ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಹುತಾತ್ಮರಿಗೆ 'ವಿಜಯ ದಿವಸ'ದಂದು ಗೌರವ ನಮನ ಸಲ್ಲಿಸಿದರು
1971ರ ಇದೇ ದಿನದಂದು, ನಮ್ಮ ಭದ್ರತಾ ಪಡೆಗಳು ತಮ್ಮ ಅದಮ್ಯ ಧೈರ್ಯ ಮತ್ತು ನಿಖರವಾದ ತಂತ್ರಗಾರಿಕೆಯಿಂದ ಪಾಕಿಸ್ತಾನದ ಸೇನೆಯನ್ನು ಸೋಲಿಸಿ, ಅವರು ಶರಣಾಗುವಂತೆ ಮಾಡಿದ್ದವು
ಈ ವಿಜಯವು ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ರಕ್ಷಾಕವಚವಾಗಿ ನಿಂತಿದೆ, ಇದು ವಿಶ್ವಾದ್ಯಂತ ಮಾನವೀಯತೆಯನ್ನು ರಕ್ಷಿಸುವಲ್ಲಿ ಒಂದು ಜ್ವಲಂತ ನಿದರ್ಶನವಾಗಿದೆ ಹಾಗೂ ಭಾರತೀಯ ಸೇನಾ ಪಡೆಗಳ ಅಪ್ರತಿಮ ಸಾಮರ್ಥ್ಯ ಮತ್ತು ಪರಾಕ್ರಮವನ್ನು ಪ್ರದರ್ಶಿಸಿತು
प्रविष्टि तिथि:
16 DEC 2025 10:29AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಯುದ್ಧದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಹುತಾತ್ಮರಿಗೆ 'ವಿಜಯ ದಿವಸ'ದಂದು ಗೌರವ ನಮನ ಸಲ್ಲಿಸಿದರು.
ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀ ಅಮಿತ್ ಶಾ ಅವರು, "1971ರ ಇದೇ ದಿನದಂದು, ನಮ್ಮ ಭದ್ರತಾ ಪಡೆಗಳು ತಮ್ಮ ಅದಮ್ಯ ಧೈರ್ಯ ಮತ್ತು ನಿಖರವಾದ ತಂತ್ರಗಾರಿಕೆಯಿಂದ ಪಾಕಿಸ್ತಾನದ ಸೇನೆಯನ್ನು ಸೋಲಿಸಿ, ಅವರು ಶರಣಾಗುವಂತೆ ಮಾಡಿದ್ದವು," ಎಂದು ಹೇಳಿದ್ದಾರೆ. ಈ ವಿಜಯವು ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಒಂದು ರಕ್ಷಾಕವಚವಾಗಿ ನಿಂತಿದೆ ಹಾಗೂ ವಿಶ್ವಾದ್ಯಂತ ಮಾನವೀಯತೆಯನ್ನು ರಕ್ಷಿಸುವಲ್ಲಿ ಒಂದು ಜ್ವಲಂತ ನಿದರ್ಶನವಾಗಿದೆ. ಅಲ್ಲದೆ, ಇದು ಭಾರತೀಯ ಸೇನೆಯ ಅಪ್ರತಿಮ ಮಿಲಿಟರಿ ಸಾಮರ್ಥ್ಯ ಮತ್ತು ಪರಾಕ್ರಮವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.
*****
(रिलीज़ आईडी: 2204557)
आगंतुक पटल : 65
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali-TR
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam