ಸಂಪುಟ ಕಾರ್ಯಾಲಯ

ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ ಡಿಜಿಪಿ ಗಳೊಂದಿಗೆ ಸಂಪುಟ ಸಚಿವ ಕಾರ್ಯದರ್ಶಿಗಳ ಸಭೆ

Posted On: 01 APR 2020 3:14PM by PIB Bengaluru

ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ ಡಿಜಿಪಿ ಗಳೊಂದಿಗೆ ಸಂಪುಟ ಸಚಿವ ಕಾರ್ಯದರ್ಶಿಗಳ ಸಭೆ

 

ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ ಡಿಜಿಪಿ ಗಳೊಂದಿಗೆ ಸಂಪುಟ ಸಚಿವ ಕಾರ್ಯದರ್ಶಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ತಬ್ಲಿಖಿ ಜಮಾತ್ ನಲ್ಲಿ ಭಾಗವಹಿಸಿದವರ ತೀವ್ರ ಸಂಪರ್ಕದಿಂದ ಕೊವಿಡ್-19 ಅನ್ನು ತಡೆಗಟ್ಟುವ ಪ್ರಯತ್ನಗಳಿಗೆ ಆತಂಕ ಹೆಚ್ಚಿದ್ದು ರಾಜ್ಯಗಳು ಈ ವಿಷಯದ ಕುರಿತು ಸೂಕ್ಷ್ಮವಾಗಿ ತಿಳಿಸಲಾಗಿದೆ. ಇದರಲ್ಲಿ ಭಾಗವಹಿಸಿದವರನ್ನು ಸಮರೋಪಾದಿಯಲ್ಲಿ ಪತ್ತೆಹಚ್ಚುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸಲಾಗಿದೆ.

ತಬ್ಲಿಖಿ ಜಮಾತ್ ನಲ್ಲಿ ಭಾಗವಹಿಸಿದ ವಿದೇಶಿಯರು ವಿಸಾ ಷರತ್ತುಗಳನ್ನು ಉಲ್ಲಂಘಿಸಿದ್ದಾರೆಂದು ತಿಳಿದು ಬಂದಿದೆ. ಈ ಕಾರ್ಯಕ್ರಮದ ಆಯೋಜಕರು ಮತ್ತು ವಿಸಾ ಷರತ್ತುಗಳನ್ನು ಉಲ್ಲಂಘಿಸಿದವರ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ.

ಮುಂದಿನ ವಾರದೊಳಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಇದು ಫಲಾನುಭವಿಗಳಿಗೆ ದೊಡ್ಡ ಮೊತ್ತದ ಹಣ ವರ್ಗಾವಣೆಯನ್ನು ಒಳಗೊಂಡಿರುತ್ತದೆ. ಹಾಗಾಗಿ, ಸಾಮಾಜಿಕ ಅಂತರದ ಖಚಿತಪಡಿಸುವಿಕೆಯನ್ನು ಕಟ್ಟುನಿಟ್ಟಾಗಿ ಆಯೋಜಿಸಬೇಕಿದೆ.

ದೇಶಾದ್ಯಂತ ಲಾಕ್ ಡೌನ್ ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತಿದೆ ಎಂಬುದನ್ನು ಗಮನಿಸಲಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ರಾಜ್ಯದೊಳಗಡೆ ಯಾವುದೇ ತೊಂದರೆ ಇಲ್ಲದಂತೆ ಸರಕು ಸಾಗಾಣಿಕೆಯನ್ನು ಖಚಿತಪಡಿಸುವಂತೆ  ರಾಜ್ಯಗಳಿಗೆ ತಿಳಿಸಲಾಗಿದೆ.

ಅವಶ್ಯಕ ವಸ್ತುಗಳ ಉತ್ಪಾದನೆಯನ್ನು ಖಚಿತಪಡಿಸಬೇಕು. ಇಂಥ ಸರಕುಗಳ ಸಾಗಾಣಿಕಾ ಸರಪಳಿಯನ್ನಯ ಕೂಡಾ ನಿರ್ವಹಿಸಲಾಗುತ್ತಿದೆ ಎಂಬುದನ್ನೂ ಖಾತರಿಪಡಿಸಬೇಕು.

***

 



(Release ID: 1610033) Visitor Counter : 175