತು ಬಹ್ರೇನ್ ದೊರೆ ನಡುವೆ ದೂರವಾಣಿ ಸಂಭಾಷಣೆ

Posted On: 06 APR 2020 8:34PM by PIB Bengaluru

ಪ್ರಧಾನಿ ಮತ್ತು ಬಹ್ರೇನ್ ದೊರೆ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬಹ್ರೇನ್ ದೊರೆಹಿಸ್ ಶ್ರೀ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದರು.

COVID-19 ಆರೋಗ್ಯ ಬಿಕ್ಕಟ್ಟು ಮತ್ತು ಲಾಜಿಸ್ಟಿಕ್ಸ್ ಸರಪಳಿ ಮತ್ತು ಹಣಕಾಸು ಮಾರುಕಟ್ಟೆಗಳು ಸೇರಿದಂತೆ ಅದರ ಪರಿಣಾಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ಪ್ರಸ್ತುತ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹ್ರೇನ್ನಲ್ಲಿರುವ ಬೃಹತ್ ಭಾರತೀಯ ಸಮುದಾಯದ ಹಿತದೃಷ್ಟಿಯನ್ನು ವೈಯಕ್ತಿಕವಾಗಿ ಗಮನಿಸುವುದಾಗಿ ಬಹ್ರೇನ್ ದೊರೆ ಪ್ರಧಾನ ಮಂತ್ರಿಯವರಿಗೆ ಭರವಸೆ ನೀಡಿದರು. ಬಹ್ರೇನ್ ಆಡಳಿತವು ಭಾರತೀಯ ವಲಸೆಗಾರರಿಗೆ ತೋರಿಸಿರುವ ಕಾಳಜಿ ಮತ್ತು ವಾತ್ಸಲ್ಯದ ಬಗ್ಗೆ ಪ್ರಧಾನಿ ತಮ್ಮ ಹೃತ್ಪೂರ್ವಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಎರಡೂ ರಾಷ್ಟ್ರಗಳ ಅಧಿಕಾರಿಗಳು ನಿಯಮಿತವಾಗಿ ಸಂಪರ್ಕದಲ್ಲಿರುತ್ತಾರೆ ಮತ್ತು COVID-19 ಸವಾಲುಗಳನ್ನು ಎದುರಿಸಲು ಪರಸ್ಪರ ಸಾಧ್ಯವಿರುವ ಎಲ್ಲ ಬೆಂಬಲವನ್ನು ಖಚಿತಪಡಿಸಿಕೊಳ್ಳುತ್ತಾರೆ ಎಂದು ಉಭಯ ನಾಯಕರು ಒಪ್ಪಿಕೊಂಡರು.

ಭಾರತವು ಬಹ್ರೇನ್ ಅನ್ನು ತನ್ನ ವಿಸ್ತೃತ ನೆರೆಹೊರೆಯ ಪ್ರಮುಖ ಭಾಗವೆಂದು ಪರಿಗಣಿಸುತ್ತದೆ ಎಂದು ಪ್ರಧಾನಿಯವರು ದೊರೆಗೆ ತಿಳಿಸಿದರು. ಕಳೆದ ವರ್ಷದ ತಮ್ಮ ಬಹ್ರೇನ್ ಭೇಟಿಯನ್ನು ಅವರು ಸ್ಮರಿಸಿಕೊಂಡರು.

***



(Release ID: 1611833) Visitor Counter : 193