ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಏಕತಾ ದಿವಸ್ - 2025ರ ಸಂದರ್ಭದಲ್ಲಿ ನವದೆಹಲಿಯಲ್ಲಿ 'ಏಕತಾ ಓಟ 'ಕ್ಕೆ ಚಾಲನೆ ನೀಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಸ್ವಾತಂತ್ರ್ಯ ಚಳವಳಿಯಿಂದ ಆಧುನಿಕ ಭಾರತದ ಸೃಷ್ಟಿಯವರೆಗೆ, ಸರ್ದಾರ್ ಪಟೇಲ್ ಅವರ ಕೊಡುಗೆಗಳು ಮಹತ್ವದ್ದಾಗಿದೆ

ಇಂದಿನ ಭಾರತ ಸರ್ದಾರ್ ಸಾಹೇಬರೇ ಕಾರಣ

ಬಾರ್ಡೋಲಿ ಚಳವಳಿಯ ಸಮಯದಲ್ಲಿ ಬ್ರಿಟಿಷರನ್ನು ಮೊಣಕಾಲೂರಿಸಿದ ವಲ್ಲಭಭಾಯಿ ಪಟೇಲ್ ಅವರಿಗೆ ಮಹಾತ್ಮ ಗಾಂಧಿಯವರು "ಸರ್ದಾರ್" ಎಂಬ ಬಿರುದನ್ನು ನೀಡಿದರು

ಸರ್ದಾರ್ ಪಟೇಲ್ ಅವರ ಉಕ್ಕಿನ ಇಚ್ಛಾಶಕ್ತಿಯಿಂದ ಸೃಷ್ಟಿಯಾದ ಭವ್ಯ ಭಾರತ, 370ನೇ ವಿಧಿಯಿಂದಾಗಿ ಅಪೂರ್ಣವಾಗಿತ್ತು, ಪ್ರಧಾನಮಂತ್ರಿ ಮೋದಿ ಅವರು 370ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಆ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ

ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಕೆವಾಡಿಯಾದಲ್ಲಿ "ಏಕತಾ ಪ್ರತಿಮೆ" ನಿರ್ಮಿಸುವ ಮೂಲಕ ಪ್ರಧಾನಮಂತ್ರಿ ಮೋದಿ ಸರ್ದಾರ್ ಪಟೇಲ್ ಅವರನ್ನು ಗೌರವಿಸಿದರು

ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಕೆವಾಡಿಯಾದಲ್ಲಿ ಪ್ರತಿ ವರ್ಷ ಅದೇ ಭವ್ಯತೆಯಿಂದ ಏಕತಾ ಪರೇಡ್ ಆಚರಿಸಲು ಗೃಹ ಸಚಿವಾಲಯ ನಿರ್ಧರಿಸಿದೆ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಂದ ಜನತೆಗೆ ಏಕತೆಯ ಪ್ರತಿಜ್ಞಾವಿಧಿ ಬೋಧನೆ

Posted On: 31 OCT 2025 1:08PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ರಾಷ್ಟ್ರೀಯ ಏಕತಾ ದಿವಸ್ - 2025 ರ ಸಂದರ್ಭದಲ್ಲಿ ನವದೆಹಲಿಯಲ್ಲಿ 'ಏಕತಾ ಓಟ'ಕ್ಕೆ ಚಾಲನೆ ನೀಡಿದರು. ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಜನರಿಗೆ ಏಕತೆಯ ಪ್ರತಿಜ್ಞೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಮತ್ತು ಡಾ. ಮನ್ಸುಖ್ ಮಾಂಡವಿಯಾ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿ.ಕೆ. ಸಕ್ಸೇನಾ, ದೆಹಲಿಯ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಮತ್ತು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಬಂಡಿ ಸಂಜಯ್ ಕುಮಾರ್ ಮತ್ತು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಇಂದು ನಮ್ಮೆಲ್ಲರಿಗೂ ವಿಶೇಷ ದಿನವಾಗಿದೆ ಎಂದು ಹೇಳಿದರು. 2014 ರಿಂದ, ಪ್ರತಿ ವರ್ಷ ಅಕ್ಟೋಬರ್ 31ರಂದು, ನಾವು ಸರ್ದಾರ್ ಪಟೇಲ್ ಅವರ ಗೌರವಾರ್ಥ 'ಏಕತಾ ಓಟ'ವನ್ನು ಆಯೋಜಿಸುತ್ತೇವೆ ಎಂದು ಅವರು ಹೇಳಿದರು. ಇಂದು ಸರ್ದಾರ್ ಪಟೇಲ್ ಅವರ 150ನೇ ಜನ್ಮ ವರ್ಷಾಚರಣೆಯಾಗಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದನ್ನು ದೇಶಾದ್ಯಂತ ವಿಶೇಷ ಕಾರ್ಯಕ್ರಮವಾಗಿ ಆಚರಿಸಲು ನಿರ್ಧರಿಸಿದ್ದಾರೆ ಎಂದರು.

ಸರ್ದಾರ್ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ಸ್ವತಂತ್ರ ಭಾರತದ ಪ್ರಸ್ತುತ ನಕ್ಷೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಹಾತ್ಮ ಗಾಂಧಿಯವರ ಕರೆಯ ಮೇರೆಗೆ ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಬ್ಯಾರಿಸ್ಟರ್ ವೃತ್ತಿಯನ್ನು ತ್ಯಜಿಸಿದ್ದರು ಎಂದು ಅವರು ಉಲ್ಲೇಖಿಸಿದರು. ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ 1928ರ ಬಾರ್ಡೋಲಿ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ ಸರ್ದಾರ್ ಪಟೇಲ್ ಅವರ ನಾಯಕತ್ವದ ಗುಣಗಳು ಸ್ಪಷ್ಟವಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸರ್ದಾರ್ ಪಟೇಲ್ ಅವರ ನಾಯಕತ್ವದಲ್ಲಿ ರೈತರು ತಮ್ಮ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಸಣ್ಣ ಪಟ್ಟಣದಲ್ಲಿ ಪ್ರಾರಂಭವಾದದ್ದು ಶೀಘ್ರದಲ್ಲೇ ರಾಷ್ಟ್ರವ್ಯಾಪಿ ರೈತ ಆಂದೋಲನವಾಗಿ ಬೆಳೆಯಿತು, ಬ್ರಿಟಿಷರನ್ನು ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಚಳವಳಿಯ ನಂತರವೇ ಮಹಾತ್ಮ ಗಾಂಧಿಯವರು ವಲ್ಲಭಭಾಯಿ ಪಟೇಲ್ ಅವರಿಗೆ "ಸರ್ದಾರ್" ಎಂಬ ಬಿರುದನ್ನು ನೀಡಿದರು ಮತ್ತು ಅಂದಿನಿಂದ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಪ್ರಸಿದ್ಧರಾದರು ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ನಂತರ, ಬ್ರಿಟಿಷರು ದೇಶವನ್ನು 562 ರಾಜಪ್ರಭುತ್ವದ ರಾಜ್ಯಗಳಾಗಿ ವಿಭಜಿಸಿದ್ದರು ಮತ್ತು ಅನೇಕ ರಾಜ್ಯಗಳಾಗಿ ವಿಭಜನೆಗೊಂಡ ರಾಷ್ಟ್ರವು ಏಕೀಕೃತ ಭಾರತವಾಗುವುದು ಹೇಗೆ ಎಂಬ ಬಗ್ಗೆ ಎಲ್ಲರೂ ಆತಂಕದಲ್ಲಿದ್ದರು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸರ್ದಾರ್ ಪಟೇಲ್ ಅವರ ದಣಿವರಿಯದ ಪ್ರಯತ್ನಗಳು, ದೃಢ ನಿಶ್ಚಯ ಮತ್ತು ಮುತ್ಸದ್ದಿತನಿಂದಾಗಿಯೇ ಎಲ್ಲಾ 562 ರಾಜಪ್ರಭುತ್ವದ ರಾಜ್ಯಗಳು ಅಲ್ಪಾವಧಿಯಲ್ಲಿ ಒಂದುಗೂಡಿದವು. ಭಾರತದ ಪ್ರಸ್ತುತ ಭೂಪಟವನ್ನು ರೂಪಿಸಿತು ಮತ್ತು ನಮ್ಮ ರಾಷ್ಟ್ರಕ್ಕೆ ಅಡಿಪಾಯ ಹಾಕಿತು ಎಂದು ಅವರು ಹೇಳಿದರು. ಕಾಥೇವಾಡ, ಭೋಪಾಲ್, ಜುನಾಗಢ, ಜೋಧಪುರ, ತಿರುವಾಂಕೂರು ಮತ್ತು ಹೈದರಾಬಾದ್ ನಂತಹ ಪ್ರದೇಶಗಳು ಪ್ರತ್ಯೇಕವಾಗಿ ಉಳಿಯಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡಿದವು, ಆದರೆ ಸರ್ದಾರ್ ಪಟೇಲ್ ಅವರ ಉಕ್ಕಿನ ಇಚ್ಛಾಶಕ್ತಿ ಮತ್ತು ಮಣಿಯದ ದೃಢ ನಿಶ್ಚಯವು ಅಖಂಡ ಭಾರತವನ್ನು ರಚಿಸಲು ಅವರೆಲ್ಲರನ್ನೂ ಒಟ್ಟುಗೂಡಿಸಿತು ಎಂದು ಅವರು ಹೇಳಿದರು. 370ನೇ ವಿಧಿಯಿಂದಾಗಿ ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ಏಕೀಕರಣಗೊಳಿಸುವುದು ಅಪೂರ್ಣವಾಗಿ ಉಳಿದಿತ್ತು, ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ಅವರ ಅಪೂರ್ಣ ಕಾರ್ಯವನ್ನು ಪೂರೈಸಿದರು ಮತ್ತು ಇಂದು, ನಮ್ಮ ಮುಂದೆ ನಿಜವಾದ ಏಕೀಕೃತ ಭಾರತ ಇದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಸ್ವಾತಂತ್ರ್ಯದ ದಿನದಂದು, ಎಲ್ಲರೂ ರಾಷ್ಟ್ರಧ್ವಜಾರೋಹಣದಲ್ಲಿ ನಿರತರಾಗಿದ್ದಾಗ, ಸರ್ದಾರ್ ಪಟೇಲ್ ಅವರು ನೌಕಾ ಯುದ್ಧನೌಕೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಆ ಸಮಯದಲ್ಲಿ, ಲಕ್ಷದ್ವೀಪವನ್ನು ಯಾರು ನಿಯಂತ್ರಿಸುತ್ತಾರೆ ಎಂಬ ಪ್ರಶ್ನೆಯು ಒಂದು ಪ್ರಮುಖ ವಿಷಯವಾಗಿತ್ತು ಮತ್ತು ನೌಕಾಪಡೆಯನ್ನು ತಕ್ಷಣವೇ ಅಲ್ಲಿಗೆ ಕಳುಹಿಸುವ ಮೂಲಕ ಮತ್ತು ತ್ರಿವರ್ಣ ಧ್ವಜವನ್ನು ಹಾರಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ದಾರ್ ಪಟೇಲ್ ಅವರು ಲಕ್ಷದ್ವೀಪವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ಅಂದಿನ ವಿರೋಧ ಪಕ್ಷಗಳ ನೇತೃತ್ವದ ಸರ್ಕಾರಗಳು ಸರ್ದಾರ್ ಪಟೇಲ್ ಅವರಿಗೆ ಅರ್ಹವಾದ ಗೌರವವನ್ನು ನೀಡಲಿಲ್ಲ ಮತ್ತು ಅವರಿಗೆ ಭಾರತ ರತ್ನ ನೀಡಲು 41 ವರ್ಷಗಳು ಬೇಕಾಯಿತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಸರ್ದಾರ್ ಪಟೇಲ್ ಅವರ ಅಪಾರ ಕೊಡುಗೆಗೆ ತಕ್ಕ ಯಾವುದೇ ಸ್ಮಾರಕವನ್ನು ನಿರ್ಮಿಸಲಾಗಿಲ್ಲ ಎಂದೂ ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾದಾಗ, ಇಡೀ ಜಗತ್ತು ಗಮನಕ್ಕೆ ಬರುವಂತೆ ಕೆವಾಡಿಯಾ ಕಾಲೋನಿಯಲ್ಲಿ ಸರ್ದಾರ್ ಪಟೇಲ್ ಅವರ ಭವ್ಯ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿದರು ಎಂದು ಅವರು ಹೇಳಿದರು. ಅಲ್ಲಿಯೇ ಏಕತಾ ಪ್ರತಿಮೆಯ ಪರಿಕಲ್ಪನೆಯನ್ನು ರೂಪಿಸಲಾಯಿತು. 2013ರ ಅಕ್ಟೋಬರ್ 31ರಂದು ಏಕತಾ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಮತ್ತು 57 ತಿಂಗಳಲ್ಲಿ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ಪೂರ್ಣಗೊಂಡಿತು.  ಈಗ ಇಡೀ ರಾಷ್ಟ್ರದ ಏಕತೆಯ ಸಂಕೇತವಾಗಿ ನಿಂತಿದೆ ಎಂದು ಶ್ರೀ ಅಮಿತ್ ಶಾ ಉಲ್ಲೇಖಿಸಿದರು. ಸರ್ದಾರ್ ಪಟೇಲ್ ಅವರು ರೈತರ ನಾಯಕರಾಗಿದ್ದರು ಮತ್ತು ಪ್ರತಿಮೆಯನ್ನು ನಿರ್ಮಿಸಲು ಬಳಸಿದ ಸುಮಾರು 25,000 ಟನ್ ಕಬ್ಬಿಣವು ರೈತರ ಉಪಕರಣಗಳನ್ನು ಕರಗಿಸಿ ಬಂದಿದೆ ಎಂದು ಅವರು ಹೇಳಿದರು. ಸುಮಾರು 25,000 ಟನ್ ಕಬ್ಬಿಣ, 90,000 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಮತ್ತು 1,700 ಟನ್ ಕಂಚು ಬಳಸಿ ನಿರ್ಮಿಸಲಾದ ಬೃಹತ್ ಪ್ರತಿಮೆಯನ್ನು ಇದುವರೆಗೆ ಸುಮಾರು 2.5 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಆಂತರಿಕ ಭದ್ರತೆಗಾಗಿ ಸರ್ದಾರ್ ಪಟೇಲ್ ಅವರು ತೋರಿಸಿದ ಅದೇ ಮಾರ್ಗದಲ್ಲಿ ಭಾರತ ಇಂದು ಪ್ರಗತಿ ಸಾಧಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಇಂದು, ಪ್ರಧಾನಮಂತ್ರಿ ನರೇಂದ್ರ ಮೋದಿಯ ಅವರ ಸಮ್ಮುಖದಲ್ಲಿ, ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಕೆವಾಡಿಯಾದಲ್ಲಿ ಭವ್ಯ ಪರೇಡ್ ಮೂಲಕ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಿವೆ ಎಂದು ಅವರು ಹೇಳಿದರು. 150ನೇ ಜನ್ಮ ದಿನಾಚರಣೆಯ ನಂತರ, ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಏಕತಾ ಪರೇಡ್ ಅನ್ನು ಈ ಭವ್ಯವಾಗಿ ಆಯೋಜಿಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಅವರು ಹೇಳಿದರು. ಈ ವರ್ಷ, ಏಕತಾ ಓಟ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಸಹ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಸರ್ದಾರ್ ಪಟೇಲ್ ಅವರ ವಿಚಾರಗಳನ್ನು ವಿಶೇಷವಾಗಿ ಯುವಕರಲ್ಲಿ ಹರಡಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ದ್ವಾರಕಾದಿಂದ ಕಾಮಾಕ್ಯದವರೆಗೆ ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಪ್ರತಿಜ್ಞೆ ಮಾಡುವ ಯುವಕರು ಭಾರತದ ಭವಿಷ್ಯದ ನಿರ್ಮಾತೃಗಳಾಗುತ್ತಾರೆ ಎಂದು ಅವರು ಒತ್ತಿ ಹೇಳಿದರು.

 

*****


(Release ID: 2184560) Visitor Counter : 6