ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ರೇಡಿಯೋ ದಿನವು ಜನರ ವಿಶ್ವಾಸಾರ್ಹ ಧ್ವನಿಯನ್ನು ಸಂಭ್ರಮಿಸುವ ಬಗೆಯಾಗಿದೆ- ಪ್ರಧಾನಮಂತ್ರಿ


ಇದೇ ಫೆಬ್ರವರಿ 22 ರಂದು ನಡೆಯಲಿರುವ ಮನ್ ಕಿ ಬಾತ್ ಗಾಗಿ ಸಲಹೆಗಳನ್ನು ಆಹ್ವಾನಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 FEB 2026 12:08PM by PIB Bengaluru

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನವು ದೂರದ ಹಳ್ಳಿಗಳಲ್ಲಿರಲಿ ಅಥವಾ ಜನದಟ್ಟಣೆಯ ನಗರಗಳಲ್ಲಿರಲಿ ಜನರಿಗೆ ವಿಶ್ವಾಸಾರ್ಹ ಧ್ವನಿಯಾಗಿರುವ ಮಾಧ್ಯಮವನ್ನು ಸಂಭ್ರಮಿಸುವ ಬಗೆಯಾಗಿದೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ರೇಡಿಯೋ ಸಕಾಲಿಕ ಮಾಹಿತಿಯನ್ನು ನೀಡುತ್ತಿದೆ, ಪ್ರತಿಭೆಗಳನ್ನು ಬೆಳೆಸಿದೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.

”ಮನ್ ಕಿ ಬಾತ್ ಮೂಲಕ ನಮ್ಮ ಜನರ ಸಾಮಾಜಿಕ ಶಕ್ತಿಯನ್ನು ಹೊರತರುವಲ್ಲಿ ರೇಡಿಯೊದ ಸಾಮರ್ಥ್ಯವನ್ನು ನಾನು ಖುದ್ದು ಅನುಭವಿಸಿದ್ದೇನೆ. ಈ ತಿಂಗಳ ಕಾರ್ಯಕ್ರಮವು ಫೆಬ್ರವರಿ 22ರ ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ  X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ವಿಶ್ವ ರೇಡಿಯೋ ದಿನವು , ಅದು ದೂರದ ಹಳ್ಳಿಗಳಾಗಿರಬಹುದು ಅಥವಾ ಜನದಟ್ಟಣೆಯ ನಗರಗಳಾಗಿರಬಹುದು ಜನರಿಗೆ ವಿಶ್ವಾಸಾರ್ಹ ಧ್ವನಿಯಾಗಿರುವ ಮಾಧ್ಯಮವನ್ನು ಸಂಭ್ರಮಿಸುವ ಬಗೆಯಾಗಿದೆ. ಹಲವು ವರ್ಷಗಳಿಂದ ರೇಡಿಯೋ ಸಕಾಲಿಕ ಮಾಹಿತಿಯನ್ನು ನೀಡಿದೆ, ಪ್ರತಿಭೆಗಳನ್ನು ಬೆಳೆಸಿದೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಿದೆ. ಈ ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಪ್ರಯತ್ನಗಳನ್ನು ಗುರುತಿಸುವ ದಿನ ಇದಾಗಿದೆ.

#MannKiBaat ಮೂಲಕ ನಮ್ಮ ಜನರ ಸಾಮಾಜಿಕ ಶಕ್ತಿಯನ್ನು ಹೊರತರುವಲ್ಲಿ ರೇಡಿಯೊದ ಸಾಮರ್ಥ್ಯವನ್ನು ನಾನು ಖುದ್ದು ಅನುಭವಿಸಿದ್ದೇನೆ. ಈ ತಿಂಗಳ ಕಾರ್ಯಕ್ರಮವು ಫೆಬ್ರವರಿ 22 ರ ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ’’

https://mygov.in/group-issue/inviting-ideas-mann-ki-baat-prime-minister-narendra-modi-22nd-february-2026/?target=inapp&type=group_issue&nid=366266

 

*****


(ಪ್ರಕಟಣೆ ಐ.ಡಿ.: 2227438) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Marathi , Bengali , Assamese , Punjabi , Gujarati , Telugu , Malayalam