ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೇಷ್ಠ ಸಮೀಕರಣಕಾರನಾಗುತ್ತಿರುವ ಭಾರತದ ತಂತ್ರಜ್ಞಾನದ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 19 SEP 2025 12:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು, ಬೀದಿ ವ್ಯಾಪಾರಿಗಳಿಂದ ಹಿಡಿದು ಕಾರ್ಪೊರೇಟ್ ಕಾರ್ಯನಿರ್ವಾಹಕರವರೆಗೆ ಪ್ರತಿಯೊಬ್ಬರನ್ನೂ ಸಬಲೀಕರಣಗೊಳಿಸುವ ಮೂಲಕ ಹೇಗೆ ತಂತ್ರಜ್ಞಾನವು ಭಾರತದ ಶ್ರೇಷ್ಠ ಸಮಾನತಾವಾದಿಯಾಗಿ ಮಾರ್ಪಟ್ಟಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಬರೆದಿರುವ  ಲೇಖನವನ್ನು ಹಂಚಿಕೊಂಡಿದ್ದಾರೆ. "ಇಂಡಿಯಾ ಸ್ಟ್ಯಾಕ್, ಯುಪಿಐ, ಜಾಮ್ ಟ್ರಿನಿಟಿ ಮತ್ತು ಕೋವಿನ್‌ನಂತಹ ಉಪಕ್ರಮಗಳ ಮೂಲಕ ನಾವೀನ್ಯತೆ ಮತ್ತು ಹಣಕಾಸು ಸೇರ್ಪಡೆ ಹೇಗೆ ಜೀವನವನ್ನು ಪರಿವರ್ತಿಸಿದೆ, ಆಡಳಿತವನ್ನು ಸುಧಾರಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದೆ" ಎಂದು ಶ್ರೀ  ನರೇಂದ್ರ ಮೋದಿ ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ:

"ತಂತ್ರಜ್ಞಾನವು ಭಾರತದ ಶ್ರೇಷ್ಠ ಸಮೀಕರಣಕಾರಕವಾಗಿದ್ದು, ಬೀದಿ ವ್ಯಾಪಾರಿಗಳಿಂದ ಹಿಡಿದು ಕಾರ್ಪೊರೇಟ್ ಕಾರ್ಯನಿರ್ವಾಹಕರವರೆಗೆ ಎಲ್ಲರನ್ನೂ ಸಬಲೀಕರಣಗೊಳಿಸಿದೆ’’ ಎಂದು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಇಂಡಿಯಾ ಸ್ಟ್ಯಾಕ್, ಯುಪಿಐ, ಎಜೆಎಎಂ, ಟ್ರಿನಿಟಿ ಮತ್ತು ಕೋವಿನ್  ನಂತಹ ಉಪಕ್ರಮಗಳ ಮೂಲಕ, ನಾವೀನ್ಯತೆ ಮತ್ತು ಹಣಕಾಸು ಸೇರ್ಪಡೆ ಜೀವನವನ್ನು ಪರಿವರ್ತಿಸಿದೆ, ಆಡಳಿತವನ್ನು ಸುಧಾರಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲವರ್ಧನೆಗೊಳಿಸಿದೆ".

 

 

*****

 


(Release ID: 2168407)