ಪ್ರಧಾನ ಮಂತ್ರಿಯವರ ಕಛೇರಿ
ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಆತ್ಮೀಯ ಸ್ವಾಗತ ಸ್ವೀಕರಿಸಿದ ಪ್ರಧಾನಮಂತ್ರಿ
ಪ್ರಶಾಂತಿ ನಿಲಯಂನಲ್ಲಿ ಶ್ರೀ ಸತ್ಯ ಸಾಯಿ ಬಾಬಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಆಯೋಜಿಸಿದ್ದ ಗೋದಾನ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಮಂತ್ರಿ
Posted On:
19 NOV 2025 1:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಯಿ ರಾಮನ ದಿವ್ಯ ಮಂತ್ರ ಘೋಷಗಳ ನಡುವೆ ಆಂಧ್ರಪ್ರದೇಶದ ಪುಟ್ಟಪರ್ತಿಯನ್ನು ತಲುಪಿದರು ಮತ್ತು ಅವರಿಗೆ ಆತ್ಮೀಯ ಸ್ವಾಗತ ದೊರಕಿತು.
ಪ್ರಶಾಂತಿ ನಿಲಯಂ ನ ಸಾಯಿ ಕುಲ್ವಂತ್ ಸಭಾಂಗಣದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರಿಗೆ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು ಮತ್ತು ನಂತರ ದರ್ಶನಕ್ಕಾಗಿ ಓಂಕಾರ ಸಭಾಂಗಣಕ್ಕೆ ತೆರಳಿದರು. ಈ ಪವಿತ್ರ ಸ್ಥಳದಲ್ಲಿರುವುದು ಶ್ರೀ ಸತ್ಯ ಸಾಯಿ ಬಾಬಾ ಅವರ ಅಪರಿಮಿತ ಕರುಣೆ ಮತ್ತು ಮಾನವೀಯತೆಯನ್ನು ಸೂಚಿಸುವ ಅವರ ಜೀವಮಾನದ ಬದ್ಧತೆಯನ್ನು ನೆನಪಿಸುತ್ತದೆ ಎಂದು ಅವರು ಹೇಳಿದರು. ಶ್ರೀ ಸತ್ಯ ಸಾಯಿ ಬಾಬಾ ಅವರ ನಿಸ್ವಾರ್ಥ ಸೇವೆಯ ಸಂದೇಶವು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಮತ್ತು ಸ್ಫೂರ್ತಿಯನ್ನು ನೀಡುತ್ತಲೇ ಇದೆ ಎಂದು ಅವರು ಹೇಳಿದರು.
ಪ್ರಾಣಿ ಕಲ್ಯಾಣ ವಲಯದಲ್ಲಿ ಮಹತ್ವದ ಕೆಲಸ ಸೇರಿದಂತೆ ಹಲವು ಆದರ್ಶ ಉಪಕ್ರಮಗಳನ್ನು ಕೈಗೊಂಡಿರುವ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಆಯೋಜಿಸಿದ್ದ ಗೋದಾನ ಸಮಾರಂಭದಲ್ಲಿಯೂ ಪ್ರಧಾನಮಂತ್ರಿ ಭಾಗವಹಿಸಿದ್ದರು. ಸಮಾರಂಭದ ಭಾಗವಾಗಿ ಗಿರ್ ತಳಿ ಹಸುಗಳು ಸೇರಿದಂತೆ ಹಲವು ತಳಿಯ ಹಸುಗಳನ್ನು ರೈತರಿಗೆ ನೀಡಲಾಯಿತು. ಪ್ರಧಾನಮಂತ್ರಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು ಮತ್ತು ಶ್ರೀ ಸತ್ಯ ಸಾಯಿ ಬಾಬಾ ಅವರ ಆದರ್ಶಗಳನ್ನು ಅನುಸರಿಸಿ ಎಲ್ಲರೂ ಸಮಾಜದ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ಅವರು ಪ್ರತ್ಯೇಕ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ;
“ಸಾಯಿ ರಾಮನ ದಿವ್ಯ ಮಂತ್ರಗಳ ನಡುವೆ, ಆಂಧ್ರಪ್ರದೇಶದ ಪುಟ್ಟಪರ್ತಿಯನ್ನು ತಲುಪಿ, ಆತ್ಮೀಯ ಸ್ವಾಗತ ಪಡೆದೆನು.’’
“ಪ್ರಶಾಂತಿ ನಿಲಯಂನ ಸಾಯಿ ಕುಲ್ವಂತ್ ಸಭಾಂಗಣದಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಅವರಿಗೆ ಗೌರವ ನಮನ ಸಲ್ಲಿಸಿ, ದರ್ಶನಕ್ಕಾಗಿ ಓಂಕಾರ್ ಸಭಾಂಗಣಕ್ಕೆ ತೆರಳಿದೆನು. ಈ ಪವಿತ್ರ ಸ್ಥಳದಲ್ಲಿರುವುದು ಅವರ ಅಪರಿಮಿತ ಕರುಣೆ ಮತ್ತು ಮಾನವೀಯತೆಯನ್ನು ಸೂಚಿಸುವ ಅವರ ಜೀವಮಾನದ ಬದ್ಧತೆಯನ್ನು ನೆನೆಪಿಸುತ್ತದೆ. ಅವರ ನಿಸ್ವಾರ್ಥ ಸೇವೆಯ ಸಂದೇಶವು ಲಕ್ಷಾಂತರ ಜನರಿಗೆ ಮಾರ್ಗದರ್ಶನ ಮತ್ತು ಸ್ಫೂರ್ತಿ ನೀಡುತ್ತಲೇ ಇದೆ.’’
“ಶ್ರೀ ಸತ್ಯ ಸಾಯಿ ಕೇಂದ್ರ ಟ್ರಸ್ಟ್ ಅನೇಕ ಆದರ್ಶ ಕಾರ್ಯಗಳನ್ನು ಮಾಡುತ್ತಿದೆ, ಅದರಲ್ಲಿ ಪ್ರಾಣಿ ಕಲ್ಯಾಣದ ಮೇಲೆ ಹೆಚ್ಚಿನ ಗಮನಹರಿಸಿದೆ. ಇಂದು ರೈತರಿಗೆ ಹಸುಗಳನ್ನು ವಿತರಿಸಲಾಗುತ್ತಿರುವ ಗೋದಾನ ಸಮಾರಂಭದಲ್ಲಿ ಭಾಗವಹಿಸಿದೆ. ಕೆಳಗಿನ ಚಿತ್ರಗಳಲ್ಲಿರುವ ಹಸುಗಳು ಗಿರ್ ತಳಿಯ ಹಸುಗಳು! ಶ್ರೀ ಸತ್ಯ ಸಾಯಿ ಬಾಬಾ ತೋರಿಸಿರುವ ಮಾರ್ಗದಲ್ಲಿ ನಾವೆಲ್ಲರೂ ನಮ್ಮ ಸಮಾಜದ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸೋಣ.”
*****
(Release ID: 2191665)
Visitor Counter : 9