ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ದಂಡಕ್ರಮ ಪಾರಾಯಣಂ ಪೂರ್ಣಗೊಳಿಸಿದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಅವರನ್ನು ಅಭಿನಂದಿಸಿದ್ದಾರೆ
प्रविष्टि तिथि:
02 DEC 2025 1:03PM by PIB Bengaluru
ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2000 ಮಂತ್ರಗಳನ್ನು ಒಳಗೊಂಡಿರುವ ದಂಡಕ್ರಮ ಪಾರಾಯಣವನ್ನು ಯಾವುದೇ ಅಡೆತಡೆಯಿಲ್ಲದೆ 50 ದಿನಗಳಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
19 ವರ್ಷದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಅವರು ಏನು ಮಾಡಿದ್ದಾರೆಯೋ ಅದನ್ನು ಮುಂದಿನ ಪೀಳಿಗೆಯು ನೆನಪಿಸಿಕೊಳ್ಳುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಕಾಶಿಯ ಸಂಸದನಾಗಿ, ಈ ಪವಿತ್ರ ನಗರದಲ್ಲಿ ಈ ಅಸಾಧಾರಣ ಸಾಧನೆ ನಡೆದಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರ ಕುಟುಂಬಕ್ಕೆ, ಭಾರತದಾದ್ಯಂತದ ಹಲವಾರು ಸಂತರು, ದಾರ್ಶನಿಕರು, ವಿದ್ವಾಂಸರು ಮತ್ತು ಅವರನ್ನು ಬೆಂಬಲಿಸಿದ ಸಂಸ್ಥೆಗಳಿಗೆ ನನ್ನ ನಮಸ್ಕಾರಗಳು", ಎಂದು ಶ್ರೀ ಮೋದಿ ಅವಕು ಹೇಳಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ:
"19 ವರ್ಷದ ವೇದಮೂರ್ತಿ ದೇವವ್ರತ್ ಮಹೇಶ್ ರೇಖೆ ಅವರು ಏನು ಮಾಡಿದ್ದಾರೆ ಎಂಬುದನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳುತ್ತದೆ! ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಶುಕ್ಲ ಯಜುರ್ವೇದದ ಮಧ್ಯಂದಿನಿ ಶಾಖೆಯ 2000 ಮಂತ್ರಗಳನ್ನು ಒಳಗೊಂಡಿರುವ ದಂಡಕ್ರಮ ಪಾರಾಯಣವನ್ನು 50 ದಿನಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಿದ್ದಕ್ಕಾಗಿ ಅವರ ಬಗ್ಗೆ ಹೆಮ್ಮೆಪಡುತ್ತಾರೆ. ಇದು ಹಲವಾರು ವೈದಿಕ ಶ್ಲೋಕಗಳು ಮತ್ತು ದೋಷರಹಿತವಾಗಿ ಪಠಿಸಲಾದ ಪವಿತ್ರ ಪದಗಳನ್ನು ಒಳಗೊಂಡಿದೆ. ಅವರು ನಮ್ಮ ಅತ್ಯುತ್ತಮವಾದ ಗುರು ಪರಂಪರೆಯನ್ನು ಸಾಕಾರಗೊಳಿಸುತ್ತಾರೆ.
ಕಾಶಿಯ ಸಂಸದನಾಗಿ, ಈ ಪವಿತ್ರ ನಗರದಲ್ಲಿ ಈ ಅಸಾಧಾರಣ ಸಾಧನೆ ನಡೆದಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರ ಕುಟುಂಬಕ್ಕೆ, ಭಾರತದಾದ್ಯಂತದ ಹಲವಾರು ಸಂತರು, ದಾರ್ಶನಿಕರು, ವಿದ್ವಾಂಸರು ಮತ್ತು ಅವರನ್ನು ಬೆಂಬಲಿಸಿದ ಸಂಸ್ಥೆಗಳಿಗೆ ನನ್ನ ನಮಸ್ಕಾರಗಳು."
****
(रिलीज़ आईडी: 2197597)
आगंतुक पटल : 7