ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೊಲೀಸ್ ಸಂಸ್ಮರಣಾ ದಿನದಂದು ವೀರ ಪೊಲೀಸ್ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 21 OCT 2025 9:10AM by PIB Bengaluru

ಪೊಲೀಸ್ ಸಂಸ್ಮರಣಾ ದಿನದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಪೊಲೀಸ್ ಸಿಬ್ಬಂದಿಯ ಧೈರ್ಯ ಮತ್ತು ತ್ಯಾಗಕ್ಕೆ ಹೃತ್ಪೂರ್ವಕ ಗೌರವ ನಮನ ಸಲ್ಲಿಸಿದರು. ರಾಷ್ಟ್ರ ಮತ್ತು ಅದರ ನಾಗರಿಕರನ್ನು ರಕ್ಷಿಸುವಲ್ಲಿ ಅವರ ಅಚಲ ಸಮರ್ಪಣೆಯನ್ನು ಅವರು ಒಪ್ಪಿಕೊಂಡರು.

ಈ ಸಂಬಂಧ ಇಂದು ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

"ಪೊಲೀಸ್ ಸಂಸ್ಮರಣಾ ದಿನದಂದು, ನಾವು ನಮ್ಮ ಪೊಲೀಸ್ ಸಿಬ್ಬಂದಿಯ ಧೈರ್ಯಕ್ಕೆ ವಂದಿಸುತ್ತೇವೆ ಮತ್ತು ಕರ್ತವ್ಯದ ವೇಳೆ ಅವರು ಮಾಡಿದ ಅತ್ಯುನ್ನತ ತ್ಯಾಗವನ್ನು ಸ್ಮರಿಸುತ್ತೇವೆ. ಅವರ ದೃಢವಾದ ಸಮರ್ಪಣೆಯು ನಮ್ಮ ರಾಷ್ಟ್ರ ಮತ್ತು ಜನರನ್ನು ಸುರಕ್ಷಿತವಾಗಿರಿಸುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಅಗತ್ಯದ ಕ್ಷಣಗಳಲ್ಲಿ ಅವರ ಶೌರ್ಯ ಮತ್ತು ಬದ್ಧತೆ ಶ್ಲಾಘನೀಯ."

****


(रिलीज़ आईडी: 2181072) आगंतुक पटल : 20
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam