ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪಿಐಬಿಯ ಸತ್ಯ-ಪರಿಶೀಲನೆ, (ಫ್ಯಾಕ್ಟ್ ಚಕ್) ಸಾರ್ವಜನಿಕ ಸೇವಾ ಪ್ರಸಾರ ಮತ್ತು ಡಿಜಿಟಲ್ ಮಾಧ್ಯಮ ನಿಯಮಗಳ ಮೂಲಕ ವಿಶ್ವಾಸಾರ್ಹ ಮಾಹಿತಿ ಪ್ರಸರಣ ಬಲವರ್ಧನೆಗೊಳಿಸಲು ಕೇಂದ್ರ ಸರ್ಕಾರದ ಪ್ರಯತ್ನ

प्रविष्टि तिथि: 12 AUG 2026 3:01PM by PIB Bengaluru

ಭಾರತ ಸರ್ಕಾರದ ಪ್ರಮುಖ ಮಾಹಿತಿ ಪ್ರಸರಣ ಸಂಸ್ಥೆಯಾಗಿರುವ ಪತ್ರಿಕಾ ವಾರ್ತಾ ಶಾಖೆ (ಪಿಐಬಿ), ವಿವಿಧ ಮಾಧ್ಯಮ ವೇದಿಕೆಗಳ ಮೂಲಕ ವಿವಿಧ ರೂಪಗಳಲ್ಲಿ ಸಕಾಲಿಕ, ವಿಶ್ವಾಸಾರ್ಹ ಮತ್ತು ನಿಖರವಾದ ಸಂವಹನವನ್ನು ಸುಗಮಗೊಳಿಸುತ್ತದೆ. ಸಾರ್ವಜನಿಕ ಸೇವಾ ಪ್ರಸಾರದ ಆದೇಶವನ್ನು ಪೂರೈಸುವಲ್ಲಿ ಪ್ರಸಾರ ಭಾರತಿ ಪ್ರಮುಖ ಪಾತ್ರ ವಹಿಸುತ್ತದೆ. ವಿವಿಧ ವೇದಿಕೆಗಳನ್ನು ಬಳಸಿಕೊಂಡು ಪ್ರಾದೇಶಿಕ ಭಾಷೆಗಳು ಮತ್ತು ಉಪಭಾಷೆಗಳು ಸೇರಿದಂತೆ ಬಹು ಭಾಷೆಗಳಲ್ಲಿ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ.

ಸರ್ಕಾರವು ತನ್ನ ಕಾರ್ಯಕ್ರಮಗಳು ಮತ್ತು ನೀತಿಗಳಿಗೆ ಸಂಬಂಧಿಸಿದ ನಕಲಿ ಸುದ್ದಿಗಳನ್ನು ತಗ್ಗಿಸಲು ಪಿಐಬಿಯಲ್ಲಿ ಸತ್ಯ-ಪರಿಶೀಲನಾ ಘಟಕ ( ಫ್ಯಾಕ್ಟ್  ಚಕ್ ಯುನಿಟ್- ಎಫ್‌ಸಿಯು) ಅನ್ನು ಸ್ಥಾಪಿಸಿದೆ. ಸರ್ಕಾರಿ ಸಚಿವಾಲಯಗಳು, ಇಲಾಖೆಗಳು, ಪಿಎಸ್‌ಯುಗಳು ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಕ್ಲೇಮ್ ಗಳನ್ನು ರಚನಾತ್ಮಕ ಸತ್ಯ-ಪರಿಶೀಲನಾ ಪ್ರಕ್ರಿಯೆಯ ಮೂಲಕ ಎಫ್‌ಸಿಯು ಪರಿಶೀಲಿಸುತ್ತದೆ. ಇದು ವಿವಿಧ ವೇದಿಕೆಗಳ ಮೂಲಕ ಪರಿಶೀಲಿಸಿದ ಮಾಹಿತಿಯನ್ನು ಪ್ರಸಾರ ಮಾಡುತ್ತದೆ.

ದೂರದರ್ಶನ ಮತ್ತು ಆಕಾಶವಾಣಿ ತಮ್ಮ ವಾರ್ತಾ ಸಂಚಿಕೆಗಳು (ಸುದ್ದಿ ಬುಲೆಟಿನ್ ಗಳು), ಕಾರ್ಯಕ್ರಮಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಪರಿಶೀಲಿಸಿದ ಮಾಹಿತಿಯನ್ನು ಮತ್ತಷ್ಟು ಪ್ರಸಾರ ಮಾಡುತ್ತದೆ. ಡಿಡಿ ನ್ಯೂಸ್ ಕಠಿಣ ಸತ್ಯ-ಪರಿಶೀಲನೆ, ಬಹು ವಿಶ್ವಾಸಾರ್ಹ ಮೂಲಗಳ ಮೂಲಕ ಮರು-ಪರಿಶೀಲನೆ ಮತ್ತು ಪ್ರಸಾರದ ಮೊದಲು ಸಂಪಾದಕೀಯ ಪರಿಶೀಲನೆಯನ್ನು ಒಳಗೊಂಡ ಬಹು ಹಂತದ ಸಂಪಾದಕೀಯ ಕಾರ್ಯವಿಧಾನವನ್ನು ಅನುಸರಿಸುತ್ತದೆ. ತಪ್ಪು ಮಾಹಿತಿ ಮತ್ತು ಸುಳ್ಳು ನಿರೂಪಣೆಗಳನ್ನು ಎದುರಿಸಲು PIB ಫ್ಯಾಕ್ಟ್ ಚೆಕ್ ವಿಷಯವನ್ನು ದೂರದರ್ಶನ ಮತ್ತು ಆಕಾಶವಾಣಿ ಸುದ್ದಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಗದಿತವಾಗಿ ಪ್ರಸಾರ ಮಾಡುತ್ತದೆ.

ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರಡಿಯಲ್ಲಿ ಮಾಹಿತಿ ತಂತ್ರಜ್ಞಾನ (ಇಂಟರ್ ಮೀಡಿಯರಿ (ಮಧ್ಯವರ್ತಿ ) ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ಅನ್ನು ಪ್ರಕಟಿಸಿದೆ. ನಿಯಮಗಳು ಮಧ್ಯವರ್ತಿಗಳಿಗೆ ಸೂಕ್ತ ಕಟ್ಟುಪಾಡುಗಳನ್ನು ಸೂಚಿಸುತ್ತವೆ, ಡಿಜಿಟಲ್ ಸುದ್ದಿ ಮತ್ತು OTT ಪ್ಲಾಟ್‌ಫಾರ್ಮ್‌ಗಳ ಪ್ರಕಾಶಕರಿಗೆ ನೀತಿ ಸಂಹಿತೆಯನ್ನು ಒದಗಿಸುತ್ತವೆ. ಇದು ಪ್ರಕಾಶಕರಿಂದ ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಣ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಒಳಗೊಂಡಿರುವ ಮೂರು ಹಂತದ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.

ಚಲನಚಿತ್ರ ವಿಷಯದ (ಕಂಟೆಂಟ್‌ನ) ಅಭಿವೃದ್ಧಿ, ಸಂವಹನ ಮತ್ತು ಪ್ರಸರಣ (DCDFC) ಯೋಜನೆ, ಭಾರತ ಸಿನಿ ಹಬ್ (ICH) ಮತ್ತು ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ (NFHM) ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಸರ್ಕಾರ ಚಲನಚಿತ್ರ ಮತ್ತು ಮಾಧ್ಯಮ ವಲಯವನ್ನು ಉತ್ತೇಜಿಸುತ್ತದೆ. DCDFC ಯೋಜನೆಯು ಚಲನಚಿತ್ರೋತ್ಸವಗಳು, ಭಾರತೀಯ ಸಿನಿಮಾ ಪ್ರಚಾರ, ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವಿಕೆ, ಸಂರಕ್ಷಣೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಇಂಡಿಯಾ ಸಿನಿ ಹಬ್ ಏಕ-ಗವಾಕ್ಷಿ ಕಾರ್ಯವಿಧಾನದ ಮೂಲಕ ಚಲನಚಿತ್ರ ಚಿತ್ರೀಕರಣದ ಅನುಮತಿಗಳನ್ನು ಸುಗಮಗೊಳಿಸುತ್ತದೆ ಮತ್ತು ಭಾರತವನ್ನು ಚಿತ್ರೀಕರಣದ ತಾಣವಾಗಿ ಉತ್ತೇಜಿಸುತ್ತದೆ. NFHM ಭಾರತದ ಸಿನಿಮಾ ಪರಂಪರೆಯ ಸಂರಕ್ಷಣೆ, ಪುನಃಸ್ಥಾಪನೆ, ಡಿಜಿಟಲೀಕರಣ ಮತ್ತು ಆರ್ಕೈವಿಂಗ್ ಅನ್ನು ಕೈಗೊಳ್ಳುತ್ತದೆ.

ಸರ್ಕಾರವು ಮಾಧ್ಯಮ ಮತ್ತು ಪ್ರಸಾರದಲ್ಲಿ ತನ್ನ ಜಾಗತಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಮೂಲಕ ಅಂತಾರಾಷ್ಟ್ರೀಯ ಮಾಧ್ಯಮ ಸಹಕಾರವನ್ನು ಉತ್ತೇಜಿಸುತ್ತದೆ.

ಸರ್ಕಾರವು ಮೇ 2025 ರಲ್ಲಿ ಮುಂಬೈನಲ್ಲಿ ಉದ್ಘಾಟನಾ ವಿಶ್ವ ಆಡಿಯೋ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯನ್ನು (WAVES 2025) ಆಯೋಜಿಸಿತು. ಇದು "ಕ್ರಿಯೇಟ್ ಇನ್ ಇಂಡಿಯಾ, ಕ್ರಿಯೇಟ್ ಫಾರ್ ದಿ ವರ್ಲ್ಡ್" ಉಪಕ್ರಮದ ಮೂಲಕ ಭಾರತವನ್ನು ವಿಷಯ(ಕಂಟೆಂಟ್) ಸೃಷ್ಟಿಗೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ದೂರದೃಷ್ಟಿಯಡಿಯಲ್ಲಿ ಮಾಧ್ಯಮ ಮತ್ತು ಮನರಂಜನಾ ವಲಯವನ್ನು ಒಗ್ಗೂಡಿಸಿತು. ಶೃಂಗಸಭೆಯು ಭಾರತೀಯ ನಿರ್ಮಾಪಕರು, ನಿರ್ಮಾಪಕರು ಮತ್ತು ಸ್ಟಾರ್ಟ್‌ಅಪ್‌ಗಳಿಗೆ 100 ಕ್ಕೂ ಅಧಿಕ ದೇಶಗಳ ಜಾಗತಿಕ ಖರೀದಿದಾರರು, ಹೂಡಿಕೆದಾರರು, OTT ಪ್ಲಾಟ್‌ಫಾರ್ಮ್‌ಗಳು ಮತ್ತು ತಂತ್ರಜ್ಞಾನ ನಾಯಕರೊಂದಿಗೆ ತೊಡಗಿಸಿಕೊಳ್ಳಲು ವೇದಿಕೆಯನ್ನು ಒದಗಿಸಿತು.

ಪ್ರಸಾರ ವಲಯದಲ್ಲಿ, ಪ್ರಸಾರ ಭಾರತಿಯು ಅಂತಾರಾಷ್ಟ್ರೀಯ ಪ್ರಸಾರಕರೊಂದಿಗೆ ವಿಷಯ (ಕಂಟೆಂಟ್) ಹಂಚಿಕೆ ವ್ಯವಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳೊಂದಿಗೆ ಪ್ರಸಾರ ಒಪ್ಪಂದಗಳ ಮೂಲಕ ಪ್ರಪಂಚದಾದ್ಯಂತದ ಪ್ರಸಾರ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಪ್ರಸಾರದಲ್ಲಿ ಸಹಕಾರ, ವಿಷಯ ವಿನಿಮಯ, ವೃತ್ತಿಪರ ಪರಿಣತಿ ಮತ್ತು ಉತ್ತಮ ಅಭ್ಯಾಸಗಳನ್ನು ಸುಗಮಗೊಳಿಸಲು ವಿವಿಧ ದೇಶಗಳ ಪ್ರಸಾರಕರೊಂದಿಗೆ 48 ಸಕ್ರಿಯ ತಿಳಿವಳಿಕೆ ಒಪ್ಪಂದಗಳನ್ನು ಹೊಂದಿದೆ.

ಲೋಕಸಭೆಯಲ್ಲಿಂದು ಡಾ. ಅಲೋಕ್ ಕುಮಾರ್ ಸುಮನ್ ಕೇಳಿದ ಪ್ರಶ್ನೆಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ನೀಡಿದ ಲಿಖಿತ ಉತ್ತರದಲ್ಲಿಈ ಮಾಹಿತಿ ನೀಡಿದ್ದಾರೆ.

 

*****


(रिलीज़ आईडी: 2298291) आगंतुक पटल : 17
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Punjabi , Gujarati , Tamil , Telugu , Malayalam