ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಕಲ್ಲಿದ್ದಲು ವಲಯವು ಮುಂದಿನ ತಲೆಮಾರಿನ ಇಂಧನವಾಗಿ ಹೇಗೆ ತನ್ನನ್ನು ಮರು ಆವಿಷ್ಕರಿಸಿಕೊಂಡಿದೆ ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

प्रविष्टि तिथि: 12 JAN 2026 4:11PM by PIB Bengaluru

ಕಳೆದ 11 ವರ್ಷಗಳಲ್ಲಿ ಭಾರತದ ಕಲ್ಲಿದ್ದಲು ವಲಯವು ಮುಂದಿನ ತಲೆಮಾರಿನ ಇಂಧನವಾಗಿ ಹೇಗೆ ತನ್ನನ್ನು ಮರು ಆವಿಷ್ಕರಿಸಿಕೊಂಡಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಅವರು ಬರೆದ ಲೇಖನವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ ಅವರ ಲೇಖನಕ್ಕೆ ಪ್ರಧಾನಮಂತ್ರಿ ಅವರು ಪ್ರತಿಕ್ರಿಯಿಸಿ ಹೀಗೆ ಬರೆದಿದ್ದಾರೆ:

“ಹಸಿರು ತಂತ್ರಜ್ಞಾನಗಳೊಂದಿಗೆ ಸುಗಮವಾಗಿ ಏಕೀಕರಿಸುತ್ತಾ, ವಿಕಸಿತ ಭಾರತ 2047ರ ದಿಸೆಯಲ್ಲಿ ಭಾರತದ ಪ್ರಯಾಣಕ್ಕೆ ಕಲ್ಲಿದ್ದಲು ವಲಯ ಮುಂದುವರಿದು ಕೊಡುಗೆ ನೀಡಲಿದೆ ಎಂಬುದನ್ನು ಸಚಿವರು ಲೇಖನದಲ್ಲಿ ವಿವರಿಸಿದ್ದಾರೆ”.

“ಇದು ತಪ್ಪದೇ ಒದಬೇಕಾದ ಲೇಖನವಾಗಿದ್ದು, ಕಳೆದ 11 ವರ್ಷಗಳಲ್ಲಿ ಭಾರತದ ಕಲ್ಲಿದ್ದಲು ವಲಯವು ಮುಂದಿನ ತಲೆಮಾರಿನ ಇಂಧನವಾಗಿ ಹೇಗೆ ತನ್ನನ್ನು ಮರು ಆವಿಷ್ಕರಿಸಿಕೊಂಡಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಕಿಶನ್ ರೆಡ್ಡಿ ಅವರು ಪರಾಮರ್ಶಿಸುತ್ತಾರೆ.''

 

*****


(रिलीज़ आईडी: 2213837) आगंतुक पटल : 16
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Bengali-TR , Gujarati , Odia , Tamil , Malayalam