ಪ್ರಧಾನ ಮಂತ್ರಿಯವರ ಕಛೇರಿ
ಟೆಲ್ ಅವೀವ್ ಗೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ಸ್ವಾಗತಿಸಿದ ಇಸ್ರೇಲ್ ನ ಪ್ರಧಾನಮಂತ್ರಿ
प्रविष्टि तिथि:
25 FEB 2026 7:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಧಿಕೃತ ಭೇಟಿಗಾಗಿ ಇಸ್ರೇಲ್ ಗೆ ಆಗಮಿಸಿದರು. ವಿಶೇಷ ಆತಿಥ್ಯವಾಗಿ, ಟೆಲ್ ಅವೀವ್ ನ ವಿಮಾನ ನಿಲ್ದಾಣದಲ್ಲಿ ಅವರನ್ನು ಇಸ್ರೇಲ್ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಶ್ರೀಮತಿ ಸಾರಾ ನೆತನ್ಯಾಹು ಆದರಪೂರ್ವಕವಾಗಿ ಬರಮಾಡಿಕೊಂಡರು ಮತ್ತು ಔಪಚಾರಿಕ ಸ್ವಾಗತ ನೀಡಿದರು.
ಆಗಮನ ಸಮಾರಂಭದ ನಂತರ, ಇಬ್ಬರು ಪ್ರಧಾನಮಂತ್ರಿಗಳು ಸಂಕ್ಷಿಪ್ತ ಅವಧಿಯ ಮುಖಾಮುಖಿ ಸಭೆ ನಡೆಸಿದರು. ಹೋಟೆಲ್ ನಲ್ಲಿ, ಪ್ರಧಾನಮಂತ್ರಿ ಅವರಿಗೆ ಭಾರತೀಯ ಸಮುದಾಯದ ಸದಸ್ಯರು ಮತ್ತು ಭಾರತೀಯ ಯಹೂದಿ ವಲಸೆಗಾರರ ಪ್ರತಿನಿಧಿಗಳು ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತವನ್ನು ನೀಡಿದರು. ಸ್ವಾಗತ ಸಮಾರಂಭದಲ್ಲಿ ಭಾರತೀಯ ಮತ್ತು ಇಸ್ರೇಲಿ ಕಲಾವಿದರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು, ಇದು ಎರಡೂ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹವನ್ನು ಸಂಕೇತಿಸುತ್ತದೆ.
*****
(रिलीज़ आईडी: 2232855)
आगंतुक पटल : 62
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam