ಪ್ರಧಾನ ಮಂತ್ರಿಯವರ ಕಛೇರಿ
ಜಪಾನಿನ ವಿವಿಧ ಪ್ರಾಂತ್ಯಗಳ ರಾಜ್ಯಪಾಲರೊಂದಿಗೆ ಪ್ರಧಾನಮಂತ್ರಿ ಸಂವಾದ
Posted On:
30 AUG 2025 7:34AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್‌ನ ವಿವಿಧ ಪ್ರಾಂತ್ಯಗಳ ರಾಜ್ಯಪಾಲರನ್ನು ಭೇಟಿಯಾದರು. ಸಂವಾದದಲ್ಲಿ ಹದಿನಾರು ರಾಜ್ಯಪಾಲರು ಭಾಗವಹಿಸಿದ್ದರು.
ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ, ಭಾರತ-ಜಪಾನ್ ಸಮಕಾಲೀನ ಸಂಬಂಧಗಳು, ಎರಡೂ ದೇಶಗಳ ನಡುವಿನ ಪ್ರಾಚೀನ ನಾಗರಿಕ ಸಂಪರ್ಕಗಳಿಂದ ಸ್ಫೂರ್ತಿ ಪಡೆದುಕೊಳ್ಳುವ ಜತೆಗೆ ಅವುಗಳನ್ನು ಮುಂದುವರಿಸುತ್ತಾ ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಹೇಳಿದರು. ನಾನಾ ಕ್ಷೇತ್ರಗಳಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಾಂತ್ರಿಕ ಮತ್ತು ಜಾಗತಿಕ ಪಾಲುದಾರಿಕೆ ವೇಗ ಪಡೆದುಕೊಳ್ಳುತ್ತಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಟೋಕಿಯೊ ಮತ್ತು ದೆಹಲಿಯ ಸುತ್ತ ಕೇಂದ್ರೀಕೃತವಾಗಿರುವ ಸಂಬಂಧಗಳನ್ನು ಮೀರಿ, ರಾಜ್ಯ-ಪ್ರಾಂತ್ಯಗಳ ನಡುವಿನ ಸಂಬಂಧಗಳಿಗೆ ಹೊಸ ಉತ್ತೇಜನ ನೀಡುವ ಸಮಯ ಬಂದಿದೆ ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ, 15ನೇ ವಾರ್ಷಿಕ ಶೃಂಗಸಭೆಯಲ್ಲಿ ಆರಂಭಿಸಲಾದ ರಾಜ್ಯ-ಪ್ರಾಂತ್ಯಗಳ ನಡುವಿನ ಪಾಲುದಾರಿಕೆ ಉಪಕ್ರಮವನ್ನು ಅವರು ಬಲವಾಗಿ ಪ್ರತಿಪಾದಿಸಿದರು.ಇದು ಎರಡೂ ದೇಶಗಳ ನಡುವಿನ ವ್ಯಾಪಾರ, ತಂತ್ರಜ್ಞಾನ, ಪ್ರವಾಸೋದ್ಯಮ, ಕೌಶಲ್ಯ, ಭದ್ರತೆ ಮತ್ತು ಸಾಂಸ್ಕೃತಿಕ ಸಂಪರ್ಕಗಳಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು. ಹೊಸ ಉಪಕ್ರಮವನ್ನು ಬಳಸಿಕೊಳ್ಳಲು ಮತ್ತು ಉತ್ಪಾದನೆ, ತಂತ್ರಜ್ಞಾನ, ನಾವೀನ್ಯತೆ, ಸಂಚಾರ, ಮುಂದಿನ ಪೀಳಿಗೆಯ ಮೂಲಸೌಕರ್ಯ, ನವೋದ್ಯಮಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರಗಳಲ್ಲಿ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳುವಂತೆ ಅವರು ರಾಜ್ಯಪಾಲರುಗಳು ಮತ್ತು ಭಾರತೀಯ ರಾಜ್ಯ ಸರ್ಕಾರಗಳನ್ನು ಕರೆ ನೀಡಿದರು,
ಜಪಾನ್‌ನಲ್ಲಿರುವ ಪ್ರತಿಯೊಂದು ಪ್ರಾಂತ್ಯವು ತನ್ನದೇ ಆದ ಆರ್ಥಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಹೊಂದಿದೆ ಮತ್ತು ಅದೇ ರೀತಿ ಭಾರತೀಯ ರಾಜ್ಯಗಳು ತಮ್ಮದೇ ಆದ ವೈವಿಧ್ಯಮಯ ಸಾಮರ್ಥ್ಯಗಳನ್ನು ಹೊಂದಿವೆ ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ, ಭಾರತದ ಯಶೋಗಾಥೆಯಲ್ಲಿ ಭಾಗವಹಿಸುವಂತೆ ರಾಜ್ಯಪಾಲರುಗಳಿಗೆ ಆಹ್ವಾನ ನೀಡಿದರು. ಎರಡೂ ದೇಶಗಳು ಮಾಡಿಕೊಂಡಿರುವ ಯುವ ಮತ್ತು ಕೌಶಲ್ಯ ವಿನಿಮಯ ಬದ್ಧತೆಗಳಿಗೆ ಕೊಡುಗೆ ನೀಡುವಂತೆ ಮತ್ತು ಜಪಾನಿನ ತಂತ್ರಜ್ಞಾನವನ್ನು ಭಾರತೀಯ ಪ್ರತಿಭೆಗಳೊಂದಿಗೆ ಅತ್ಯುತ್ತಮವಾಗಿ ಸಂಯೋಜಿಸುವಂತೆ ಅವರು ಕರೆ ನೀಡಿದರು. ಭಾರತ-ಜಪಾನ್ ವ್ಯವಹಾರ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳನ್ನು ಮಹತ್ವಾಕಾಂಕ್ಷೆಯ ಮುಂದಿನ ಹಂತಕ್ಕೆ ಕೊಂಡೊಯ್ಯಲು ಉಪ-ರಾಷ್ಟ್ರೀಯ ಸಹಯೋಗಗಳು ಅತ್ಯಂತ ಪ್ರಮುಖವಾಗಿವೆ ಎಂದು ರಾಜ್ಯಪಾಲರುಗಳು ಉಲ್ಲೇಖಿಸಿದರು.
*****
(Release ID: 2162210)
Visitor Counter : 27
Read this release in:
Odia
,
Malayalam
,
English
,
Urdu
,
Marathi
,
हिन्दी
,
Bengali
,
Assamese
,
Manipuri
,
Bengali-TR
,
Punjabi
,
Gujarati
,
Tamil
,
Telugu