ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿರಿಯ ನಟ ಶ್ರೀ ಧರ್ಮೇಂದ್ರ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 24 NOV 2025 3:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಗ್ಗಜ, ಹಿರಿಯ ನಟ ಶ್ರೀ ಧರ್ಮೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಇದರೊಂದಿಗೆ ಭಾರತೀಯ ಸಿನಿಮಾರಂಗದ ಯುಗವೊಂದು ಅಂತ್ಯವಾಗಿದೆ ಎಂದು ಬಣ್ಣಿಸಿದ್ದಾರೆ.

ಧರ್ಮೇಂದ್ರ ಅವರು ಪ್ರತಿಭಾನ್ವಿತ ಚಲನಚಿತ್ರ ನಟರಾಗಿದ್ದರು ಮತ್ತು ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಛಾಪು ಮೂಡಿಸಿ ಮತ್ತು ತನ್ನದೇ ಘನತೆಯನ್ನು ತಂದಕೊಟ್ಟ ಅದ್ಭುತ ನಟರಾಗಿದ್ದರು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಅವರ ಸಾಮರ್ಥ್ಯವು ಹಲವು ಪೀಳಿಗೆಗಳ ಅಸಂಖ್ಯಾತ ಜನರ ಹೃದಯದಲ್ಲಿ ನೆಲೆಸುವಂತೆ ಮಾಡಿದೆ.  

ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ತಾಲತಾಣ X ಖಾತೆಯಲ್ಲಿ ಹೀಗೆ ಹೇಳಿದ್ದಾರೆ.

“ಧರ್ಮೇಂದ್ರ ಅವರ ನಿಧನ ಭಾರತೀಯ ಚಿತ್ರರಂಗದಲ್ಲಿ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಅವರೊಬ್ಬ ಅಪ್ರತಿಮ ಚಲನಚಿತ್ರ ನಟರಾಗಿದ್ದರು, ಅವರು ತಾವು ನಿರ್ವಹಿಸಿದ ವೈವಿಧ್ಯಮಯ ಪಾತ್ರಗಳ ಮೂಲಕ ಛಾಪು ಮತ್ತು ಘನತೆಯನ್ನು ತಂದುಕೊಟ್ಟು, ಅಸಂಖ್ಯಾತ ಜನರ ಹೃದಯದಲ್ಲಿ ನೆಲೆಸಿದ್ದರು. ಧರ್ಮೇಂದ್ರ ಅವರ ಸರಳತೆ, ಮಾನವೀಯತೆ ಮತ್ತು ನಮ್ರತೆಯಿಂದಲೂ ಸಮಾನ ಮೆಚ್ಚುಗೆಗಳಿಸಿದ್ದಾರೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.’’

 

*****


(Release ID: 2193578) Visitor Counter : 6