56ನೇ ಐ.ಎಫ್.ಎಫ್.ಐ ನಲ್ಲಿ ಎನ್ ಎಫ್ ಡಿ ಸಿ-ಎನ್ ಎಫ್ ಎ ಐ ಮರುಸ್ಥಾಪಿಸಿದ ಮೂಕಿ ಚಲನಚಿತ್ರ "ಮುರಳಿವಾಲಾ" ದ ವಿಶೇಷ ಪ್ರದರ್ಶನ
ಮೂಕಿ ಯುಗದ ಮರುಸೃಷ್ಟಿಸಿದ ನೇರ ಸಂಗೀತ ಅನುಭವದೊಂದಿಗೆ ಪ್ರೇಕ್ಷಕರನ್ನು 1920ರ ದಶಕಕ್ಕೆ ಕರೆದೊಯ್ಯಲಾಯಿತು
ರಾಷ್ಟ್ರೀಯ ಚಲನಚಿತ್ರ ಪರಂಪರೆಯ ಮಿಷನ್ (ಎನ್ ಎಫ್ ಎಚ್ ಎಂ) ಅಡಿಯಲ್ಲಿ 18 ಮರುಸ್ಥಾಪಿಸಿದ ಶ್ರೇಷ್ಠ ಕೃತಿಗಳನ್ನು ಭಾರತೀಯ ಪನೋರಮಾ ವಿಶೇಷ ಪ್ಯಾಕೇಜ್ ನ ಭಾಗವಾಗಿ ಸಂಗ್ರಹಿಸಲಾಗಿದೆ
ಮರುಸ್ಥಾಪಿಸಲಾದ ಕ್ಲಾಸಿಕ್ ಗಳಲ್ಲಿ ಒಂದಾದ 'ಮುರಳಿವಾಲಾ' ವಿಶೇಷ ಪ್ರದರ್ಶನವು ಸಿನಿಪ್ರೇಮಿಗಳಿಗೆ ಐ.ಎಫ್.ಎಫ್.ಐ ನ 4ನೇ ದಿನವನ್ನು ಮಾಂತ್ರಿಕಗೊಳಿಸಿತು. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ (ಎನ್ ಎಫ್ ಎ ಐ) ರಾಷ್ಟ್ರೀಯ ಚಲನಚಿತ್ರ ಪರಂಪರೆಯ ಮಿಷನ್ (ಎನ್ ಎಫ್ ಎಚ್ ಎಂ) ಅಡಿಯಲ್ಲಿ 18 ಕ್ಲಾಸಿಕ್ ಗಳನ್ನು ಮತ್ತೆ ಜೀವಂತಗೊಳಿಸಿವೆ ಮತ್ತು ಈ ವರ್ಷದ ಐ ಎಫ್ ಎಫ್ ಐ ಗಾಗಿ ಭಾರತೀಯ ಪನೋರಮಾ ವಿಶೇಷ ಪ್ಯಾಕೇಜ್ ಅನ್ನು ಸಂಗ್ರಹಿಸಿವೆ. ಈ ಗುಚ್ಛವು ಹಿಂದಿ, ತೆಲುಗು, ಮಲಯಾಳಂ, ಬಂಗಾಳಿ ಮತ್ತು ಮರಾಠಿ ಸಿನಿಮಾಗಳನ್ನು ಒಳಗೊಂಡಿದೆ ಮತ್ತು ಕಠಿಣ ಆರ್ಕೈವಲ್ ಮಾನದಂಡಗಳು ಮತ್ತು ಪ್ರತಿ ಚಿತ್ರದ ಮೂಲ ಸೃಜನಶೀಲ ಉದ್ದೇಶಕ್ಕೆ ಆಳವಾದ ಗೌರವದೊಂದಿಗೆ ಸಂರಕ್ಷಿಸಲ್ಪಟ್ಟ ಕಲಾತ್ಮಕ ಅಭಿವ್ಯಕ್ತಿಯ ವಿಶಾಲತೆಯನ್ನು ಪ್ರತಿಬಿಂಬಿಸುತ್ತದೆ.

ಮೂಕಿ ಯುಗವನ್ನು ಪುನರ್ ನಿರ್ಮಾಣ
ಎನ್ ಎಫ್ ಡಿ ಸಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಕಾಶ್ ಮಗ್ದುಮ್ ಅವರು ಈ ಪ್ರದರ್ಶನದ ಉದ್ದೇಶವನ್ನು ವಿವರಿಸಿದರು. "ಇಂದಿನ ಪೀಳಿಗೆಗೆ ಮೂಕಿ ಚಲನಚಿತ್ರ ಅನುಭವವನ್ನು ಪುನರುಜ್ಜೀವನಗೊಳಿಸುವುದು ಇದರ ಉದ್ದೇಶವಾಗಿದೆ, ಅಲ್ಲಿ ಸಂಗೀತಗಾರರು ಮುಂದಿನ ಸಾಲಿನಲ್ಲಿ ಕುಳಿತು ಪ್ರೇಕ್ಷಕರಿಗೆ ನೇರ ಸಂಗೀತವನ್ನು ಪ್ರದರ್ಶಿಸುತ್ತಾರೆ ಮತ್ತು ಪ್ರತಿಭಾನ್ವಿತ ರಾಹುಲ್ ಅವರ ನೇತೃತ್ವದಲ್ಲಿ, ಈ ಕ್ಷಣವು ಅದಕ್ಕೆ ಅರ್ಹವಾದ ಅದೇ ಉತ್ಸಾಹ ಮತ್ತು ಭವ್ಯತೆಯಿಂದ ಜೀವಂತಗೊಳ್ಳುತ್ತದೆ ಎಂದು ನನಗೆ ಖಚಿತವಾಗಿದೆ” ಎಂದು ಅವರು ಹೇಳಿದರು.
"98 ವರ್ಷಗಳಷ್ಟು ಹಳೆಯದಾದ ಚಲನಚಿತ್ರದ ಸಂಗೀತವನ್ನು ಮರುಸೃಷ್ಟಿಸಿ ಅದನ್ನು ನೇರಪ್ರಸಾರ ಮಾಡುವುದು ನನಗೆ ಮತ್ತು ನನ್ನ ಇಡೀ ತಂಡಕ್ಕೆ ಒಂದು ದೊಡ್ಡ ಗೌರವ ಮತ್ತು ದೊಡ್ಡ ಸವಾಲಾಗಿತ್ತು. ಬಾಬುರಾವ್ ಅವರ 1927 ರ ಚಲನಚಿತ್ರ ಮತ್ತು ಅವರು ರಚಿಸಿದ ವಿಶೇಷ ಪರಿಣಾಮಗಳನ್ನು ನೀವು ಅನುಭವಿಸಲಿದ್ದೀರಿ. ನನ್ನ ತಂಡ ಮತ್ತು ನಾನು ಅದಕ್ಕೆ ನ್ಯಾಯ ಒದಗಿಸಬಹುದೆಂದು ನಾನು ಭಾವಿಸುತ್ತೇನೆ" ಎಂದು ಸಂಗೀತ ಸಂಯೋಜಕ ರಾಹುಲ್ ರಾನಡೆ ಹೇಳಿದರು.
ದಿವಂಗತ ಚಲನಚಿತ್ರ ನಿರ್ದೇಶಕ ಮತ್ತು ಕಲಾವಿದ ಬಾಬುರಾವ್ ಪೇಂಟರ್ ನಿರ್ಮಿಸಿದ ಮುರಳಿವಾಲಾ (1927) ಭಾರತೀಯ ಮೂಕಿ ಚಿತ್ರಗಳಲ್ಲಿ ಉಳಿದಿರುವ ಕೆಲವೇ ಕೆಲವು ಮತ್ತು ಎನ್ ಎಫ್ ಎಚ್ ಎಂ ನ ಅಪರೂಪದ ಸಂಪತ್ತಿನಲ್ಲಿ ಒಂದಾಗಿದೆ ಎಂಬುದು ಗಮನಾರ್ಹ ಈ ಪ್ರದರ್ಶನವು ಪ್ರೇಕ್ಷಕರಿಗೆ 1920 ರ ಚಲನಚಿತ್ರ ಪ್ರದರ್ಶನವನ್ನು ನೆನಪಿಸುವ ಸಂವೇದನಾಶೀಲ ಅನುಭವವನ್ನು ನೀಡಿತು. ಬಾಬುರಾವ್ ಪೇಂಟರ್ ಅವರ ಇಬ್ಬರು ಹೆಣ್ಣುಮಕ್ಕಳು ಪ್ರದರ್ಶನದಲ್ಲಿ ಭಾಗವಹಿಸಿದ್ದು ಗಮನಾರ್ಹವಾಗಿತ್ತು.

ಒಂದು ವಿಧ್ಯುಕ್ತ ಆಚರಣೆಯ ವರ್ಷ
ಈ ವರ್ಷದ ಸಂಗ್ರಹವು ಅಪಾರ ಐತಿಹಾಸಿಕ ಮಹತ್ವವನ್ನು ಹೊಂದಿದೆ, ಏಕೆಂದರೆ ಇದು ವಿ. ಶಾಂತಾರಾಮ್ ಅವರ 125 ವರ್ಷಗಳ ಪರಂಪರೆಯನ್ನು ಗೌರವಿಸುತ್ತದೆ, ಜೊತೆಗೆ ಗುರುದತ್, ರಾಜ್ ಖೋಸ್ಲಾ, ಋತ್ವಿಕ್ ಘಾಟಕ್, ಭೂಪೇನ್ ಹಜಾರಿಕಾ, ಪಿ. ಭಾನುಮತಿ, ಸಲೀಲ್ ಚೌಧರಿ ಮತ್ತು ಕೆ. ವೈಕುಂಠ್ ಅವರಂತಹ ಅತ್ಯುತ್ತಮ ಪ್ರತಿಭೆಗಳಿಗೆ ಶತಮಾನೋತ್ಸವದ ಗೌರವವನ್ನು ಅರ್ಪಿಸುತ್ತದೆ. ಈ ಉತ್ಸವವು ಎನ್ ಎಫ್ ಡಿ ಸಿ ಯ 50 ವರ್ಷಗಳನ್ನು ಆಚರಿಸುತ್ತದೆ, ಆಧುನಿಕ ಭಾರತೀಯ ಸಿನಿಮಾದ ಭೂದೃಶ್ಯವನ್ನು ರೂಪಿಸುವಲ್ಲಿ ಅದರ ಪರಿವರ್ತನಾತ್ಮಕ ಪಾತ್ರವನ್ನು ಗುರುತಿಸುತ್ತದೆ. ಶ್ಯಾಮ್ ಬೆನಗಲ್ ಅವರ ಸುಸ್ಮಾನ್ ಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸುವುದು, ಭಾರತೀಯ ಕಥೆ ಹೇಳುವ ಕಲೆಯ ಮೇಲೆ ಅವರ ದಾರ್ಶನಿಕ ಪ್ರಭಾವದ ಮೇಲೆ ಬೆಳಕು ಚೆಲ್ಲುತ್ತದೆ.
ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್
ನವೆಂಬರ್ 2016ರಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಪ್ರಾರಂಭಿಸಲ್ಪಟ್ಟ ರಾಷ್ಟ್ರೀಯ ಚಲನಚಿತ್ರ ಪರಂಪರೆಯ ಮಿಷನ್ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಪ್ರಮುಖ ಸಂರಕ್ಷಣಾ ಕಾರ್ಯಗಳಲ್ಲಿ ಒಂದಾಗಿದೆ. ಭಾರತದ ಸಿನಿಮೀಯ ಪರಂಪರೆಯನ್ನು ಕಾಪಾಡುವುದು ಇದರ ಕರ್ತವ್ಯವಾಗಿದೆ - ಕ್ಯಾಮೆರಾ ನೆಗೆಟಿವ್ ಗಳು ಮತ್ತು ಬಿಡುಗಡೆ ಮುದ್ರಣಗಳಿಂದ ಹಿಡಿದು ಅಪರೂಪದ ಆರ್ಕೈವಲ್ ನಿಧಿಗಳವರೆಗೆ, ಎಲ್ಲವನ್ನೂ ರಕ್ಷಿಸುವುದು, ಸಂರಕ್ಷಣೆ, ಡಿಜಿಟಲೀಕರಣ ಮತ್ತು ಪುನಃಸ್ಥಾಪನೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
2025 ರ ಐ ಎಫ್ ಎಫ್ ಐ ಗಾಗಿ ಮರುಸ್ಥಾಪಿಸಲಾದ ಭಾರತೀಯ ಚಲನಚಿತ್ರಗಳು ಈ ಸೂಕ್ಷ್ಮ ಪ್ರಯತ್ನಕ್ಕೆ ಸಾಕ್ಷಿಯಾಗಿದೆ, ಆಗಾಗ್ಗೆ ಚಲನಚಿತ್ರ ನಿರ್ಮಾಪಕರು, ಛಾಯಾಗ್ರಾಹಕರು ಅಥವಾ ಅವರ ನಿಕಟ ಸಹವರ್ತಿಗಳ ಮಾರ್ಗದರ್ಶನದಲ್ಲಿ, ಪ್ರತಿಯೊಂದು ಚೌಕಟ್ಟನ್ನು ಶ್ರಮದಾಯಕವಾಗಿ ಮರುಸ್ಥಾಪಿಸಲಾಗಿದೆ ಮತ್ತು ಸೂಕ್ಷ್ಮವಾಗಿ ಕಲರ್ ಗ್ರೇಡಿಂಗ್ ಮಾಡಲಾಗಿದೆ.
ಉತ್ಸವದ ಪ್ರಮುಖ ಅಂಶವೆಂದರೆ ರಿತ್ವಿಕ್ ಘಾಟಕ್ ಅವರ ಸುಬರ್ಣರೇಖಾವನ್ನು ಮರುಸ್ಥಾಪಿಸಲಾಗಿದೆ, ಇದನ್ನು ಎನ್ ಎಫ್ ಡಿ ಸಿ – ಎನ್ ಎಫ್ ಎ ಐ ಸಂಗ್ರಹದ 35mm ಮಾಸ್ಟರ್ ಪಾಸಿಟಿವ್ ನಿಂದ ಪುನರುಜ್ಜೀವನಗೊಳಿಸಲಾಗಿದೆ, ಅಂತಿಮ ಕಲರ್ ಗ್ರೇಡಿಂಗ್ ಅನ್ನು ಛಾಯಾಗ್ರಾಹಕ ಅವಿಕ್ ಮುಖ್ಯೋಪಾಧ್ಯಾಯ ಮೇಲ್ವಿಚಾರಣೆ ಮಾಡಿದರು.
ಮೂಲ ನೆಗೆಟಿವ್ ಸಂಪೂರ್ಣವಾಗಿ ಹಾನಿಗೊಳಗಾದ ನಂತರ ಸಂರಕ್ಷಿಸಲ್ಪಟ್ಟ 35mm ಬಿಡುಗಡೆ ಮುದ್ರಣದಿಂದ ಪುನಃಸ್ಥಾಪಿಸಲಾದ ಮುಜಾಫರ್ ಅಲಿಯವರ ಉಮ್ರಾವ್ ಜಾನ್, ಗ್ರೇಡಿಂಗ್ ಪ್ರಕ್ರಿಯೆಯಲ್ಲಿ ಅಲಿಯವರ ವೈಯಕ್ತಿಕ ಮೇಲ್ವಿಚಾರಣೆಯಲ್ಲಿತ್ತು, ಚಿತ್ರದ ವಿಶಿಷ್ಟ ಬಣ್ಣ ಸೌಂದರ್ಯವನ್ನು ಸಂಪೂರ್ಣವಾಗಿ ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸುತ್ತದೆ.
ಈ ಮರುಸ್ಥಾಪನೆಗಳು ಭಾರತದ ಅತ್ಯಂತ ಪ್ರಭಾವಶಾಲಿ ಸಿನಿಮಾ ವ್ಯಕ್ತಿಗಳ ಪರಂಪರೆಯನ್ನು ಗೌರವಿಸುತ್ತವೆ, ದೇಶದ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ಈ ಕೃತಿಗಳಲ್ಲಿರುವ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಕಲಾತ್ಮಕ ಕಥೆಗಳು ಹೊಸ ಪೀಳಿಗೆಯಲ್ಲಿ ಅನುರಣಿಸುವಂತೆ ನೋಡಿಕೊಳ್ಳುತ್ತವೆ.
ಭಾರತೀಯ ಪನೋರಮಾ ವಿಶೇಷ ಪ್ಯಾಕೇಜ್ ಗಾಗಿ ಸಂಗ್ರಹಿಸಲಾದ ಮರುಸ್ಥಾಪಿತ ಚಲನಚಿತ್ರಗಳ ಪಟ್ಟಿ
1. ಉಮ್ರಾವ್ ಜಾನ್ (ಮುಜಫರ್ ಅಲಿ - ಹಿಂದಿ/145 ನಿಮಿಷಗಳು/ 4ಕೆ ಡಿಸಿಪಿ)
2. ಮಲ್ಲಿಶ್ವರಿ (ಬಿ.ಎನ್. ರೆಡ್ಡಿ/ತೆಲುಗು/175 ನಿಮಿಷ/ 4ಕೆ ಡಿಸಿಪಿ)
3. ರುಡಾಲಿ (ಕಲ್ಪನಾ ಲಜ್ಮಿ/ ಹಿಂದಿ/128 ನಿಮಿಷಗಳು/ 4ಕೆ ಡಿಸಿಪಿ)
4. ಗಮನ್ – (ಮುಜಫರ್ ಅಲಿ / ಹಿಂದಿ/119 ನಿಮಿಷಗಳು/ 4ಕೆ ಡಿಸಿಪಿ)
5. ಫಿಯರ್ (ಋತ್ವಿಕ್ ಘಾಟಕ್/ಹಿಂದಿ/18 ನಿಮಿಷಗಳು/ 4ಕೆ ಡಿಸಿಪಿ)
6. ಸುಬರ್ಣರೇಖಾ (ಋತ್ವಿಕ್ ಘಾಟಕ್/ ಬೆಂಗಾಲಿ/143 ನಿಮಿಷಗಳು/ 4ಕೆ ಡಿಸಿಪಿ)
7. ಮುರಳಿವಾಲಾ – (ಬಾಬುರಾವ್ ಪೇಂಟರ್/ ಸೈಲೆಂಟ್/ 45 ನಿಮಿಷಗಳು)
8. ಪಾರ್ಟಿ (ಗೋವಿಂದ್ ನಿಹಲಾನಿ/ಹಿಂದಿ/118 ನಿಮಿಷಗಳು/ 2ಕೆ ಡಿಸಿಪಿ)
9. ಸಿಐಡಿ (ರಾಜ್ ಖೋಸ್ಲಾ/ಹಿಂದಿ/146 ನಿಮಿಷಗಳು/ 4K ಡಿಸಿಪಿ)
10. ಪ್ಯಾಸಾ (ಗುರುದತ್/ ಹಿಂದಿ/146 ನಿಮಿಷಗಳು/ 4ಕೆ ಡಿಸಿಪಿ)
11. ಏಕ್ ಡಾಕ್ಟರ್ ಕಿ ಮೌತ್ (ತಪನ್ ಸಿನ್ಹಾ/ಹಿಂದಿ/122 ನಿಮಿಷಗಳು/ 4ಕೆ ಡಿಸಿಪಿ)
12. ಏಕ್ ಹೋತಾ ವಿದೂಷಕ್ (ಜಬ್ಬರ್ ಪಟೇಲ್/ಮರಾಠಿ/168 ನಿಮಿಷ/ 4ಕೆ ಡಿಸಿಪಿ)
13. ಕಿರೀಡಂ (ಸಿಬಿ ಮಲಯಿಲ್/ ಮಲಯಾಳಂ/ 124 ನಿಮಿಷಗಳು/ 4ಕೆ ಡಿಸಿಪಿ)
14. ಡಾ. ಕೊಟ್ನಿಸ್ ಕಿ ಅಮರ್ ಕಹಾನಿ (ವಿ. ಶಾಂತಾರಾಮ್/ ಹಿಂದಿ/ 100 ನಿಮಿಷಗಳು/ 2ಕೆ ಡಿಸಿಪಿ)
15. ಸುಸ್ಮಾನ್ (ಶ್ಯಾಮ್ ಬೆನಗಲ್/ ಹಿಂದಿ/ 140 ನಿಮಿಷಗಳು/ 2ಕೆ ಡಿಸಿಪಿ)
16. ಮುಸಾಫಿರ್ (ಹೃಷಿಕೇಶ್ ಮುಖರ್ಜಿ/ಹಿಂದಿ/127 ನಿಮಿಷಗಳು/4ಕೆ ಡಿಸಿಪಿ)
17. ಶಹೀದ್ (ರಮೇಶ್ ಸೈಗಲ್/ಹಿಂದಿ/ 1948/ 4ಕೆ ಡಿಸಿಪಿ)
18. ಗೀತಾಂಜಲಿ (ಮಣಿರತ್ನಂ/ತೆಲುಗು/137 ನಿಮಿಷಗಳು/ 4ಕೆ ಡಿಸಿಪಿ)
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Post Link: https://x.com/PIB_Panaji/status/1991438887512850647?s=20
X Handles: @IFFIGoa, @PIB_India, @PIB_Panaji
*****
रिलीज़ आईडी:
2193631
| Visitor Counter:
5