ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ವಿ. ಕೆ. ಮಲ್ಹೋತ್ರ ಅವರ ನಿವಾಸದಲ್ಲಿ ಪ್ರಧಾನಮಂತ್ರಿ ಅವರಿಂದ ಗೌರವ ನಮನ
Posted On:
30 SEP 2025 2:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿವಂಗತ ಶ್ರೀ ವಿ.ಕೆ. ಮಲ್ಹೋತ್ರಾ ಅವರ ನಿವಾಸಕ್ಕೆ ಭೇಟಿ ನೀಡಿ ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸಿ ಮೃತರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದರು.
ಶ್ರೀ ವಿ.ಕೆ. ಮಲ್ಹೋತ್ರಾ ಅವರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಮಂತ್ರಿ, ದೆಹಲಿಯ ಅಭಿವೃದ್ಧಿಗಾಗಿ ಅವರ ಪ್ರಯತ್ನಗಳು ಶಾಶ್ವತವಾಗಿ ಸ್ಮರಿಸಲ್ಪಡುತ್ತವೆ ಎಂದು ಹೇಳಿದರು.
X ಪೋಸ್ಟ್‌ನಲ್ಲಿ ಪ್ರಧಾನಮಂತ್ರಿ;
“ದಿವಂಗತ ಶ್ರೀ ವಿ.ಕೆ. ಮಲ್ಹೋತ್ರಾ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಗೌರವ ಸಲ್ಲಿಸಿದೆ. ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ದೆಹಲಿಯ ಅಭಿವೃದ್ಧಿಗೆ ಮತ್ತು ನಮ್ಮ ಪಕ್ಷದ ಉತ್ತಮ ಆಡಳಿತ ಕಾರ್ಯಸೂಚಿಯನ್ನು ಮುಂದುವರೆಸಲು ಅವರು ನೀಡಿದ ಕೊಡುಗೆ ಶಾಶ್ವತವಾಗಿ ಸ್ಮರಣೀಯ.”
*****
(Release ID: 2173100)
Visitor Counter : 5