ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನ್‌ನ ಜೋತೋ ಅಗ್ನಿಶಾಮಕ ಠಾಣೆಯಿಂದ ಗೌರವಿಸಲ್ಪಟ್ಟ ದೀಪಾಲಿ ಜಾವೇರಿ ಮತ್ತು ಓಟಾ ಅವರಿಗೆ ಪ್ರಧಾನಮಂತ್ರಿ ಸಂತಸ

प्रविष्टि तिथि: 06 APR 2023 9:47AM by PIB Bengaluru

ಕಳೆದ ಅಕ್ಟೋಬರ್‌ನಲ್ಲಿ ಟೋಕಿಯೊದಲ್ಲಿ ನಡೆದ ದಂಡಿಯಾ ಮಸ್ತಿ 2022 ಕಾರ್ಯಕ್ರಮದಲ್ಲಿ ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಅವರಿಗೆ ಸಿಪಿಆರ್ ಮತ್ತು ಎಇಡಿ ನೀಡಿದ ಕಾರಣಕ್ಕಾಗಿ ಜಪಾನ್‌ನ ಜೋತೋ ಅಗ್ನಿಶಾಮಕ ಠಾಣೆಯಿಂದ ಪ್ರಶಸ್ತಿ ಪಡೆದ ಜಪಾನ್‌ನಲ್ಲಿರುವ ಭಾರತೀಯ ನಿವಾಸಿ ಶ್ರೀಮತಿ ದೀಪಾಲಿ ಜಾವೇರಿ ಮತ್ತು ಶ್ರೀ ಓಟಾ ಅವರ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

"ಇದನ್ನು ತಿಳಿದು ಸಂತೋಷವಾಗಿದೆ, ಮತ್ತು ಇದು ಬಾಧಿತರಾದ ಯಾವುದೇ ವ್ಯಕ್ತಿಗೆ ಸಕಾಲದಲ್ಲಿ ನೆರವು ನೀಡುವುದರ ಮಹತ್ವವನ್ನು ಒತ್ತಿ ಹೇಳುತ್ತದೆ."

 

*****

 

 


(रिलीज़ आईडी: 2188762) आगंतुक पटल : 20
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Assamese , Manipuri , Punjabi , Gujarati , Odia , Tamil , Telugu , Malayalam