ಪ್ರಧಾನ ಮಂತ್ರಿಯವರ ಕಛೇರಿ
ಪೋಷಣೆ ಮತ್ತು ಸಾಮೂಹಿಕ ಸಹಭಾಗಿತ್ವದ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಒಡಿಶಾದ ಬಲಂಗೀರ್ ಸಂಸದರ ಟ್ವೀಟ್ ಥ್ರೆಡ್ ಅನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
10 APR 2023 10:06AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಪೌಷ್ಟಿಕತೆಯ ಉಪಟಳವನ್ನು ಜಾಗೃತಿ ಮತ್ತು ಸಾಮೂಹಿಕ ಸಹಭಾಗಿತ್ವದ ಮೂಲಕ ನಿಭಾಯಿಸುವ ಕುರಿತು ಒಡಿಶಾದ ಬಲಂಗೀರ್ ಸಂಸದೆ ಶ್ರೀಮತಿ ಸಂಗೀತಾ ಕುಮಾರಿ ಸಿಂಗ್ ದೇವ್ ಅವರ ಟ್ವೀಟ್ ಸರಣಿಗೆ ಪ್ರತಿಕ್ರಿಯಿಸಿದ್ದಾರೆ.
ಒಡಿಶಾದ ಬಲಂಗೀರ್ ಸಂಸದೆ ತಮ್ಮ ಟ್ವೀಟ್ ಸರಣಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆಶ್ರಯದಲ್ಲಿ ಸರ್ಕಾರದ ಪೋಷಣ್ ಅಭಿಯಾನದ ಉಪಕ್ರಮದ ಪ್ರಭಾವದ ಬಗ್ಗೆ ಮಾತನಾಡಿದರು. ಈ ಅಭಿಯಾನದಿಂದಾಗಿ ಮಕ್ಕಳು ಈಗ ಆರೋಗ್ಯಕರವಾಗಿ ಜನಿಸುತ್ತಿದ್ದಾರೆ ಮತ್ತು ಉತ್ತಮ ಪೋಷಣೆಯನ್ನು ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸ್ವಚ್ಛ ಭಾರತದ ಬಗ್ಗೆ ಪ್ರಧಾನಮಂತ್ರಿಯವರ ಸ್ಪಷ್ಟ ಕರೆಯನ್ನು ಜನರು ಹೇಗೆ ತಕ್ಷಣವೇ ಬೆಂಬಲಿಸಿದರು ಎಂಬುದರ ಕುರಿತು ಅವರು ಮಾತನಾಡಿದರು. ಇದೇ ರೀತಿ, ಪೋಷಣ್ ಅಭಿಯಾನದ ಕಥೆಯೂ ಇದೆ, ಇದು ಸರ್ಕಾರದ ಪರಿಣಾಮಕಾರಿ ಅನುಷ್ಠಾನ ಮತ್ತು ನಾಗರಿಕರ ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
"ಜಾಗೃತಿ ಮತ್ತು ಸಾಮೂಹಿಕ ಸಹಭಾಗಿತ್ವದ ಮೂಲಕ ಅಪೌಷ್ಟಿಕತೆಯ ಉಪಟಳವನ್ನು ನಿಭಾಯಿಸುವ ಕುರಿತು ಆಸಕ್ತಿದಾಯಕ ಥ್ರೆಡ್."
*****
(रिलीज़ आईडी: 2188356)
आगंतुक पटल : 16
इस विज्ञप्ति को इन भाषाओं में पढ़ें:
Gujarati
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Odia
,
Tamil
,
Telugu
,
Malayalam