ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾನಾಜಿ ದೇಶಮುಖ್ ಅವರ ಜನ್ಮ ವಾರ್ಷಿಕೋತ್ಸವದಂದು ಪ್ರಧಾನಮಂತ್ರಿ ಗೌರವ ನಮನ 

Posted On: 11 OCT 2025 9:58AM by PIB Bengaluru

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಬಗ್ಗೆ ನಾನಾಜಿ ದೇಶಮುಖ್ ಅವರ ಗೌರವ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಅವರ ದೃಷ್ಟಿಕೋನವನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾನಾಜಿ ದೇಶಮುಖ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಿ ಗೌರವ ಸಲ್ಲಿಸಿದರು. ನಾನಾಜಿ ದೇಶಮುಖ್ ಅವರನ್ನು ದಾರ್ಶನಿಕ ಸಮಾಜ ಸುಧಾರಕ, ರಾಷ್ಟ್ರ ನಿರ್ಮಾಪಕ, ಸ್ವಾವಲಂಬನೆ ಮತ್ತು ಗ್ರಾಮೀಣ ಸಬಲೀಕರಣದ ಜೀವಮಾನದ ಪ್ರತಿಪಾದಕ ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ. ನಾನಾಜಿ ದೇಶಮುಖ್ ಅವರ ಜೀವನವು ಸಮಾಜಕ್ಕೆ ಸಮರ್ಪಣೆ, ಶಿಸ್ತು ಮತ್ತು ಸೇವೆಯ ಸಾಕಾರವಾಗಿದೆ ಎಂದು ಹೇಳಿದ್ದಾರೆ. 

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಿಂದ ನಾನಾಜಿ ದೇಶಮುಖ್ ಅವರು ಪಡೆದುಕೊಂಡಿದ್ದ ಆಳವಾದ ಸ್ಫೂರ್ತಿಯನ್ನು ಪ್ರಧಾನಮಂತ್ರಿ ಅವರು ಸ್ಮರಿಸಿಕೊಂಡಿದ್ದಾರೆ. ಜಯಪ್ರಕಾಶ್ ನಾರಾಯಣ್ ಅವರ ಬಗ್ಗೆ ನಾನಾಜಿ ಅವರ ಗೌರವ, ಯುವಜನತೆಯ ಅಭಿವೃದ್ಧಿ, ಸೇವೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ದೃಷ್ಟಿಕೋನವು ಜನತಾ ಪಕ್ಷದ ಮಂತ್ರಿಯಾಗಿದ್ದಾಗ ಅವರು ಹಂಚಿಕೊಂಡ ಸಂದೇಶದಲ್ಲಿ ಪ್ರತಿಫಲಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. 

ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:

“ಮಹಾನ್ ನಾನಾಜಿ ದೇಶಮುಖ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ದಾರ್ಶನಿಕ ಸಮಾಜ ಸುಧಾರಕ, ರಾಷ್ಟ್ರ ನಿರ್ಮಾಪಕ, ಸ್ವಾವಲಂಬನೆ ಮತ್ತು ಗ್ರಾಮೀಣ ಸಬಲೀಕರಣದ ಜೀವಮಾನದ ಪ್ರತಿಪಾದಕರಾಗಿದ್ದರು. ಅವರ ಜೀವನವು ಸಮರ್ಪಣೆ, ಶಿಸ್ತು ಮತ್ತು ಸಮಾಜ ಸೇವೆಯ ಸಾಕಾರವಾಗಿತ್ತು.”

"ನಾನಾಜಿ ದೇಶಮುಖ್ ಅವರು ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಿಂದ ಆಳವಾಗಿ ಪ್ರೇರಿತರಾಗಿದ್ದರು. ಜಯಪ್ರಕಾಶ್ ನಾರಾಯಣ್ ಅವರ ಮೇಲಿನ ಅವರ ಗೌರವ ಮತ್ತು ದೇಶದ ಯುವಜನರ ಅಭಿವೃದ್ಧಿ, ಸೇವೆ ಮತ್ತು ರಾಷ್ಟ್ರ ನಿರ್ಮಾಣದ ದೃಷ್ಟಿಕೋನವನ್ನು ಅವರು ಜನತಾ ಪಕ್ಷದ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಂಚಿಕೊಂಡ ಸಂದೇಶದಲ್ಲಿ ಕಾಣಬಹುದು."

 

*****

 


(Release ID: 2177793) Visitor Counter : 5