ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ-2025ರಲ್ಲಿ ರೈತರೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 20 NOV 2025 12:59PM by PIB Bengaluru

ಕೃಷಿಕ: ವಣಕ್ಕಂ!

ಪ್ರಧಾನಮಂತ್ರಿ: ನಮಸ್ಕಾರ! ಇವರೆಲ್ಲರೂ ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದಾರೆಯೇ?

ಕೃಷಿಕ: ಹೌದು, ಸರ್.

ಕೃಷಿಕ: ಇದು ಸೌರಶಕ್ತಿಯಿಂದ ಒಣಗಿಸಿದ ಬಾಳೆಹಣ್ಣು.

ಪ್ರಧಾನಮಂತ್ರಿ: ಬಾಳೆಹಣ್ಣುಗಳನ್ನು ಕೊಯ್ಲು ಮಾಡಿದ ನಂತರ...

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ನೀವು ತ್ಯಾಜ್ಯವನ್ನು ಏನು ಮಾಡುತ್ತೀರಿ?

ಕೃಷಿಕ: ಇವೆಲ್ಲವೂ ಬಾಳೆಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು, ಇದು ತ್ಯಾಜ್ಯ... ಸರ್, ಇದು ಬಾಳೆಹಣ್ಣಿನ ತ್ಯಾಜ್ಯದಿಂದ ಬಂದಿದೆ; ಇದು ಬಾಳೆಹಣ್ಣಿನ ಮೌಲ್ಯವರ್ಧನೆಯಿಂದ ಬಂದಿದೆ, ಸರ್.

ಪ್ರಧಾನಮಂತ್ರಿ: ನಿಮ್ಮ ಉತ್ಪನ್ನವನ್ನು ಭಾರತದಾದ್ಯಂತ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದೀರಾ?

ಕೃಷಿಕ: ಹೌದು, ಸರ್

ಕೃಷಿಕ: ವಾಸ್ತವವಾಗಿ, ನಾವು ಇಲ್ಲಿ ಇಡೀ ತಮಿಳುನಾಡನ್ನು ಪ್ರತಿನಿಧಿಸುತ್ತಿದ್ದೇವೆ ಸರ್. ಎಲ್ಲಾ ರೈತ ಉತ್ಪಾದಕ ಕಂಪನಿಗಳು ಮತ್ತು ವೈಯಕ್ತಿಕ ರೈತರು ಸಹ ಇದರ ಭಾಗವಾಗಿದ್ದಾರೆ ಸರ್.

ಪ್ರಧಾನಮಂತ್ರಿ: ಸರಿ.

ಕೃಷಿಕ: ನಾವು ಎಲ್ಲವನ್ನೂ ಮಾಡುತ್ತೇವೆ: ಆನ್‌ಲೈನ್ ಮಾರಾಟ, ರಫ್ತು, ಮತ್ತು ಸೂಪರ್‌ಮಾರ್ಕೆಟ್‌ಗಳು ಸೇರಿದಂತೆ ಭಾರತದ ಸಂಪೂರ್ಣ ಸ್ಥಳೀಯ ಮಾರುಕಟ್ಟೆಯಲ್ಲೂ ನಾವು ಮಾರಾಟ ಮಾಡುತ್ತೇವೆ, ಸರ್.

ಪ್ರಧಾನಮಂತ್ರಿ: ಒಂದು ಎಫ್‌ಪಿಒನಲ್ಲಿ ಎಷ್ಟು ಜನರು ಒಟ್ಟಿಗೆ ಕೆಲಸ ಮಾಡುತ್ತಾರೆ?

ಕೃಷಿಕ: ಸಾವಿರ.

ಪ್ರಧಾನಮಂತ್ರಿ: ಒಂದು ಸಾವಿರ?

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ಓಹ್. ಇಡೀ ಪ್ರದೇಶದಲ್ಲಿ, ನೀವು ಬಾಳೆಹಣ್ಣನ್ನು ಮಾತ್ರ ಬೆಳೆಯುತ್ತೀರಾ ಅಥವಾ ನೀವು ವಿಭಿನ್ನ ಬೆಳೆಗಳನ್ನು ಬೆಳೆಯುತ್ತೀರಾ?

ಕೃಷಿಕ: ವಿವಿಧ ಪ್ರದೇಶಗಳಲ್ಲಿ, ವಿಭಿನ್ನ ವಿಶೇಷ ಬೆಳೆಗಳಿವೆ, ಸರ್. ಇದೀಗ, ನಮ್ಮಲ್ಲಿ ಜಿಐ ಉತ್ಪನ್ನಗಳಿವೆ.

ಪ್ರಧಾನಮಂತ್ರಿ: ಸರಿ, ನಿಮ್ಮ ಬಳಿಯೂ ಅದು ಇದೆ.

ಕೃಷಿಕ: 4 ವಿಧದ ಚಹಾಗಳಿವೆ. ಎಲ್ಲರಿಗೂ ಕಪ್ಪು ಚಹಾ ತಿಳಿದಿದೆ. ಇದು ಅದರಿಂದ ಬಂದಿದೆ... (ಸ್ಪಷ್ಟವಾಗಿಲ್ಲ). ನಾವು ಇದನ್ನು ಬಿಳಿ ಚಹಾ ಎಂದು ಕರೆಯುತ್ತೇವೆ. ಇದು ಊಲಾಂಗ್. ಇದು 40% ಫರ್ಮೆಂಟೆಡ್(ಹುದುಗಿಸಿದ) ಚಹಾ, ಊಲಾಂಗ್ ಚಹಾ ಮತ್ತು ಹಸಿರು ಚಹಾ.

ಪ್ರಧಾನಮಂತ್ರಿ: ಇತ್ತೀಚಿನ ದಿನಗಳಲ್ಲಿ, ಬಿಳಿ ಚಹಾವು ದೊಡ್ಡ ಮಾರುಕಟ್ಟೆ ಹೊಂದಿದೆ.

ಕೃಷಿಕ: ಹೌದು, ಹೌದು ಸರ್.

ಕೃಷಿಕ: ಬದನೆಕಾಯಿ - ಎಲ್ಲವೂ ನೈಸರ್ಗಿಕ ಕೃಷಿಯಲ್ಲಿದೆ.

ಪ್ರಧಾನಮಂತ್ರಿ: ಈ ಋತುವಿನಲ್ಲಿ, ಮಾವಿನ ಹಣ್ಣುಗಳು ಲಭ್ಯವಿದೆಯೇ...?

ಕೃಷಿಕ: ಹೌದು, ಮಾವು, ಹೌದು ಸರ್...

ಕೃಷಿಕ: ಆಫ್-ಸೀಸನ್ ಮಾವು...

ಪ್ರಧಾನಮಂತ್ರಿ: ಇತ್ತೀಚಿನ ದಿನಗಳಲ್ಲಿ, ಇದಕ್ಕೆ ದೊಡ್ಡ ಮಾರುಕಟ್ಟೆ ಇದೆಯೇ?

ಕೃಷಿಕ: ಮೊರಿಂಗ.

ಪ್ರಧಾನಮಂತ್ರಿ: ಮೊರಿಂಗ!

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ನೀವು ಮೊರಿಂಗ ಎಲೆಗಳನ್ನು ಏನು ಮಾಡುತ್ತೀರಿ?

ಕೃಷಿಕ: ನಾವು ಮೊರಿಂಗ ಎಲೆಯ ಪುಡಿ ತಯಾರಿಸಿ, ಅದನ್ನು ರಫ್ತು ಮಾಡುತ್ತೇವೆ ಸರ್.

ಪ್ರಧಾನಮಂತ್ರಿ: ಪುಡಿ ತುಂಬಾ...

ಕೃಷಿಕ: ಬೇಡಿಕೆಯಿದೆ.

ಪ್ರಧಾನಮಂತ್ರಿ: ಬೇಡಿಕೆ ತುಂಬಾ ಹೆಚ್ಚು.

ಕೃಷಿಕ: ಹೌದು ಸರ್.

ಪ್ರಧಾನಮಂತ್ರಿ: ಮುಖ್ಯವಾಗಿ ಯಾವ ದೇಶಗಳು ಇದನ್ನು ಖರೀದಿಸುತ್ತವೆ?

ಕೃಷಿಕ: ಅಮೆರಿಕ, ಆಫ್ರಿಕಾ ದೇಶಗಳು ಮತ್ತು ಜಪಾನ್ ಪ್ರಮುಖ ಮಾರುಕಟ್ಟೆಗಳು. ನಮಗೆ ಆಗ್ನೇಯ ಏಷ್ಯಾದಿಂದಲೂ ಉತ್ತಮ ಬೇಡಿಕೆ ಸಿಗುತ್ತಿದೆ...

ಕೃಷಿಕ: ವಾಸ್ತವವಾಗಿ, ಇವೆಲ್ಲವೂ ಜಿಐ ಉತ್ಪನ್ನಗಳು. ನಾವು ಇಲ್ಲಿ ತಮಿಳುನಾಡಿನ 25 ಜಿಐ ಉತ್ಪನ್ನಗಳನ್ನು ಪ್ರದರ್ಶಿಸಿದ್ದೇವೆ. ಕುಂಭಕೋಣಂ ವೀಳ್ಯದ ಎಲೆ, ಮಧುರೈ ಮಲ್ಲಿಗೆ, ಮತ್ತು ಇದು ಕೂಡ ಮಧುರೈನದ್ದು ಸರ್. ಇದರಂತೆ, ಈ ಎಲ್ಲಾ ವಸ್ತುಗಳು ಇಲ್ಲಿವೆ...

ಪ್ರಧಾನಮಂತ್ರಿ: ಇದಕ್ಕೆ ಮಾರುಕಟ್ಟೆ ಎಲ್ಲಿದೆ?

ಕೃಷಿಕ: ಭಾರತದಾದ್ಯಂತ ಸರ್. ತಮಿಳುನಾಡಿನಲ್ಲಿ, ಇದನ್ನು ಪ್ರತಿಯೊಂದು ಕಾರ್ಯದಲ್ಲೂ ಬಳಸುತ್ತಾರೆ...

ಪ್ರಧಾನಮಂತ್ರಿ: ನನ್ನ ಕಾಶಿಯಲ್ಲಿರುವ ಜನರು ಇದನ್ನು ತೆಗೆದುಕೊಳ್ಳುತ್ತಾರೆಯೇ ಅಥವಾ ಇಲ್ಲವೇ? ಅವರು ನಿಮಗೆ ಬನಾರಸಿ ಪಾನ್ ನೀಡುತ್ತಾರೆಯೇ?

ಕೃಷಿಕ: ಹೌದು ಸರ್.

ಕೃಷಿಕ: ಇದು ಪಳನಿ ಮುರುಗ...

ಕೃಷಿಕ: ಕಡಿಮೆ... 100ಕ್ಕೂ ಹೆಚ್ಚು ಉತ್ಪನ್ನಗಳಿವೆ ಸರ್. ನಮ್ಮ ಕಡೆಯಿಂದ, ಜೇನುತುಪ್ಪದಿಂದ ಪ್ರಾರಂಭಿಸಿ...

ಪ್ರಧಾನಮಂತ್ರಿ: ಅದರ ಮಾರುಕಟ್ಟೆ?

ಕೃಷಿಕ: ತುಂಬಾ ದೊಡ್ಡದು ಸರ್. ಬೇಡಿಕೆ ತುಂಬಾ ಹೆಚ್ಚಾಗಿದೆ. ಜೇನುತುಪ್ಪಕ್ಕೆ ನಮಗೆ ಜಾಗತಿಕ ಮಾರುಕಟ್ಟೆ ಇದೆ.

ಕೃಷಿಕ: ನಮ್ಮಲ್ಲಿ ಸಾಂಪ್ರದಾಯಿಕ ತಳಿಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಭತ್ತದ ತಳಿಗಳಿವೆ... ಮೌಲ್ಯದ ದೃಷ್ಟಿಯಿಂದ ಸಿರಿಧಾನ್ಯಕ್ಕೆ ಸಮಾನ, ಸರ್...

ಪ್ರಧಾನಮಂತ್ರಿ: ಭತ್ತದಲ್ಲಿ, ತಮಿಳುನಾಡು ಏನು ಸಾಧಿಸಿದೆ...

ಕೃಷಿಕ: ಹೌದು, ಸರ್.

ಪ್ರಧಾನಮಂತ್ರಿ: ಜಗತ್ತು ಇನ್ನೂ ಅದನ್ನು ಸರಿಗಟ್ಟಲು ಸಾಧ್ಯವಾಗಿಲ್ಲ.

ಕೃಷಿಕ: ಅದು ನಿಜ, ಸರ್.

ಪ್ರಧಾನಮಂತ್ರಿ: ಹೌದು.

ಕೃಷಿಕ: ಸರ್, ಇದರಲ್ಲಿ ನಾವು ಭತ್ತ, ಅಕ್ಕಿ ಮತ್ತು ಅದರಿಂದ ತಯಾರಿಸಿದ ಎಲ್ಲಾ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು ಮಾಡುತ್ತೇವೆ. ಅದೆಲ್ಲವನ್ನೂ ಈಗ ಇಲ್ಲಿ ಪ್ರದರ್ಶಿಸಲಾಗಿದೆ.

ಪ್ರಧಾನಮಂತ್ರಿ: ಯುವ ಪೀಳಿಗೆಯ ರೈತರು ತರಬೇತಿಗಾಗಿ ಬರುತ್ತಾರೆಯೇ?

ಕೃಷಿಕ: ಹೌದು, ಸರ್. ಈಗ ಸಂಖ್ಯೆ ತುಂಬಾ ಹೆಚ್ಚಾಗಿದೆ.

ಪ್ರಧಾನಮಂತ್ರಿ: ಅವರು ಪ್ರಶ್ನೆಗಳನ್ನು ಕೇಳಬೇಕು. ಅವರಿಗೆ ಮೊದಲಿಗೆ ಅರ್ಥವಾಗದಿರಬಹುದು. ಪಿಎಚ್‌ಡಿ ಮಾಡಿದ ವ್ಯಕ್ತಿ ಈ ಕೆಲಸ ಮಾಡುತ್ತಿದ್ದಾರೆ! ಅವರು ಕೃಷಿಯಲ್ಲಿರುವ ಪ್ರಯೋಜನಗಳನ್ನು ನೋಡಿದಾಗ, ನೀವು ಅವರಿಗೆ ಏನು ವಿವರಿಸುತ್ತೀರಿ?

ಕೃಷಿಕ: ಮೊದಲು, ಜನರು ಅವರನ್ನು ಹುಚ್ಚರಂತೆ ನೋಡುತ್ತಿದ್ದರು. ಆದರೆ ಈಗ ಅವರು ತಿಂಗಳಿಗೆ 2 ಲಕ್ಷ ರೂಪಾಯಿ ಗಳಿಸುತ್ತಾರೆ. ಅವರು ಕಲೆಕ್ಟರ್‌ಗಿಂತ ಹೆಚ್ಚು ಸಂಪಾದಿಸುತ್ತಾರೆ ಸರ್. ಅದಕ್ಕಾಗಿಯೇ ಜನರು ಈಗ ಅವರನ್ನು ಸ್ಫೂರ್ತಿ ಎಂದು ಪರಿಗಣಿಸುತ್ತಾರೆ.

ಪ್ರಧಾನಮಂತ್ರಿ: ಹಾಗಾದರೆ ಈಗ ಎಲ್ಲಾ ಕಲೆಕ್ಟರ್‌ಗಳು (ಕೃಷಿಗೆ) ಬರುತ್ತಾರೆ.

ಕೃಷಿಕ: ನಾವು ನಮ್ಮ ಜಮೀನಿನಲ್ಲಿ 7,000 ರೈತರಿಗೆ ತರಬೇತಿ ನೀಡಿದ್ದೇವೆ. ಇದು ನೈಸರ್ಗಿಕ ಕೃಷಿ ಯೋಜನೆ(ಟಿಎನ್‌ಎಯು) ಅಡಿ, ಗುರುತಿಸಲ್ಪಟ್ಟ ಮಾದರಿ ಕೃಷಿ ಆಗಿದೆ. 3,000 ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.

ಪ್ರಧಾನಮಂತ್ರಿ: ನಿಮ್ಮ ಉತ್ಪನ್ನಗಳಿಗೆ ನೀವು ಮಾರುಕಟ್ಟೆ ಪಡೆಯುತ್ತೀರಾ?

ಕೃಷಿಕ: ನಾವು ನೇರವಾಗಿ ಮಾರುಕಟ್ಟೆ ಮಾಡಿ ಇತರ ದೇಶಗಳಿಗೆ ರಫ್ತು ಮಾಡುತ್ತೇವೆ. ನಂತರ ನಾವು ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುತ್ತೇವೆ - ಎಣ್ಣೆ, ಕೂದಲಿನ ಎಣ್ಣೆ, ಕೊಬ್ಬರಿ, ಸೋಪ್.

ಪ್ರಧಾನಮಂತ್ರಿ: ನಿಮ್ಮ ಕೂದಲಿನ ಎಣ್ಣೆಯನ್ನು ಯಾರು ಖರೀದಿಸುತ್ತಾರೆ?

ಪ್ರಧಾನಮಂತ್ರಿ: ನಾನು ಗುಜರಾತ್‌ನಲ್ಲಿದ್ದಾಗ, ನಾನು ಜಾನುವಾರು ವಸತಿ ನಿಲಯ ಎಂಬ ಪರಿಕಲ್ಪನೆ ಅಭಿವೃದ್ಧಿಪಡಿಸಿದ್ದೆ.

ಕೃಷಿಕ: ಹೌದು.

ಪ್ರಧಾನಮಂತ್ರಿ: ಎಲ್ಲಾ ಹಳ್ಳಿಯ ಜಾನುವಾರುಗಳನ್ನು ಜಾನುವಾರು ವಸತಿ ನಿಲಯದಲ್ಲಿ ಇಡಬೇಕು.

ಕೃಷಿಕ: ಹೌದು.

ಪ್ರಧಾನಮಂತ್ರಿ: ಆಗ ಗ್ರಾಮವು ಸ್ವಚ್ಛವಾಗಿರುತ್ತದೆ, ಮತ್ತು ನಿರ್ವಹಣೆಗೆ ನಿಮಗೆ ಒಬ್ಬ ವೈದ್ಯರು ಮತ್ತು 4-5 ಜನರು ಮಾತ್ರ ಬೇಕಾಗುತ್ತದೆ. ಇದನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ.

ಕೃಷಿಕ: ಇದೆಲ್ಲವೂ... ನಾವು ಸಾಮೂಹಿಕ ಉತ್ಪಾದನೆ ಮಾಡಿ, ಸಮೀಪದ ರೈತರಿಗೆ ನೀಡುತ್ತೇವೆ...

ಪ್ರಧಾನಮಂತ್ರಿ: ನೀವು ಅದನ್ನು ರೈತರಿಗೆ ನೀಡಿ.

 

*****

 


(Release ID: 2192421) Visitor Counter : 5