ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನವರಿ 28 ರಂದು ಕಾರ್ಯಪ್ಪ ಪರೇಡ್ ಮೈದಾನದಲ್ಲಿ ಪ್ರಧಾನಮಂತ್ರಿ ಅವರು ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಉದ್ದೇಶಿಸಿ ಮಾತನಾಡಲಿದ್ದಾರೆ


ಪರೇಡ್  ಶೀರ್ಷಿಕೆ: ‘ರಾಷ್ಟ್ರ ಪ್ರಥಮ - ಕರ್ತವ್ಯ ನಿಷ್ಠ ಯುವ’

प्रविष्टि तिथि: 27 JAN 2026 5:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 28, 2026 ರಂದು ಮಧ್ಯಾಹ್ನ 3:30ರ ಸುಮಾರಿಗೆ ದಿಲ್ಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆಯುವ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್  ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ವರ್ಷದ ಪರೇಡ್  ವಿಷಯ  ಶೀರ್ಷಿಕೆ 'ರಾಷ್ಟ್ರ ಪ್ರಥಮ - ಕರ್ತವ್ಯ ನಿಷ್ಠ ಯುವ', ಇದು ಭಾರತದ ಯುವಜನರಲ್ಲಿ ಕರ್ತವ್ಯ, ಶಿಸ್ತು ಮತ್ತು ರಾಷ್ಟ್ರೀಯ ಬದ್ಧತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.

ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಒಂದು ತಿಂಗಳ ಕಾಲ ನಡೆದ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರ 2026ರ ಭವ್ಯ ಸಮಾರೋಪವನ್ನು ಗುರುತಿಸುತ್ತದೆ, ಇದರಲ್ಲಿ 898 ಬಾಲಕಿಯರು ಸೇರಿದಂತೆ ದೇಶಾದ್ಯಂತ 2,406 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದಾರೆ. ಪರೇಡ್ ನಲ್ಲಿ 21 ವಿದೇಶಗಳಿಂದ 207 ಯುವಜನರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ, ಎನ್‌ಸಿಸಿ ಕೆಡೆಟ್‌ಗಳು, ರಾಷ್ಟ್ರೀಯ ರಂಗಶಾಲೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರು ರಾಷ್ಟ್ರ ನಿರ್ಮಾಣ, ಸಾಮಾಜಿಕ ಸೇವೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ಪ್ರದರ್ಶಿಸುವ ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.

 

*****


(रिलीज़ आईडी: 2219451) आगंतुक पटल : 5
इस विज्ञप्ति को इन भाषाओं में पढ़ें: Odia , Assamese , English , Urdu , Marathi , हिन्दी , Bengali , Punjabi , Gujarati , Tamil , Telugu , Malayalam , Malayalam