ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಒಪನ್‌ಎಐ ಸಂಸ್ಥೆ ಸಿಇಒ ಅವರು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ

ಪ್ರಕಟಣಾ ದಿನಾಂಕ: 20 FEB 2026 9:06PM by PIB Bengaluru

ಒಪನ್‌ಎಐ ಸಂಸ್ಥೆಯ ಸಿಇಒ ಶ್ರೀ ಸ್ಯಾಮ್ ಆಲ್ಟ್‌ಮನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಭಾರತ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಭೆ ಮತ್ತು ನವೀನತೆಯ ಕೇಂದ್ರವಾಗಲು ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿ ಈ ಭೇಟಿಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಎಐ ಪರಿವರ್ತನಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಭಾರತದ ಪ್ರತಿಭಾವಂತ ಯುವಜನತೆ ಮೇಲೆ ವಿಶ್ವಾಸವಿಟ್ಟು ಇಲ್ಲಿ ಹೂಡಿಕೆ ಮಾಡಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರಧಾನಮಂತ್ರಿಯವರು ಆಹ್ವಾನ ನೀಡಿದರು.

ಸ್ಯಾಮ್ ಆಲ್ಟ್‌ಮನ್ ಅವರು ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ:

“ಇಂದು ಸ್ಯಾಮ್ ಆಲ್ಟ್ ಮನ್ ಅವರ ಜೊತೆ ನಡೆದ ಮಾತುಕತೆ ಉತ್ತಮವಾಗಿತ್ತು. ಭಾರತ ಎಐ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಮಾಡುತ್ತಿದೆ. ನಮ್ಮ ಪ್ರತಿಭಾವಂತ ಯುವಸಮೂಹದಲ್ಲಿ ಹೂಡಿಕೆ ಮಾಡಲು ವಿಶ್ವದ ನಾಯಕರನ್ನು ನಾವು ಆಹ್ವಾನಿಸುತ್ತೇವೆ, ಈ ಕ್ಷೇತ್ರಕ್ಕೆ ಮತ್ತಷ್ಟು ಚೈತನ್ಯ ನೀಡಲು ನಾನು ಅವರಿಗೆ ಕರೆ ನೀಡುತ್ತೇನೆ.''

@OpenAI”

 

*****


(ಪ್ರಕಟಣೆ ಐ.ಡಿ.: 2231425) ವಿಸಿಟರ್ ಕೌಂಟರ್ : 36