ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಈಸ್ಟರ್‌ನ ವಿಶೇಷ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಆಧ್ಯಾತ್ಮಿಕ ನಾಯಕರೊಂದಿಗೆ ಪ್ರಧಾನಮಂತ್ರಿ ಭೇಟಿ


ದೆಹಲಿಯ 'ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್'ಗೆ ಭೇಟಿಯ ಝಲಕ್‌ಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 09 APR 2023 7:17PM by PIB Bengaluru

ಈಸ್ಟರ್‌ನ ವಿಶೇಷ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರಿಶ್ಚಿಯನ್ ಸಮುದಾಯದ ಆಧ್ಯಾತ್ಮಿಕ ನಾಯಕರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ದೆಹಲಿಯ 'ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್' ಗೆ  ಭೇಟಿ ನೀಡಿದ ಝಲಕ್‌ಗಳನ್ನು ಸಹ ಶ್ರೀ ಮೋದಿ ಅವರು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"ಇಂದು, ಈಸ್ಟರ್‌ನ ಅತ್ಯಂತ ವಿಶೇಷ ಸಂದರ್ಭದಲ್ಲಿ, ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ಗೆ ಭೇಟಿ ನೀಡುವ ಅವಕಾಶ ನನಗೆ ದೊರೆಯಿತು. ನಾನು ಕ್ರಿಶ್ಚಿಯನ್ ಸಮುದಾಯದ ಆಧ್ಯಾತ್ಮಿಕ ನಾಯಕರನ್ನು ಸಹ ಭೇಟಿಯಾದೆನು.

ಇಲ್ಲಿ ಕೆಲವು ಝಲಕ್‌ಗಳು ಇವೆ."

"ಈಸ್ಟರ್ ದಿನದಂದು ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಿಂದ ಇನ್ನಷ್ಟು ಚಿತ್ರಗಳು.

ಈ ದಿನವು ಸಮಾಜದಲ್ಲಿ ಸಂತೋಷ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲಿ."

 

*****

 


(रिलीज़ आईडी: 2188362) आगंतुक पटल : 16
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam