ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ದ ಅಂಗವಾಗಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹೆಣ್ಣುಮಕ್ಕಳು ಕೇವಲ ನಮ್ಮ ಜವಾಬ್ದಾರಿಗಳಷ್ಟೇ ಅಲ್ಲ, ಆದರೆ ಸಂಪೂರ್ಣ ಶಕ್ತಿ ಎಂಬುದನ್ನು ಸಂಕೇತಿಸುತ್ತದೆ
ರಾಣಿ ಲಕ್ಷ್ಮೀಬಾಯಿ, ರಾಣಿ ವೇಲು ನಾಚಿಯಾರ್, ಮುಲಾ ಗಭಾರು ಮತ್ತು ಪ್ರೀತಿಲತಾ ವಡ್ಡೆದಾರ್ ಅವರ ಅದ್ಭುತ ಉದಾಹರಣೆಗಳು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಹೆಮ್ಮೆ ಮತ್ತು ಸ್ಫೂರ್ತಿಯಿಂದ ತುಂಬುತ್ತವೆ
ನರೇಂದ್ರ ಮೋದಿ ಸರ್ಕಾರದ ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರವು ನಾರಿ ಶಕ್ತಿಯನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಿಸಿದೆ
ಇಂದು ಮಹಿಳೆಯರು ನಮ್ಮ ರಾಷ್ಟ್ರದ ಪ್ರಗತಿಯನ್ನು ಮುನ್ನಡೆಸುತ್ತಿದ್ದಾರೆ
प्रविष्टि तिथि:
24 JAN 2026 11:06AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ದ ಅಂಗವಾಗಿ ಎಲ್ಲರಿಗೂ ಶುಭಾಶಯಗಳನ್ನು ಕೋರಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, "'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಎಲ್ಲರಿಗೂ ಶುಭಾಶಯಗಳು' ಎಂದು ಹೇಳಿದ್ದಾರೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹೆಣ್ಣುಮಕ್ಕಳು ಕೇವಲ ನಮ್ಮ ಜವಾಬ್ದಾರಿಯಷ್ಟೇ ಅಲ್ಲ, ಆದರೆ ಸಂಪೂರ್ಣ ಶಕ್ತಿ ಎಂಬುದನ್ನು ಸಂಕೇತಿಸುತ್ತದೆ. ರಾಣಿ ಲಕ್ಷ್ಮೀಬಾಯಿ, ರಾಣಿ ವೇಲು ನಾಚಿಯಾರ್, ಮುಲಾ ಗಭಾರು ಮತ್ತು ಪ್ರೀತಿಲತಾ ವಡ್ಡೆದಾರ್ ಅವರ ಅದ್ಭುತ ಉದಾಹರಣೆಗಳು ಪ್ರತಿಯೊಬ್ಬ ಭಾರತೀಯನ ಹೃದಯವನ್ನು ಹೆಮ್ಮೆ ಮತ್ತು ಸ್ಫೂರ್ತಿಯಿಂದ ತುಂಬುತ್ತವೆ. ನರೇಂದ್ರ ಮೋದಿ ಸರ್ಕಾರದ ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರವು ನಾರಿ ಶಕ್ತಿಯನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಿಸಿದೆ ಮತ್ತು ಇಂದು ಮಹಿಳೆಯರು ನಮ್ಮ ರಾಷ್ಟ್ರದ ಪ್ರಗತಿಯನ್ನು ಮುನ್ನಡೆಸುತ್ತಿದ್ದಾರೆ.''
*****
(रिलीज़ आईडी: 2218059)
आगंतुक पटल : 7