ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2025ರ ಎಫ್.ಐ.ಎಚ್. ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಪುರುಷರ ಜೂನಿಯರ್ ಹಾಕಿ ತಂಡಕ್ಕೆ ಅಭಿನಂದನೆ ಕೋರಿದ ಪ್ರಧಾನಮಂತ್ರಿ

प्रविष्टि तिथि: 11 DEC 2025 9:49PM by PIB Bengaluru

2025ರ ಎಫ್.ಐ.ಎಚ್. ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದ ಭಾರತದ ಪುರುಷರ ಜೂನಿಯರ್ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.

ಈ ಪ್ರತಿಷ್ಠಿತ ಜಾಗತಿಕ ಪಂದ್ಯಾವಳಿಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಯುವ ಮತ್ತು ಉತ್ಸಾಹಭರಿತ ಹಾಕಿ ತಂಡವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಈ ಗಮನಾರ್ಹ ಸಾಧನೆಯು ಭಾರತದ ಯುವಕರ ಪ್ರತಿಭೆ, ದೃಢನಿಶ್ಚಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.

ಎಕ್ಸ್‌ ತಾಣದ ಸಂದೇಶದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:

“2025ರ ಎಫ್.ಐ.ಎಚ್. ಹಾಕಿ ಪುರುಷರ ಜೂನಿಯರ್ ವಿಶ್ವಕಪ್ ನಲ್ಲಿ ಇತಿಹಾಸ ಬರೆದ ನಮ್ಮ ಪುರುಷರ ಜೂನಿಯರ್ ಹಾಕಿ ತಂಡಕ್ಕೆ ಅಭಿನಂದನೆಗಳು! ನಮ್ಮ ಯುವ ಮತ್ತು ಉತ್ಸಾಹಭರಿತ ತಂಡವು ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತದ ಮೊದಲ ಕಂಚಿನ ಪದಕವನ್ನು ಪಡೆದುಕೊಂಡಿದೆ. ಈ ಅದ್ಭುತ ಸಾಧನೆಯು ದೇಶಾದ್ಯಂತ ಅಸಂಖ್ಯಾತ ಯುವಕರಿಗೆ ಸ್ಫೂರ್ತಿ ನೀಡುತ್ತದೆ.”

 

*****


(रिलीज़ आईडी: 2202856) आगंतुक पटल : 5
इस विज्ञप्ति को इन भाषाओं में पढ़ें: Malayalam , Bengali , Gujarati , English , Urdu , Marathi , हिन्दी , Assamese , Manipuri , Odia , Telugu