ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿಲ್ಚಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಗಮ ಜೀವನವನ್ನು ಹೆಚ್ಚಿಸುತ್ತಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿ 

प्रविष्टि तिथि: 03 APR 2023 9:55AM by PIB Bengaluru

ಸಂಸದರಾದ ಡಾ. ರಾಜ್‌ದೀಪ್ ರಾಯ್ ಅವರು ಸಿಲ್ಚಾರ್‌ನ 'ವಿಕಾಸ್ ಯಾತ್ರೆ' ಕುರಿತು ಟ್ವೀಟ್ ಥ್ರೆಡ್‌ನಲ್ಲಿ ಮಾಹಿತಿ ನೀಡಿದ್ದರು. ಈ ಕುರಿತು ಅವರು, ಶಿಕ್ಷಣ, ಸ್ವಚ್ಛತೆ, ಆರೋಗ್ಯ ರಕ್ಷಣೆ, ನೀರು ಸರಬರಾಜು, ಪರಿಸರ, ಸಾರಿಗೆ, ಕೈಗೆಟುಕುವ ವಸತಿ ಲಭ್ಯತೆ, ಸುರಕ್ಷತೆ ಮತ್ತು ಸಾರ್ವಜನಿಕ ಸೇವೆಗಳು ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರದೇಶದ ಆರ್ಥಿಕ ಸಾಮರ್ಥ್ಯದೊಂದಿಗೆ ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ತಿಳಿಸಿದ್ದರು. ಅವರು ಸಿಜಿಎಚ್‌ಎಸ್ ಸ್ವಾಸ್ಥ್ಯ ಕೇಂದ್ರ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಮತ್ತು ಸಿಲ್ಚಾರ್ ಹಾಗೂ ಸುತ್ತಮುತ್ತಲಿನ ಜನರ ಜೀವನವನ್ನು ಸುಗಮಗೊಳಿಸುತ್ತಿರುವ ಇತರ ಅಭಿವೃದ್ಧಿ ಉಪಕ್ರಮಗಳ ಬಗ್ಗೆಯೂ ಮಾತನಾಡಿದ್ದರು.

ಸಂಸದರ ಟ್ವೀಟ್ಗೆ ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹೀಗೆ  ಪೋಸ್ಟ್‌ ಮಾಡಿದ್ದಾರೆ:

ಅಭಿವೃದ್ಧಿಯ ಫಲಗಳು ಸಿಲ್ಚಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 'ಸುಗಮ ಜೀವನ' ವನ್ನು ಹೆಚ್ಚಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ."

 

*****

 


(रिलीज़ आईडी: 2188246) आगंतुक पटल : 13
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Assamese , Manipuri , Punjabi , Gujarati , Odia , Tamil , Telugu , Malayalam