ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಮೋದಿ ಅವರಿಂದ ಶ್ರೀ ಲಿಪ್-ಬು ಟಾನ್ ಅವರ ಭೇಟಿ; ಭಾರತದ ಸೆಮಿಕಂಡಕ್ಟರ್ ಪಯಣದಲ್ಲಿ ಇಂಟೆಲ್ ನ ಬದ್ಧತೆಗೆ ಶ್ಲಾಘನೆ
प्रविष्टि तिथि:
09 DEC 2025 9:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂಟೆಲ್ ನ ಸಿ.ಇ.ಒ ಶ್ರೀ ಲಿಪ್-ಬು ಟಾನ್ ಅವರ ಭೇಟಿಗೆ ಹರ್ಷ ವ್ಯಕ್ತಪಡಿಸಿದರು ಮತ್ತು ಭಾರತದ ಸೆಮಿಕಂಡಕ್ಟರ್ ಪಯಣದಲ್ಲಿ ಇಂಟೆಲ್ ನ ಬದ್ಧತೆಯನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪ್ರಧಾನಮಂತ್ರಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
"ಶ್ರೀ ಲಿಪ್-ಬು ಟಾನ್ ಅವರನ್ನು ಭೇಟಿಯಾಗಿ ಸಂತೋಷವಾಗಿದೆ. ನಮ್ಮ ಸೆಮಿಕಂಡಕ್ಟರ್ ಪಯಣದಲ್ಲಿ ಇಂಟೆಲ್ ನ ಬದ್ಧತೆಯನ್ನು ಭಾರತ ಸ್ವಾಗತಿಸುತ್ತದೆ. ನಾವಿನ್ಯತೆ-ಚಾಲಿತ ಭವಿಷ್ಯದ ತಂತ್ರಜ್ಞಾನ ರೂಪಿಸಲು ನಮ್ಮ ಯುವಕರೊಂದಿಗೆ ಕೆಲಸ ಮಾಡುತ್ತಾ ಇಂಟೆಲ್ ಉತ್ತಮ ಅನುಭವವನ್ನು ಪಡೆಯಲಿದೆ ಎಂದು ನನಗೆ ವಿಶ್ವಾಸವಿದೆ."
*****
(रिलीज़ आईडी: 2201289)
आगंतुक पटल : 3