ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರ ಭೂತಾನ್ ಭೇಟಿಯ ಸಫಲತೆ ಪಟ್ಟಿ

Posted On: 11 NOV 2025 6:10PM by PIB Bengaluru

ಉದ್ಘಾಟನೆ:

1. ಭಾರತ ಸರ್ಕಾರ ಮತ್ತು ಭೂತಾನ್ ರಾಯಲ್ ಸರ್ಕಾರಗಳ ನಡುವಿನ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ನಿರ್ಮಿಸಲಾದ 1020 ಮೆಗಾವ್ಯಾಟ್ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯ ಉದ್ಘಾಟನೆ.

ಪ್ರಕಟಣೆಗಳು:

2. 1200 ಮೆಗಾವ್ಯಾಟ್ ಪುನತ್ಸಂಗ್ಚು-I ಜಲವಿದ್ಯುತ್ ಯೋಜನೆಯ ಮುಖ್ಯ ಅಣೆಕಟ್ಟಿನ ರಚನೆಯ ಕಾಮಗಾರಿ ಪುನರಾರಂಭದ ಕುರಿತು ತಿಳುವಳಿಕೆ.

3. ಭೂತಾನ್‌ ನ ದೇವಾಲಯ/ಮಠ ಮತ್ತು ಅತಿಥಿ ಗೃಹವನ್ನು ನಿರ್ಮಿಸಲು ವಾರಣಾಸಿಯಲ್ಲಿ ಭೂಮಿಯ ಮಂಜೂರಾತಿ.

4. ಗೆಲೆಫುವಿನಾದ್ಯಂತ ಹತಿಸರ್‌ನಲ್ಲಿ ವಲಸೆ ಚೆಕ್ ಪೋಸ್ಟ್ ಸ್ಥಾಪಿಸಲು ನಿರ್ಧಾರ.

5. ಭೂತಾನ್‌ಗೆ ರೂ. 4,000 ಕೋಟಿ ಸಾಲ (LoC).

ತಿಳಿವಳಿಕೆ ಒಪ್ಪಂದಗಳು (MoUs):

ಕ್ರಮ ಸಂಖ್ಯೆ  ತಿಳಿವಳಿಕೆ ಒಪ್ಪಂದದ ಹೆಸರು ವಿವರಣೆ ಭೂತಾನಿನ ಕಡೆಯಿಂದ ಸಹಿ ಮಾಡಿದವರು ಭಾರತದ ಕಡೆಯಿಂದ ಸಹಿ ಮಾಡಿದವರು

6.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದ

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಒಪ್ಪಂದಗಳನ್ನು ಸಾಂಸ್ಥಿಕಗೊಳಿಸಲು ಈ ತಿಳಿವಳಿಕೆ ಒಪ್ಪಂದವು ಸಹಕರಿಸುತ್ತದೆ. ಈ ಒಪ್ಪಂದವು ಸೌರಶಕ್ತಿ, ಪವನ ಶಕ್ತಿ, ಜೀವರಾಶಿ, ಇಂಧನ ಸಂಗ್ರಹಣೆ, ಹಸಿರು ಹೈಡ್ರೋಜನ್ ಮತ್ತು ಸಾಮರ್ಥ್ಯ ವರ್ಧನೆ ಮುಂತಾದ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ.

ಲಿಯಾನ್ಪೊ ಜೆಮ್ ತ್ಸೆರಿಂಗ್, ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಚಿವರು, ಭೂತಾನ್ ರಾಯಲ್ ಸರ್ಕಾರ

ಶ್ರೀ ಪ್ರಹ್ಲಾದ್ ವೆಂಕಟೇಶ್ ಜೋಶಿ,

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು, ಭಾರತ ಸರ್ಕಾರ

7.

ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದ.

ಈ ತಿಳಿವಳಿಕೆ ಒಪ್ಪಂದವು ಔಷಧಗಳು, ರೋಗನಿರ್ಣಯ ಮತ್ತು ಸಾಧನಗಳು; ತಾಯ್ತನದ ಆರೋಗ್ಯ; ಸಾಂಕ್ರಾಮಿಕ / ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ; ಸಾಂಪ್ರದಾಯಿಕ ಔಷಧ; ಟೆಲಿಮೆಡಿಸಿನ್ ಸೇರಿದಂತೆ ಡಿಜಿಟಲ್ ಆರೋಗ್ಯ ಮಧ್ಯಸ್ಥಿಕೆಗಳು; ಮತ್ತು ತಾಂತ್ರಿಕ ಸಹಯೋಗ, ಜಂಟಿ ಸಂಶೋಧನೆ ಮತ್ತು ಆರೋಗ್ಯ ವೃತ್ತಿಪರರ ಸಾಮರ್ಥ್ಯ ವೃದ್ಧಿ ಸೇರಿದಂತೆ, ಈ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಆರೋಗ್ಯ ಸಹಕಾರವನ್ನು ಸಾಂಸ್ಥಿಕಗೊಳಿಸಲು ಪ್ರಯತ್ನಿಸುತ್ತದೆ.

ಶ್ರೀ ಪೆಂಬಾ ವಾಂಗ್ಚುಕ್, ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಭೂತಾನ್ ರಾಯಲ್ ಸರ್ಕಾರ

ಶ್ರೀ ಸಂದೀಪ್ ಆರ್ಯ, ಭೂತಾನ್ ಸಾಮ್ರಾಜ್ಯದ ಭಾರತದ ರಾಯಭಾರಿ

8.

ಭೂತಾನ್‌ನ ಪೆಮಾ ಸಚಿವಾಲಯ ಮತ್ತು ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗಳ (NIMHANS) ನಡುವೆ ಸಾಂಸ್ಥಿಕ ಸಂಪರ್ಕವನ್ನು ನಿರ್ಮಿಸುವ ಕುರಿತಾದ ತಿಳಿವಳಿಕೆ ಒಪ್ಪಂದ

ಈ ತಿಳಿವಳಿಕೆ ಒಪ್ಪಂದವು ಮಾನಸಿಕ ಆರೋಗ್ಯ ವೃತ್ತಿಪರರ ಸಾಮರ್ಥ್ಯ ವೃದ್ಧಿಗಾಗಿ ಎರಡೂ ಸಂಸ್ಥೆಗಳ ನಡುವಿನ ಸಹಯೋಗವನ್ನು ಬಲಪಡಿಸಿ, ಸೇವಾ ವರ್ಧನೆ ಮತ್ತು ಸಂಶೋಧನೆಗಾಗಿ ದೇಶೀಯ ಮಾನಸಿಕ ಆರೋಗ್ಯ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಯೋಗವನ್ನು ಅಭಿವೃದ್ದಿ ಪಡಿಸುತ್ತದೆ.

ಶ್ರೀಮತಿ ಡೆಚೆನ್ ವಾಂಗ್ಮೋ, ಭೂತಾನ್‌ನ ಪೆಮಾ ಸಚಿವಾಲಯದ ಮುಖ್ಯಸ್ಥರು

ಶ್ರೀ ಸಂದೀಪ್ ಆರ್ಯ, ಭೂತಾನ್ ಸಾಮ್ರಾಜ್ಯದ ಭಾರತದ ರಾಯಭಾರಿ

 

*****


(Release ID: 2189095) Visitor Counter : 8