ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗಾಲ್ಯಾಂಡ್ ಜನತೆಗೆ ರಾಜ್ಯ ಉದಯ ದಿನದ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 01 DEC 2025 3:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾಗಾಲ್ಯಾಂಡ್ ಜನತೆಗೆ ರಾಜ್ಯ ಉದಯ ದಿನದ ಶುಭಾಶಯಗಳನ್ನು ಕೋರಿದ್ದಾರೆ. ಸೇವೆ, ಧೈರ್ಯ ಮತ್ತು ದಯೆ ಬೇರೂರಿರುವ ಅದ್ಭುತ ನಾಗಾ ಸಂಸ್ಕೃತಿಯನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ನಾಗಾಲ್ಯಾಂಡ್ ಜನರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ರಾಜ್ಯವು ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಮುಂದುವರಿಯಲಿ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ X ನಲ್ಲಿ ಹೀಗೆ ಹೇಳಿದ್ದಾರೆ.

“ನಾಗಾಲ್ಯಾಂಡ್ ಜನತೆಗೆ ಅವರ ರಾಜ್ಯೋತ್ಸವದ ಶುಭಾಶಯಗಳು. ಸೇವೆ, ಧೈರ್ಯ ಮತ್ತು ದಯೆ ಬೇರೂರಿರುವ ಅದ್ಭುತ ನಾಗಾ ಸಂಸ್ಕೃತಿಯನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತದೆ. ನಾಗಾಲ್ಯಾಂಡ್ ಜನರು ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ರಾಜ್ಯವು ಮತ್ತಷ್ಟು ಸಮೃದ್ಧಿ ಮತ್ತು ಪ್ರಗತಿಯೊಂದಿಗೆ ಮುಂದುವರಿಯಲಿ.’’

 

*****


(ಪ್ರಕಟಣೆ ಐ.ಡಿ.: 2197337) ವಿಸಿಟರ್ ಕೌಂಟರ್ : 39