ಪ್ರಧಾನ ಮಂತ್ರಿಯವರ ಕಛೇರಿ
ಯುನೆಸ್ಕೋ ಭಾವನಾತ್ಮಕ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬದ ಸೇರ್ಪಡೆ: ಪ್ರಧಾನಮಂತ್ರಿ ಸ್ವಾಗತ
ದೀಪಾವಳಿ ಹಬ್ಬವು ನಮ್ಮ ಸಂಸ್ಕೃತಿ ಮತ್ತು ನೈತಿಕ ತತ್ವದೊಂದಿಗೆ ಬೆಸೆದಿದೆ, ಅದು ನಮ್ಮ ನಾಗರಿಕತೆಯ ಆತ್ಮ ಹಾಗೂ ಜ್ಞಾನೋದಯ ಮತ್ತು ಸದಾಚಾರದ ನಿರೂಪಣೆಯಾಗಿದೆ: ಪ್ರಧಾನಮಂತ್ರಿ
प्रविष्टि तिथि:
10 DEC 2025 12:20PM by PIB Bengaluru
ಯುನೆಸ್ಕೋ ಭಾವನಾತ್ಮಕ ಪರಂಪರೆಯ ಪಟ್ಟಿಯಲ್ಲಿ ದೀಪಾವಳಿ ಹಬ್ಬದ ಸೇರ್ಪಡೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಯುನೆಸ್ಕೋ ಹ್ಯಾಂಡಲ್ ನ 'ಎಕ್ಸ್' ಪೋಸ್ಟ್‌ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ:
"ಭಾರತ ಮತ್ತು ಪ್ರಪಂಚದಾದ್ಯಂತದ ಜನರು ರೋಮಾಂಚಿತರಾಗಿದ್ದಾರೆ.
ದೀಪಾವಳಿ ಹಬ್ಬವು ನಮ್ಮ ಸಂಸ್ಕೃತಿ ಮತ್ತು ನೈತಿಕ ತತ್ವಗಳೊಂದಿಗೆ ಅತ್ಯಂತ ನಿಕಟವಾಗಿ ಬೆಸೆದಿದೆ. ಇದು ನಮ್ಮ ನಾಗರಿಕತೆಯ ಚೈತನ್ಯವಾಗಿದೆ. ಇದು ಜ್ಞಾನೋದಯ ಮತ್ತು ಸದಾಚಾರವನ್ನು ನಿರೂಪಿಸುತ್ತದೆ. ಯುನೆಸ್ಕೋ ಭಾವನಾತ್ಮಕ ಪರಂಪರೆಯ ಪಟ್ಟಿಗೆ ದೀಪಾವಳಿ ಹಬ್ಬದ ಸೇರ್ಪಡೆಯು ಹಬ್ಬದ ಜಾಗತಿಕ ಜನಪ್ರಿಯತೆಗೆ ಮತ್ತಷ್ಟು ಕೊಡುಗೆ ನೀಡಲಿದೆ.
ಪ್ರಭು ಶ್ರೀ ರಾಮನ ಆದರ್ಶಗಳು ನಮಗೆ ಅನಂತ ಮಾರ್ಗದರ್ಶನ ನೀಡುತ್ತಲಿರಲಿ.
@UNESCO”
*****
(रिलीज़ आईडी: 2201450)
आगंतुक पटल : 5