ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭೂತಾನ್‌ನ ನಾಲ್ಕನೇ ದೊರೆಯ 70ನೇ ಹುಟ್ಟುಹಬ್ಬದ ಸ್ಮರಣಾರ್ಥ ಥಿಂಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ತುಣುಕುಗಳು 

Posted On: 11 NOV 2025 5:24PM by PIB Bengaluru

ಭೂತಾನ್‌ ದೇಶದ ನಾಲ್ಕನೇ ದೊರೆಗಳ 70ನೇ ವರ್ಷದ ಹುಟ್ಟುಹಬ್ಬದ ಸ್ಮರಣಾರ್ಥ ಥಿಂಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಾವು ಮಾಡಿದ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ : 

''ದೆಹಲಿಯಲ್ಲಿ ನಡೆದ ಭೀಕರ ಸ್ಫೋಟವು ಎಲ್ಲರಿಗೂ ತೀವ್ರ ನೋವುಂಟು ಮಾಡಿದೆ. ಭಾರತವು ಈ ಸಂದರ್ಭದಲ್ಲಿ ಸಂತ್ರಸ್ತರ ಜೊತೆ ನಿಲ್ಲುತ್ತದೆ. 

ತನಿಖಾ ಸಂಸ್ಥೆಗಳು ಘಟನೆಯ ಸಂಪೂರ್ಣ ಪಿತೂರಿಯ ಆಳವನ್ನು ಹುಡುಕಿ ತೆಗೆಯುತ್ತದೆ ಎಂದು ನಾನು ಎಲ್ಲರಿಗೂ ಭರವಸೆ ನೀಡುತ್ತೇನೆ.

ಕುಕೃತ್ಯದಲ್ಲಿ ಭಾಗಿಯಾಗಿರುವವರಿಗೆ ತಕ್ಕ ಶಿಕ್ಷೆ ನೀಡಿ ಅಮಾಯಕ ನಾಗರಿಕರಿಗೆ ನ್ಯಾಯ ಒದಗಿಸುವ ಭರವಸೆಯನ್ನು ನೀಡುತ್ತೇನೆ.''

 

"कल शाम दिल्ली में हुई भयावह घटना ने सभी के मन को व्यथित किया है। मैं पीड़ित परिवारों का दुख समझता हूं। पूरा देश उनके साथ खड़ा है।

मैं हर किसी को आश्वस्त करता हूं कि हमारी जांच एजेंसियां इस षड्यंत्र की तह तक जाएंगी। जो भी लोग इसके लिए जिम्मेदार हैं, उन्हें किसी भी कीमत पर नहीं बख्शा जाएगा।"

"ಭೂತಾನ್ ನಾಲ್ಕನೇ ದೊರೆಗಳ 70ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಲ್ಲಿನ ಜನರು, ನಮ್ಮ ದೆಹಲಿಯಲ್ಲಿ ನಡೆದ ಸ್ಫೋಟಕ್ಕೆ ವಿಶಿಷ್ಟ ಪ್ರಾರ್ಥನೆಯ ಮೂಲಕ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಅಲ್ಲಿನ ಜನರ ಈ ನಡೆಯನ್ನು ನಾನು ಎಂದಿಗೂ ಮರೆಯುವುದಿಲ್ಲ." 

 

“ད་རེས་ འབྲུག་རྒྱལ་བཞི་བ་མཆོག་གི་ གུང་ལོ་༧༠ འཁོར་བའི་ དུས་སྟོན་བརྩི་སྲུང་དང་འབྲེལ་ འབྲུག་གི་མི་སེར་ཚུ་གིས་ རྒྱ་གར་གྱི་མི་སེར་ཚུ་ལུ་ གྲོགས་རམ་གཅིག་སྒྲིལ་འབད་བའི་། ང་གིས་ ཨ་ནི་བྱ་སྤྱོད་འདི་ནམ་ཡང་བརྗེད་མི་ཚུགས།”

"ಭೂತಾನ್‌ ದೇಶದ ಜನರು ಅವರ ನಾಲ್ಕನೇ ರಾಜನನ್ನು ಪಿತೃತ್ವದ ವ್ಯಕ್ತಿಯೆಂದು ಪ್ರಶಂಸಿಸುತ್ತಾರೆ. ಅವರ ದೂರದೃಷ್ಟಿಯು ಭೂತಾನ್ ದೇಶವನ್ನು ಪ್ರಗತಿಯ ಹೊಸ ಎತ್ತರವನ್ನು ತಲುಪುವಂತೆ ಮಾಡಿದೆ."

"ಭಾರತ ಮತ್ತು ಭೂತಾನ್ ನಡುವೆ ಆಳವಾದ ಬೇರೂರಿರುವ ಸಂಬಂಧವಿದೆ, ಇದು ನಮ್ಮ ರಾಷ್ಟ್ರಗಳ ನಡುವಿನ ವೈವಿಧ್ಯಮಯ ಸಹಕಾರದಲ್ಲಿ ಕಂಡುಬರುತ್ತದೆ."

"ಇಂಧನ ಮತ್ತು ಸಂಪರ್ಕ ಕ್ಷೇತ್ರವು ಭಾರತ-ಭೂತಾನ್ ನಡುವೆ ಸಹಕಾರವು ಆಳವಾಗುತ್ತಿರುವ ಎರಡು ಮುಖ್ಯ ಕ್ಷೇತ್ರಗಳಾಗಿವೆ."

 

*****


(Release ID: 2189144) Visitor Counter : 6