ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದಲ್ಲಿ ಬುಲೆಟ್ ರೈಲು ನಿರ್ಮಿಸುತ್ತಿರುವ ತಂಡದೊಂದಿಗೆ ಗುಜರಾತ್‌ನ ಸೂರತ್‌ನಲ್ಲಿ ಪ್ರಧಾನಮಂತ್ರಿ ಸಂವಾದ

Posted On: 16 NOV 2025 3:27PM by PIB Bengaluru

ಬುಲೆಟ್ ರೈಲು ಉದ್ಯೋಗಿ: ಬುಲೆಟ್ ರೈಲು ನಮ್ಮ ಗುರುತು. ಈ ಸಾಧನೆ ಮೋದಿ ಜಿ, ನಿಮಗೆ ಮತ್ತು ನಮಗೆ ಸೇರಿದ್ದು.

ಪ್ರಧಾನಮಂತ್ರಿ: ನಿಮಗೆ ಏನು ಅನಿಸುತ್ತಿದೆ? ವೇಗ ಸರಿಯಾಗಿದೆಯೇ? ನೀವು ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ ಕೆಲಸ ಮಾಡುತ್ತಿದ್ದೀರಾ ಅಥವಾ ನಿಮಗೆ ಏನಾದರೂ ತೊಂದರೆಗಳು ಎದುರಾಗಿವೆಯೇ?

ಬುಲೆಟ್ ಟ್ರೈನ್ ಉದ್ಯೋಗಿ: ಇಲ್ಲ ಸರ್, ನಮಗೆ ಯಾವುದೇ ತೊಂದರೆ ಅಥವಾ ಸಮಸ್ಯೆಗಳಿಲ್ಲ.

ಪ್ರಧಾನಮಂತ್ರಿ: ನೀವು ಏನು ಹೇಳಲು ಬಯಸುತ್ತೀರಿ?

ಬುಲೆಟ್ ಟ್ರೈನ್ ಉದ್ಯೋಗಿ: ನಾನು ಕೇರಳದವನು. ನಾನು ಸೆಕ್ಷನ್-2, ನವಸಾರಿಯ ನಾಯ್ಸ್ ಬ್ಯಾರಿಯರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನ ಮಂತ್ರಿ: ನೀವು ಗುಜರಾತ್ ಗೆ ಮೊದಲ ಬಾರಿಗೆ ಬಂದಿದ್ದೀರಾ?

ಬುಲೆಟ್ ಟ್ರೈನ್ ಉದ್ಯೋಗಿ: ಹೌದು ಸರ್. ನಾನು ಇಲ್ಲಿ ನಾಯ್ಸ್ ಬ್ಯಾರಿಯರ್ ಫ್ಯಾಕ್ಟರಿಯ ಸೆಕ್ಷನ್ -2ರಲ್ಲಿ ಕೆಲಸ ಮಾಡುತ್ತಿದ್ದು, ರೋಬೋಟಿಕ್ ಘಟಕವನ್ನು ನೋಡಿಕೊಳ್ಳುತ್ತಿದ್ದೇನೆ.  ನಾಯ್ಸ್ ಬ್ಯಾರಿಯರ್ ನ ರಿಬಾರ್ ಕೇಜ್(ರಿಬಾರ್ ಕೇಜ್ ಎಂದರೆ ನಿರ್ಮಾಣದಲ್ಲಿ ಕಾಂಕ್ರೀಟ್ ಬಲಪಡಿಸಲು ಬಳಸಲಾಗುವ ಉಕ್ಕಿನ ಬಾರ್‌ಗಳ(ರಿಬಾರ್) ಚೌಕಟ್ಟು). ಇದೆ, ಅಲ್ಲಿ ನಾವು ರೋಬೋಟ್‌ಗಳ ಸಹಾಯದಿಂದ ಅದನ್ನು ವೆಲ್ಡಿಂಗ್ ಮಾಡುತ್ತಿದ್ದೇವೆ.

ಪ್ರಧಾನಮಂತ್ರಿ: ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ಭಾಗವಾಗಿರುವ ಈ ಬುಲೆಟ್ ರೈಲು ನಿರ್ಮಿಸುವ ಬಗ್ಗೆ ನಿಮಗೆ ಏನನಿಸುತ್ತದೆ? ನೀವು ವೈಯಕ್ತಿಕವಾಗಿ ಏನು ಯೋಚಿಸುತ್ತೀರಿ? ನಿಮ್ಮ ಕುಟುಂಬಕ್ಕೆ ನೀವು ಏನು ಹೇಳುತ್ತೀರಿ?

ಬುಲೆಟ್ ಟ್ರೈನ್ ಉದ್ಯೋಗಿ: ಸರ್ ಇದು ಕನಸಿನಂತೆ ಭಾಸವಾಗುತ್ತಿದೆ. ನಾನು ಈಗ ಮಾಡುತ್ತಿರುವ ಕೆಲಸವು ಭವಿಷ್ಯದಲ್ಲಿ ತುಂಬಾ ಉಪಯುಕ್ತವಾಗಿರುತ್ತದೆ. ಇದು ನನ್ನ ಕುಟುಂಬಕ್ಕೆ ಮತ್ತು ನನಗೆ ಹೆಮ್ಮೆಯ ಕ್ಷಣವಾಗಿದೆ ಸರ್.

ಪ್ರಧಾನಮಂತ್ರಿ: ನೋಡಿ, "ನಾನು ನನ್ನ ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ, ರಾಷ್ಟ್ರಕ್ಕೆ ಹೊಸದನ್ನು ನೀಡುತ್ತಿದ್ದೇನೆ" ಎಂದು ನೀವು ಒಳಗಿನಿಂದ ಭಾವಿಸದ ಹೊರತು, ಆ ಕೆಲಸಕ್ಕೆ ಅದೇ ಅರ್ಥವಿರುವುದಿಲ್ಲ. ಮೊದಲ ಬಾಹ್ಯಾಕಾಶ ಉಪಗ್ರಹವನ್ನು ಉಡಾವಣೆ ಮಾಡಿದ ವ್ಯಕ್ತಿಗೆ ಹಾಗೆ ಅನಿಸಿರಬೇಕು, ಆದರೆ ಇಂದು ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ.

ಬುಲೆಟ್ ಟ್ರೈನ್ ಉದ್ಯೋಗಿ: ನಮಸ್ತೆ ಸರ್, ನನ್ನ ಹೆಸರು ಶ್ರುತಿ. ನಾನು ಬೆಂಗಳೂರಿನವಳು, ನಾನು ಲೀಡ್ ಎಂಜಿನಿಯರಿಂಗ್ ಮ್ಯಾನೇಜರ್. ನಾನು ವಿನ್ಯಾಸ ಮತ್ತು ಎಂಜಿನಿಯರಿಂಗ್ ನಿಯಂತ್ರಣವನ್ನು ನೋಡಿಕೊಳ್ಳುತ್ತೇನೆ. ನೀವು ಹೇಳಿದಂತೆ, ಯಾವುದೇ ಆರಂಭಿಕ ಯೋಜನೆ ಮತ್ತು ಅನುಷ್ಠಾನ ಸಂಭವಿಸಿದರೂ, ಅದು ಆರಂಭಿಕ ಹಂತಗಳಲ್ಲಿ ಪ್ರಾರಂಭವಾಗುತ್ತದೆ. ನಂತರ ನಾವು ಕಾರ್ಯಗತಗೊಳಿಸಲು ಸಾಗುವಾಗ, ಪ್ರತಿ ಹಂತದಲ್ಲೂ ಸಾಧಕ-ಬಾಧಕಗಳನ್ನು ಪರಿಶೀಲಿಸುತ್ತೇವೆ. ಏನಾದರೂ ಕೆಲಸ ಮಾಡದಿದ್ದರೆ ನಾವು ಕೇಳುತ್ತೇವೆ: ಅದು ಏಕೆ ಕೆಲಸ ಮಾಡುತ್ತಿಲ್ಲ? ಮೊದಲು ನಾವು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇವೆ. ಆಗಲೂ ನಮಗೆ ಸಾಧ್ಯವಾಗದಿದ್ದರೆ, ನಾವು ಪರ್ಯಾಯ ಪರಿಹಾರಗಳನ್ನು ಹುಡುಕುತ್ತೇವೆ. ನಾವು ಹಂತ ಹಂತವಾಗಿ ಪ್ರಗತಿ ಹೊಂದುವುದು ಹೀಗೆಯೇ ಸರ್.

ಪ್ರಧಾನಮಂತ್ರಿ: ನಿಮ್ಮ ಅನುಭವಗಳನ್ನು ದಾಖಲಿಸಿ, ಒಂದು ರೀತಿಯ "ನೀಲಿ ಪುಸ್ತಕ"ವನ್ನು ಸಿದ್ಧಪಡಿಸಿದರೆ, ನಾವು ಹೆಚ್ಚಿನ ಬುಲೆಟ್ ರೈಲುಗಳನ್ನು ನಿರ್ಮಿಸಲು ಸಾಗುತ್ತಿರುವಾಗ ಅದು ದೇಶಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ. ಪ್ರತಿ ಬಾರಿಯೂ ಎಲ್ಲರೂ ಮೊದಲಿನಿಂದ ಪ್ರಾರಂಭಿಸಬೇಕೆಂದು ನಾವು ಬಯಸುವುದಿಲ್ಲ. ಇಲ್ಲಿಂದ ಕಲಿತ ಪಾಠಗಳನ್ನು ಬೇರೆಡೆ ಪುನರಾವರ್ತಿಸಬೇಕು. ಆದರೆ ಒಂದು ನಿರ್ದಿಷ್ಟ ವಿಧಾನವನ್ನು ಏಕೆ ಬಳಸಲಾಗುತ್ತದೆ ಎಂಬುದರ ಬಗ್ಗೆ ಜ್ಞಾನವಿದ್ದಾಗ ಮಾತ್ರ ಪುನರಾವರ್ತನೆ ಸಾಧ್ಯ. ಇಲ್ಲದಿದ್ದರೆ ಜನರು ಅರ್ಥ ಮಾಡಿಕೊಳ್ಳದೆ ಸರಳವಾಗಿ ನಕಲು ಮಾಡುತ್ತಾರೆ. ನೀವು ಅಂತಹ ದಾಖಲೆಯನ್ನು ನಿರ್ವಹಿಸಿದರೆ, ಅದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಸಹ ಸಹಾಯ ಮಾಡುತ್ತದೆ. ನೀವು ನಿಮ್ಮ ಜೀವನವನ್ನು ಇಲ್ಲಿ ಅರ್ಪಿಸುತ್ತೀರಿ ಮತ್ತು ರಾಷ್ಟ್ರಕ್ಕಾಗಿ ಅಮೂಲ್ಯವಾದದ್ದನ್ನು ಬಿಟ್ಟು ಹೋಗುತ್ತೀರಿ.

ಬುಲೆಟ್ ರೈಲು ಉದ್ಯೋಗಿ: ನಮಗೆ ಖ್ಯಾತಿಯಾಗಲಿ ಅಥವಾ ಪ್ರತಿಫಲವಾಗಲಿ ಬೇಡವೇ ಬೇಡ. ರಾಷ್ಟ್ರದ ಪ್ರಗತಿ ಮಾತ್ರ ನಮಗೆ ಬೇಕು. ಅದೇ ನಮ್ಮ ಆಸೆಯಾಗಿದೆ.

ಪ್ರಧಾನಮಂತ್ರಿ: ವಾಹ್!

ಬುಲೆಟ್ ರೈಲು ಉದ್ಯೋಗಿ: ಮೋದಿ ಜಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ದೇಶದ ಹೆಸರು ಯಾವಾಗಲೂ ಮತ್ತೆ ಮತ್ತೆ ಮೇಲೇರಲಿ. ಬುಲೆಟ್ ರೈಲು ನಮ್ಮ ಗುರುತು, ಬುಲೆಟ್ ರೈಲು ನಮ್ಮ ಗುರುತು. ಈ ಸಾಧನೆ ನಿಮ್ಮದು ಮತ್ತು ನಮ್ಮದು, ಮೋದಿ ಜಿ.

 

*****


(Release ID: 2190713) Visitor Counter : 8