ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಾ. ಆಂಡ್ರ್ಯೂ ಹೋಲ್ನೆಸ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 05 SEP 2025 10:52PM by PIB Bengaluru

ಜಮೈಕಾ ಪಕ್ಷವನ್ನು ಸತತ ಮೂರನೇ ಬಾರಿಗೆ ಗೆಲುವಿನತ್ತ ಮುನ್ನಡೆಸಿದ ಡಾ. ಆಂಡ್ರ್ಯೂ ಹೋಲ್ನೆಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. "ಭಾರತ-ಜಮೈಕಾ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಿ ನಮ್ಮ ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಸದಾ ಸಿದ್ದರಾಗಿದ್ದೇವೆ" ಎಂದು ಶ್ರೀ ಮೋದಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಎಕ್ಸ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಸತತ ಮೂರನೇ ಬಾರಿಗೆ ಜಮೈಕಾ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ಡಾ. ಆಂಡ್ರ್ಯೂ ಹೋಲ್ನೆಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ-ಜಮೈಕಾ ಸ್ನೇಹ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಿ, ನಮ್ಮ ಎರಡೂ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿದ್ದೇನೆ."

@AndrewHolnessJM

 

****

 


(Release ID: 2164337) Visitor Counter : 2