ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

“ಕಾನೂನು ನೆರವು ವಿತರಣಾ ಕಾರ್ಯವಿಧಾನ ಬಲಪಡಿಸುವಿಕೆ” ರಾಷ್ಟ್ರೀಯ ಸಮ್ಮೇಳನ ನವೆಂಬರ್ 8 ರಂದು ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 06 NOV 2025 2:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 8, 2025 ರಂದು ಸಂಜೆ 5 ಗಂಟೆ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ “ಕಾನೂನು ನೆರವು ಕಾರ್ಯವಿಧಾನಗಳನ್ನು ಬಲಪಡಿಸುವಿಕೆ” ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್.ಎ.ಎಲ್.ಎಸ್.ಎ - NALSA) ಸಿದ್ಧಪಡಿಸಿದ ಸಮುದಾಯ ಮಧ್ಯಸ್ಥಿಕೆ ತರಬೇತಿ ಮಾಡ್ಯೂಲ್ ಅನ್ನು ಪ್ರಧಾನಮಂತ್ರಿ ಅವರು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

ಎನ್.ಎ.ಎಲ್.ಎಸ್.ಎ ಆಯೋಜಿಸಿರುವ ಎರಡು ದಿನಗಳ ಸಮ್ಮೇಳನದಲ್ಲಿ ಕಾನೂನು ನೆರವು ರಕ್ಷಣಾ ಸಲಹೆ ವ್ಯವಸ್ಥೆ, ವಕೀಲರ ಸಮಿತಿ, ಪ್ಯಾರಾ-ಲೀಗಲ್ ಸ್ವಯಂಸೇವಕರು, ಶಾಶ್ವತ ಲೋಕ ಅದಾಲತ್‌ಗಳು ಮತ್ತು ಕಾನೂನು ಸೇವಾ ಸಂಸ್ಥೆಗಳ ಹಣಕಾಸು ನಿರ್ವಹಣೆಯಂತಹ ಸೇವೆಗಳ ಚೌಕಟ್ಟಿನ ಕುರಿತು ಚರ್ಚಿಸಲಾಗುತ್ತದೆ.

 

*****
 


(Release ID: 2186955) Visitor Counter : 7