ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಈಜಿಪ್ಟ್ ವಿದೇಶಾಂಗ ಸಚಿವರು
ಗಾಜಾ ಶಾಂತಿ ಒಪ್ಪಂದದಲ್ಲಿ ಈಜಿಪ್ಟ್ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಅಧ್ಯಕ್ಷ ಶ್ರೀ ಸಿಸಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು
ತಮ್ಮ ಭೇಟಿಯ ಸಮಯದಲ್ಲಿ ನಡೆದ ಮೊದಲ ಭಾರತ-ಈಜಿಪ್ಟ್ ಕಾರ್ಯತಂತ್ರದ ಸಂವಾದದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಈಜಿಪ್ಟ್ ನ ವಿದೇಶಾಂಗ ಸಚಿವರಾದ ಡಾ. ಬದರ್ ಅಬ್ದೆಲಟ್ಟಿ ವಿವರಿಸಿದರು
ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು
Posted On:
17 OCT 2025 4:23PM by PIB Bengaluru
ಈಜಿಪ್ಟ್ ನ ವಿದೇಶಾಂಗ ಸಚಿವ ಡಾ. ಬದರ್ ಅಬ್ದೆಲಟ್ಟಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಗಾಜಾ ಶಾಂತಿ ಒಪ್ಪಂದದಲ್ಲಿ ಈಜಿಪ್ಟ್ ನ ನಿರ್ಣಾಯಕ ಪಾತ್ರಕ್ಕಾಗಿ ಅಧ್ಯಕ್ಷರಾದ ಸಿಸಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಅದು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಗೆ ಕಾರಣವಾಗಲಿದೆ ಎಂದು ಅವರು ಆಶಿಸಿದರು.
ಭೇಟಿಯ ಸಮಯದಲ್ಲಿ ನಡೆದ ಮೊದಲ ಭಾರತ-ಈಜಿಪ್ಟ್ ಕಾರ್ಯತಂತ್ರದ ಸಂವಾದದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ವಿದೇಶಾಂಗ ಸಚಿವರಾದ ಅಬ್ದೆಲಟ್ಟಿ ತಮ್ಮ ಅವರು ವಿವರಿಸಿದರು.
ವ್ಯಾಪಾರ, ತಂತ್ರಜ್ಞಾನ, ಇಂಧನ, ರಕ್ಷಣೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ದ್ವಿಪಕ್ಷೀಯ ಸಹಕಾರದ ವಿವಿಧ ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೃಪ್ತಿ ವ್ಯಕ್ತಪಡಿಸಿದರು.
*****
(Release ID: 2180402)
Visitor Counter : 8
Read this release in:
Odia
,
English
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam