ಪ್ರಧಾನ ಮಂತ್ರಿಯವರ ಕಛೇರಿ
ಇಟಾನಗರದಲ್ಲಿ ವ್ಯಾಪಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
Posted On:
22 SEP 2025 3:43PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಟಾನಗರದಲ್ಲಿ ವ್ಯಾಪಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಜಿ ಎಸ್ ಟಿ ಸುಧಾರಣೆಗಳು ಮತ್ತು ಜಿ ಎಸ್ ಟಿ ಬಚತ್ ಉತ್ಸವದ ಉದ್ಘಾಟನೆಗೆ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಲ್ಲದೆ, ಈ ಉಪಕ್ರಮಗಳು ಮೀನುಗಾರಿಕೆ, ಕೃಷಿ ಮತ್ತು ಇತರ ಸ್ಥಳೀಯ ಉದ್ಯಮಗಳಂತಹ ಪ್ರಮುಖ ವಲಯಗಳಿಗೆ ಹೇಗೆ ಪ್ರಯೋಜನಕಾರಿಯಾಗಲಿವೆ ಎಂಬುದನ್ನು ಕೂಡಾ ಎತ್ತಿ ತೋರಿಸಿದರು ಎಂದು ಶ್ರೀ ಮೋದಿ ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಇಂದು ಇಟಾನಗರದಲ್ಲಿ ವ್ಯಾಪಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಂವಾದ ನಡೆಸಲಾಯಿತು. ಅವರು ಜಿ ಎಸ್ ಟಿ ಸುಧಾರಣೆಗಳು ಮತ್ತು ಜಿ ಎಸ್ ಟಿ ಬಚತ್ ಉತ್ಸವದ ಉದ್ಘಾಟನೆಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಲ್ಲದೆ, ಈ ಉಪಕ್ರಮಗಳು ಮೀನುಗಾರಿಕೆ, ಕೃಷಿ ಮತ್ತು ಇತರ ಸ್ಥಳೀಯ ಉದ್ಯಮಗಳಂತಹ ಪ್ರಮುಖ ಕ್ಷೇತ್ರಗಳಿಗೆ ಹೇಗೆ ಪ್ರಯೋಜನಕಾರಿಯಾಗಲಿವೆ ಎಂಬುದನ್ನು ಅವರು ಎತ್ತಿ ತೋರಿಸಿದರು.
ಗುಣಮಟ್ಟದ ಮಾನದಂಡಗಳನ್ನು ಕಾಪಾಡಿಕೊಳ್ಳುವ ಮತ್ತು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಬಲವಾದ ಸಂಕಲ್ಪವನ್ನು ಬೆಳೆಸುವ ಮಹತ್ವವನ್ನು ನಾನು ಅವರಿಗೆ ಒತ್ತಿ ಹೇಳಿದೆ".
*****
(Release ID: 2169649)
Read this release in:
English
,
Urdu
,
Marathi
,
Hindi
,
Bengali-TR
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam