ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತೆಲಂಗಾಣ ರಾಜ್ಯದ ಸಂಸ್ಥಾಪನಾ ದಿನದಂದು ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 02 JUN 2026 8:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದ ವಿಶೇಷ ಸಂದರ್ಭದಲ್ಲಿ ತೆಲಂಗಾಣ ಜನತೆಗೆ ಶುಭಾಶಯ ಕೋರಿದ್ದಾರೆ.

ತೆಲಂಗಾಣದ ಜನರು ತಮ್ಮ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, ರಾಜ್ಯದ ಭವ್ಯ ಸಂಸ್ಕೃತಿ ಮತ್ತು ಧೈರ್ಯ ಮತ್ತು ದೃಢನಿಶ್ಚಯದ ಇತಿಹಾಸವನ್ನು ಬಿಂಬಿಸಿದರು. 'ವಿಕಸಿತ ಭಾರತ'ದ ಕನಸನ್ನು ನನಸು ಮಾಡುವಲ್ಲಿ ತೆಲಂಗಾಣದ ಬೆಳವಣಿಗೆಯ ಪಥವನ್ನು ಬೆಂಬಲಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಶ್ರೀ ನರೇಂದ್ರ ಮೋದಿ ಅವರು ದೃಢಪಡಿಸಿದರು ಮತ್ತು ರಾಜ್ಯದ ಜನರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದರು.

ಪ್ರಧಾನಮಂತ್ರಿ ಅವರು ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ:

"ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನದ ವಿಶೇಷ ಸಂದರ್ಭದಲ್ಲಿ ತೆಲಂಗಾಣ ಜನತೆಗೆ ಶುಭಾಶಯಗಳು. ತೆಲಂಗಾಣದ ಜನರು ತಮ್ಮ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಜ್ಯವು ತನ್ನ ವೈಭವಯುತ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಧೈರ್ಯ ಮತ್ತು ದೃಢನಿಶ್ಚಯದಿಂದ ಕೂಡಿದೆ. ವಿಕಸಿತ ಭಾರತದ ನಮ್ಮ ಕನಸನ್ನು ಸಾಕಾರಗೊಳಿಸುವಲ್ಲಿ ತೆಲಂಗಾಣದ ಬೆಳವಣಿಗೆಯ ಪಥವನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸುತ್ತೇನೆ."

 

*****


(रिलीज़ आईडी: 2267800) आगंतुक पटल : 66
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Bengali-TR , Manipuri , Assamese , Punjabi , Gujarati , Tamil , Telugu , Malayalam