ಪ್ರಧಾನ ಮಂತ್ರಿಯವರ ಕಛೇರಿ
ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಜನತಾ ಕರ್ಫ್ಯೂ ಆಚರಣೆಗೆ ಮನವಿ ನಾಳೆ ಸಂಜೆ 5 ಗಂಟೆಗೆ ರಾಷ್ಟ್ರಕ್ಕಾಗಿ ಸ್ವಾರ್ಥರಹಿತ ಸೇವೆ ನೀಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ಮನವಿ
Posted On:
21 MAR 2020 6:37PM by PIB Bengaluru
ನಾಳೆ ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಜನತಾ ಕರ್ಫ್ಯೂ ಆಚರಣೆಗೆ ಮನವಿ
ನಾಳೆ ಸಂಜೆ 5 ಗಂಟೆಗೆ ರಾಷ್ಟ್ರಕ್ಕಾಗಿ ಸ್ವಾರ್ಥರಹಿತ ಸೇವೆ ನೀಡುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ಮನವಿ
ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಾರ್ಚ್ 22ರಂದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಜನತಾ ಕರ್ಫ್ಯೂ ಆಚರಣೆಗೆ ಮನವಿ ಮಾಡಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ರಾಷ್ಟ್ರಕ್ಕಾಗಿ ಸ್ವಾರ್ಥರಹಿತ ಸೇವೆಯನ್ನು ನೀಡುತ್ತಿರುವಂತಹವರಿಗೆ ಗೌರವವನ್ನು ಸೂಚಿಸಲು ಪ್ರಧಾನಮಂತ್ರಿ ಅವರು ಎಲ್ಲ ನಾಗರಿಕರು ಸಂಜೆ 5 ಗಂಟೆಗೆ ತಮ್ಮ ನಿವಾಸಗಳ ಕಿಟಕಿ, ಬಾಗಿಲು ಅಥವಾ ಬಾಲ್ಕನಿಗಳ ಬಳಿ ನಿಂತು 5 ನಿಮಿಷಗಳ ಕಾಲ ಚಪ್ಪಾಳೆ ಹೊಡೆಯುವ ಮೂಲಕ ಅಥವಾ ಗಂಟೆ ಬಾರಿಸುವ ಮೂಲಕ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
(Release ID: 1607696)
Visitor Counter : 219
Read this release in:
Telugu
,
English
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Malayalam