ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾರಿಷಸ್ ಪ್ರಧಾನಮಂತ್ರಿ ಅವರ ಭಾರತ ಭೇಟಿ: ಫಲಪ್ರದತೆಯ ವಿವರ

Posted On: 11 SEP 2025 2:10PM by PIB Bengaluru

 

ಕ್ರ.ಸಂ

ಒಪ್ಪಂದಗಳು/ ಒಡಂಬಡಿಕೆಗಳು

1.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಮಾರಿಷಸ್ ಗಣರಾಜ್ಯದ ತೃತೀಯ ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನಾ ಸಚಿವಾಲಯದ ನಡುವೆ ಒಪ್ಪಂದ

2.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ - ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆ ಮತ್ತು ಮಾರಿಷಸ್ ಸಾಗರಶಾಸ್ತ್ರ ಸಂಸ್ಥೆ ನಡುವೆ ಒಪ್ಪಂದ

3.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ಬರುವ ʻಕರ್ಮಯೋಗಿ ಭಾರತʼ ಮತ್ತು ಮಾರಿಷಸ್ ಸರ್ಕಾರದ ಸಾರ್ವಜನಿಕ ಸೇವೆ ಮತ್ತು ಆಡಳಿತ ಸುಧಾರಣಾ ಸಚಿವಾಲಯದ ನಡುವೆ ಒಪ್ಪಂದ

4.

ಇಂಧನ ವಲಯದಲ್ಲಿ ಸಹಕಾರಕ್ಕಾಗಿ ಒಪ್ಪಂದ

5.

ಸಣ್ಣ ಅಭಿವೃದ್ಧಿ ಯೋಜನೆಗಳ ಎರಡನೇ ಹಂತದ ಅನುಷ್ಠಾನಕ್ಕೆ ಭಾರತದ ಹಣಕಾಸು ನೆರವಿನ ಕುರಿತ ಒಪ್ಪಂದ

6.

ಹೈಡ್ರೋಗ್ರಫಿ ಕ್ಷೇತ್ರದಲ್ಲಿ ಒಪ್ಪಂದದ ನವೀಕರಣ

7.

ಉಪಗ್ರಹಗಳು ಮತ್ತು ಉಡ್ಡಯನ ವಾಹನಗಳಿಗಾಗಿ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ದೂರಸಂಪರ್ಕ ಕೇಂದ್ರಗಳ ಸ್ಥಾಪನೆಗಾಗಿ ಹಾಗೂ ಬಾಹ್ಯಾಕಾಶ ಸಂಶೋಧನೆ, ವಿಜ್ಞಾನ ಮತ್ತು ತಂತ್ರಾಂಶ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಭಾರತ ಸರ್ಕಾರ - ಮಾರಿಷಸ್ ಸರ್ಕಾರದ ನಡುವೆ ಒಪ್ಪಂದ

ಘೋಷಣೆಗಳು:

1. ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ ಮತ್ತು ರೆಡ್ಯುಟ್‌ನ ಮಾರಿಷಸ್ ವಿಶ್ವವಿದ್ಯಾಲಯದ ನಡುವೆ ಒಪ್ಪಂದ

2. ಬೆಂಗಳೂರು ಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆ ಮತ್ತು ಮಾರಿಷಸ್ ವಿಶ್ವವಿದ್ಯಾಲಯ ನಡುವೆ ಒಪ್ಪಂದ

3. ಟ್ಯಾಮರಿಂಡ್‌ ಜಲಪಾತದಲ್ಲಿ 17.5 ಮೆಗಾವ್ಯಾಟ್ ತೇಲುವ ಸೌರ ಪಿವಿ ಯೋಜನೆಯನ್ನು ಸ್ಥಾಪಿಸುವ ಜಿ2ಜಿ ಪ್ರಸ್ತಾಪವನ್ನು ಮುಂದಕ್ಕೆ ಕೊಂಡೊಯ್ಯಲಾಗುವುದು. ಈ ನಿಟ್ಟಿನಲ್ಲಿ ʻಸಿಇಬಿʼ ಜೊತೆ ಒಪ್ಪಂದವನ್ನು ಅಂತಿಮಗೊಳಿಸಲು ʻಎನ್‌ಟಿಪಿಸಿ ಲಿಮಿಟೆಡ್‌ʼನ ತಂಡವು ಶೀಘ್ರದಲ್ಲೇ ಮಾರಿಷಸ್‌ಗೆ ಭೇಟಿ ನೀಡಲಿದೆ.

 

*****


(Release ID: 2165659) Visitor Counter : 2