ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ"ದಂದು ಹೆಣ್ಣು ಮಗುವಿನ ಘನತೆ, ಅವಕಾಶ ಮತ್ತು ಸಬಲೀಕರಣದ ಬದ್ಧತೆಯನ್ನು ಪ್ರಧಾನಮಂತ್ರಿ ಅವರು  ಪುನರುಚ್ಚರಿಸಿದ್ದಾರೆ

प्रविष्टि तिथि: 24 JAN 2026 7:08PM by PIB Bengaluru

ಪ್ರತಿಯೊಂದು ಹೆಣ್ಣು ಮಗುವೂ ಘನತೆ, ಅವಕಾಶ ಮತ್ತು ಭರವಸೆಯ ಜೀವನವನ್ನು ನಡೆಸುವಂತೆ ನೋಡಿಕೊಳ್ಳುವ ಸರ್ಕಾರದ ಅಚಲ ಸಂಕಲ್ಪವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪುನರುಚ್ಚರಿಸಿದ್ದಾರೆ.

"ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ"ದ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ, ಕಳೆದ ಹತ್ತು ವರ್ಷಗಳಲ್ಲಿ, ಹೆಣ್ಣು ಮಗುವಿನ ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯ ರಕ್ಷಣೆಯನ್ನು ಸುಧಾರಿಸುವತ್ತ ನಿರಂತರ ಗಮನ ಹರಿಸಲಾಗಿದೆ. ಈ ಪ್ರಯತ್ನಗಳು ಹೆಣ್ಣು ಮಗು ಅಭಿವೃದ್ಧಿ ಹೊಂದಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 

ಪ್ರಧಾನಮಂತ್ರಿಯವರು ಎಕ್ಸ್ ತಾಣದ ಸಂದೇಶದಲ್ಲಿ ಈ ರೀತಿ ಹೇಳಿದ್ದಾರೆ;

“ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು, ಹೆಣ್ಣು ಮಗು ಘನತೆ, ಅವಕಾಶ ಮತ್ತು ಭರವಸೆಯ ಜೀವನವನ್ನು ನಡೆಸುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಅಚಲ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ. ಕಳೆದ ಹತ್ತು ವರ್ಷಗಳಲ್ಲಿ, ನಾವು ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ, ಕೌಶಲ್ಯ ಮತ್ತು ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸಿದ್ದೇವೆ. ಇದು ಹೆಣ್ಣು ಮಗು ಅಭಿವೃದ್ಧಿ ಹೊಂದುವ ಮತ್ತು ವಿಕಸಿತ  ಭಾರತಕ್ಕೆ ಪರಿಣಾಮಕಾರಿಯಾಗಿ ಕೊಡುಗೆ ನೀಡುವ ವಾತಾವರಣವನ್ನು ಖಚಿತಪಡಿಸಿದೆ."

 

*****

 


(रिलीज़ आईडी: 2218465) आगंतुक पटल : 3
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu , Malayalam