ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುದ್ರಾ ಯೋಜನೆಗೆ 8 ವರ್ಷ ಪೂರ್ಣಗೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಶ್ಲಾಘನೆ

प्रविष्टि तिथि: 08 APR 2023 11:59AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುದ್ರಾ ಯೋಜನೆಗೆ 8 ವರ್ಷಗಳು ಪೂರ್ಣಗೊಂಡಿದ್ದಕ್ಕಾಗಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೈಗವ್ ಇಂಡಿಯಾ (MyGovIndia) ಮಾಡಿದ ಟ್ವೀಟ್‌ಗಳ ಸರಣಿಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

"#PMMudraYojana ಇದುವರೆಗೆ ಸಾಲ ಪಡೆಯದವರಿಗೆ ಹಣಕಾಸಿನ ನೆರವು ನೀಡುವಲ್ಲಿ ಮತ್ತು ಅಸಂಖ್ಯಾತ ಭಾರತೀಯರಿಗೆ ಘನತೆ ಹಾಗೂ ಸಮೃದ್ಧಿಯ ಜೀವನವನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು, #8YearsOfMudraYojana ಪೂರ್ಣಗೊಂಡ ಸಂದರ್ಭದಲ್ಲಿ, ಇದರಿಂದ ಪ್ರಯೋಜನ ಪಡೆದ ಮತ್ತು ಸಂಪತ್ತು ಸೃಷ್ಟಿಕರ್ತರಾದ ಎಲ್ಲ ಉದ್ಯಮಶೀಲತೆಯ ಉತ್ಸಾಹಕ್ಕೆ ನಾನು ನಮಸ್ಕರಿಸುತ್ತೇನೆ."

 

"ಈ ವಿಡಿಯೋ ಮುದ್ರಾ ಯೋಜನೆಯ ವೇಗ ಮತ್ತು ಪ್ರಮಾಣದ ಬಗ್ಗೆ ಉತ್ತಮ ಕಲ್ಪನೆಯನ್ನು ನೀಡುತ್ತದೆ."

ಹಣಕಾಸು ಸಚಿವಾಲಯದ ಟ್ವೀಟ್‌ಗೆ ಪ್ರಧಾನಮಂತ್ರಿಯವರು ನೀಡಿದ ಪ್ರತ್ಯುತ್ತರ ಹೀಗಿದೆ:

 

"ಶ್ಲಾಘನೀಯ! ಇದು ನಮ್ಮ ಜನರ ಕಠಿಣ ಪರಿಶ್ರಮಕ್ಕೆ ಗೌರವವಾಗಿದೆ."

 

*****


(रिलीज़ आईडी: 2188403) आगंतुक पटल : 17
इस विज्ञप्ति को इन भाषाओं में पढ़ें: Malayalam , Odia , English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu