ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2026ಕ್ಕೆ ನಾಮನಿರ್ದೇಶನಗಳ ಆಹ್ವಾನ


ನಾಮನಿರ್ದೇಶನ ಸಲ್ಲಿಸಲು 2026 ಜುಲೈ 31 ಕೊನೆಯ ದಿನಾಂಕ

ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನಾಮನಿರ್ದೇಶನ ಸಲ್ಲಿಸಲು ಅವಕಾಶ

प्रविष्टि तिथि: 27 APR 2026 12:02PM by PIB Bengaluru

ಭಾರತ ಸರ್ಕಾರ ದೇಶಾದ್ಯಂತ ಮಕ್ಕಳ ಅಸಾಧಾರಣ ಸಾಧನೆಗಳನ್ನು ಗುರುತಿಸಲು ವಾರ್ಷಿಕ ನೀಡುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್ ಬಿಪಿ) 2026ಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಗಳನ್ನು ಶೌರ್ಯ, ಕ್ರೀಡೆ, ಸಾಮಾಜಿಕ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಮನ್ನಣೆಗೆ ಅರ್ಹರಾದ ಮಕ್ಕಳಿಗೆ ನೀಡಲಾಗುವುದು.

5 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷ ಮೀರದ (2026ರ ಜುಲೈ 31ರಂತೆ) ಭಾರತೀಯ ನಾಗರಿಕರಾಗಿರುವ ಮತ್ತು ಭಾರತದಲ್ಲಿ ವಾಸಿಸುವ ಯಾವುದೇ ಮಗು ಪ್ರಶಸ್ತಿಗೆ ಅರ್ಹವಾಗಿರುತ್ತದೆ.

ಯಾವುದೇ ನಾಗರಿಕರಿಂದ ನಾಮನಿರ್ದೇಶನಗಳನ್ನು https://awards.gov.in ನಲ್ಲಿರುವ ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್ ಮೂಲಕ ಮಾತ್ರ ಸ್ವೀಕರಿಸಲಾಗುವುದು. ಪ್ರಶಸ್ತಿಗಳಿಗೆ ಸ್ವಯಂ ನಾಮನಿರ್ದೇಶನ ಮತ್ತು ಶಿಫಾರಸುಗಳು, ಎರಡನ್ನೂ ಪರಿಗಣಿಸಲಾಗುವುದು. ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು 2026ರ ಜುಲೈ 31 ಕೊನೆಯ ದಿನಾಂಕ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು (https://awards.gov.in) ರಾಷ್ಟ್ರೀಯ ಪ್ರಶಸ್ತಿ ಪೋರ್ಟಲ್‌ಗೆ ಭೇಟಿ ನೀಡಿ.

 

*****


(रिलीज़ आईडी: 2255824) आगंतुक पटल : 82
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali-TR , Bengali , Assamese , Punjabi , Gujarati , Telugu , Malayalam