ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ ಮತ್ತು ಜಪಾನ್‌ ನಡುವೆ ಭದ್ರತಾ ಸಹಕಾರ ಕುರಿತು ಜಂಟಿ ಘೋಷಣೆ

Posted On: 29 AUG 2025 7:43PM by PIB Bengaluru

ಭಾರತ ಸರ್ಕಾರ ಮತ್ತು ಜಪಾನ್‌ (ಇನ್ನು ಮುಂದೆ 'ಎರಡು ಬದಿಗಳು' ಎಂದು ಉಲ್ಲೇಖಿಸಲಾಗುತ್ತದೆ),

ಸಾಮಾನ್ಯ ಹಿತಾಸಕ್ತಿ ಮತ್ತು ಮೌಲ್ಯಗಳ ಆಧಾರದ ಮೇಲೆ ಭಾರತ ಮತ್ತು ಜಪಾನ್‌ನ ವಿಶೇಷ ಕಾರ್ಯತಂತ್ರಗಳು ಮತ್ತು ಜಾಗತಿಕ ಸಹಭಾಗಿತ್ವದ ರಾಜಕೀಯ ಮುನ್ನೋಟ ಮತ್ತು ಉದ್ದೇಶಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ.

ಮುಕ್ತವಾದ, ಶಾಂತಿಯುತ, ಪ್ರಗತಿಪರ ಮತ್ತು ಯಾವುದೇ ರೀತಿಯ ಬಲವಂತ ಅಥವಾ ಒತ್ತಡ ಇಲ್ಲದ ಇಂಡೋ ಪೆಸಿಫಿಕ್‌ ಪ್ರದೇಶಕ್ಕೆ ಉಭಯ ದೇಶಗಳ ಪಾತ್ರ ಬಹುಮುಖ್ಯವಾಗಿದೆ.

ದ್ವಿಪಕ್ಷೀಯ ಭದ್ರತಾ ಸಹಕಾರದಲ್ಲಿ ಪ್ರಗತಿ ಸಾಧಿಸುವ ಮೂಲಕ ಮತ್ತು ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ಕಾರ್ಯತಂತ್ರಗಳು ಮತ್ತು ನೀತಿಗಳನ್ನು ರೂಪಿಸಲು ನೀಡಿದ ಆದ್ಯತೆ ಗಮನಾರ್ಹವಾಗಿದೆ.

ಸಂಪನ್ಮೂಲಗಳು ಮತ್ತು ತಂತ್ರಜ್ಞಾನ ಸಾಮರ್ಥ್ಯವನ್ನು ಗುರುತಿಸುವುದು.

ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಕ್ರಿಯಾಶೀಲತೆಯ ವಲಯದಲ್ಲಿ ಸಹಕಾರ ವೃದ್ಧಿಸಲು ಬದ್ಧ.

ಇಂಡೋ ಪೆಸಿಫಿಕ್‌ ಪ್ರದೇಶದಲ್ಲಿ ಮತ್ತು ಅದರ ಆಚೆಗೂ ಉಭಯ ದಶಗಳಿಗೂ ಅನ್ವಯವಾಗುವ ಭದ್ರತಾ ವಿಷಯಗಳಲ್ಲಿ ಬಲಿಷ್ಠವಾದ ಸಮನ್ವಯ ಸಾಧಿಸುವುದು.

ಕಾನೂನುಗಳ ಆಧಾರದ ಮೇಲೆ ಅಂತರರಾಷ್ಟ್ರೀಯ ಸಮನ್ವಯತೆ ಸಾಧಿಸಲು ಬದ್ಧ.

ಭದ್ರತಾ ಸಹಕಾರವನ್ನು ಜಂಟಿ ಘೋಷಣೆಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ ಸಹಭಾಗಿತ್ವದ ಹೊಸ ವೇದಿಕೆ ಸೃಷ್ಟಿಯಾಗಿದೆ. 


1.  ಉಭಯ ದೇಶಗಳ ರಕ್ಷಣಾ ಪಡೆಗಳ ನಡುವೆ ಸಮ್ಮಿಲನಕ್ಕೆ ಉತ್ತೇಜನ ನೀಡುವ ಮೂಲಕ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲು ಮತ್ತು ಸನ್ನದ್ಧತೆಯಿಂದ ಇರಲು ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ತೊಡಗುವುದು. ಆದರೆ, ಇದು ಕೆಲವು ವಲಯಗಳಿಗೆ ಸೀಮಿತವಾಗಿರುವುದಿಲ್ಲ. ಈ ಕೆಳಗಿನ ವಲಯಗಳಿಗೆ ಇರುತ್ತದೆ:

- (1) ನಮ್ಮ ರಕ್ಷಣಾ ಪಡೆಗಳ ನಡುವೆ ದ್ವಿಪಕ್ಷೀಯ ಅಭ್ಯಾಸವನ್ನು ಪರಸ್ಪರ ಆಯೋಜಿಸುವುದು. ಈ ಅಭ್ಯಾಸವು ವಿಸ್ತೃತವಾಗಿರುವ ಕ್ಷೇತ್ರಗಳಲ್ಲಿ ನಡೆಯಬೇಕು. ಉಭಯ ದೇಶಗಳು ಆಯೋಜಿಸುವ ಅಭ್ಯಾಸದ ಸಂದರ್ಭದಲ್ಲಿ ಸಂಕೀರ್ಣವಾಗಿರುವ ಮತ್ತು ಅತ್ಯಾಧುನಿಕ ವಿಷಯಗಳಿಗೆ ಆದ್ಯತೆ ನೀಡುವುದು.

- (2) ರಕ್ಷಣಾ ಪಡೆಗಳ ಜಂಟಿ ಮುಖ್ಯಸ್ಥರ ನಡುವೆ ಸಮಗ್ರ ಸಂವಾದದ ಕುರಿತು ಹೊಸ ನೀತಿಗಳನ್ನು ರೂಪಿಸುವುದು.

- (3) ಇಂಡೋ-ಪೆಸಿಫಿಕ್‌ನಲ್ಲಿ ಮಾನವೀಯ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಿದ್ಧತೆಗಾಗಿ ಮೂರು ವಲಯದ ಅಭ್ಯಾಸಗಳನ್ನು ಕೈಗೊಳ್ಳುವುದು

- (4) ವಿಶೇಷ ಕಾರ್ಯಾಚರಣೆ ಘಟಕಗಳ ನಡುವೆ ಸಹಯೋಗ ಸಾಧಿಸುವುದು.

- (5) ಜಪಾನ್ ಸ್ವಯಂ ರಕ್ಷಣಾ ಪಡೆಗಳು ಮತ್ತು ಭಾರತೀಯ ಸಶಸ್ತ್ರ ಪಡೆಗಳ ನಡುವೆ ಸರಬರಾಜು ಮತ್ತು ಸೇವೆಗಳ ಪರಸ್ಪರ ನಿಬಂಧನೆಗೆ ಸಂಬಂಧಿಸಿದ ಭಾರತ-ಜಪಾನ್ ಒಪ್ಪಂದವನ್ನು ವೃದ್ಧಿಸುವುದು

- (6) ಭಯೋತ್ಪಾದನೆ ನಿಗ್ರಹ, ಶಾಂತಿಪಾಲನಾ ಕಾರ್ಯಾಚರಣೆಗಳು ಮತ್ತು ಸೈಬರ್ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಲು ಅವಕಾಶಗಳನ್ನು ಅನ್ವೇಷಿಸಿವುದು.

- (7) ಪ್ರಸ್ತುತ ಸಂದರ್ಭದಲ್ಲಿ ಹೊಸದಾಗಿ ಸೃಷ್ಟಿಯಾಗುತ್ತಿರುವ ಭದ್ರತಾ ಅಪಾಯಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ಕೈಗೊಳ್ಳುವುದು ಸೇರಿದಂತೆ ಮಾಹಿತಿಯನ್ನು ಹಂಚಿಕೊಳ್ಳುವುದು

- (8) ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದುರಸ್ತಿ ಮತ್ತು ನಿರ್ವಹಣೆಗಾಗಿ ಪರಸ್ಪರರ ಸೌಲಭ್ಯಗಳ ಬಳಕೆಯನ್ನು ಉತ್ತೇಜಿಸುವುದು

- (9) ಯಾವುದೇ ರೀತಿಯ ಅಪಾಯಗಳಿಂದ ರಕ್ಷಣಾ ಪಡೆಗಳು ಮತ್ತು ಜನರನ್ನು ರಕ್ಷಿಸಲು ಕಾರ್ಯತಂತ್ರಗಳನ್ನು ರೂಪಿಸುವುದು. ಇದಕ್ಕಾಗಿ ಪತ್ತೆ ಕಾರ್ಯ, ವೈದ್ಯಕೀಯ ಪ್ರತಿಕ್ರಮಗಳು, ರಕ್ಷಣಾ ಉಪಕರಣಗಳು ಮತ್ತು ಪ್ರತಿಕ್ರಿಯೆ ತಂತ್ರಗಳನ್ನು ಆಧರಿಸಿದ ರಾಸಾಯನಿಕ, ಜೈವಿಕ ಮತ್ತು ವಿಕಿರಣದಿಂದ ರಕ್ಷಣೆಗಾಗಿ ಸಹಕರಿಸಲು ಅವಕಾಶಗಳನ್ನು ಅನ್ವೇಷಿಸುವುದು

2. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿಯುತ ಪರಿಸರಕ್ಕಾಗಿ ಕಡಲ ಭದ್ರತೆಯನ್ನು ಹೆಚ್ಚಿಸುವುದು ಮತ್ತು ನೌಕಾಪಡೆ ಮತ್ತು ಕರಾವಳಿ ಪಡೆಯ ಗಸ್ತು ಹೆಚ್ಚಿಸುವುದು. ಆದರೆ, ಇವುಗಳಿಗೆ ಸೀಮಿತವಾಗಿಲ್ಲ. ಇದರಲ್ಲಿ ಈ ಕೆಳಗಿನವುಗಳು ಸೇರಿವೆ,

- (1) ಜಪಾನ್‌ನ ಸ್ವಯಂ ರಕ್ಷಣಾ ಪಡೆಗಳು, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಅವರ ಕರಾವಳಿ ಪಡೆಗೆ ಸೇರಿದ ಹಡಗುಗಳ ಮೂಲಕ ಹೆಚ್ಚು ನಿಗಾವಹಿಸುವ ಕ್ರಮಗಳನ್ನು ಕೈಗೊಳ್ಳುವುದು.  

- (2) ಮಾಹಿತಿ ಸಮ್ಮಿಲನ ಕೇಂದ್ರ - ಹಿಂದೂ ಮಹಾಸಾಗರ ಪ್ರದೇಶ (ಐಎಫ್‌ಸಿ–ಐಒಆರ್‌) ಮತ್ತು ಸಮುದ್ರ ಪ್ರದೇಶದ ಜಾಗೃತಿಗಾಗಿ ಇಂಡೋ-ಪೆಸಿಫಿಕ್ ಪಾಲುದಾರಿಕೆ (ಐಪಿಎಂಡಿಎ) ಮೂಲಕ ಸಾಮಾನ್ಯ ಕಡಲ ಚಿತ್ರಣಕ್ಕಾಗಿ ಸಾಂದರ್ಭಿಕ ಅರಿವು ಮೂಡಿಸುವುದು ಮತ್ತು ದ್ವಿಪಕ್ಷೀಯ ಮತ್ತು ಪ್ರಾದೇಶಿಕವಾಗಿ ಸಹಕಾರ ವೃದ್ಧಿಸುವುದು.

- (3) ಕಡಲ್ಗಳ್ಳತನ, ಸಶಸ್ತ್ರ ದರೋಡೆ ಮತ್ತು ಇತರ ಅಂತರರಾಷ್ಟ್ರೀಯ ಅಪರಾಧಗಳ ವಿರುದ್ಧ ದ್ವಿಪಕ್ಷೀಯವಾಗಿ ಮತ್ತು ಪ್ರಾದೇಶಿಕ ಕ್ರಮಗಳ ಮೂಲಕ ಮತ್ತು ವಿವಿಧ ವೇದಿಕೆಗಳ ಮೂಲಕ ಕಾನೂನುಗಳನ್ನು ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಈ ವಿಷಯದಲ್ಲಿ ಏಷ್ಯಾದಲ್ಲಿ ಹಡಗುಗಳ ಸಶಸ್ತ್ರ ದರೋಡೆ ತಡೆಯಲು ಪ್ರಾದೇಶಿಕ ಸಹಕಾರ ಒಪ್ಪಂದ (ಆರ್‌ಇಸಿಎಎಪಿ) ಸೇರಿವೆ.

(4) ಜ್ಞಾನ ಹಂಚಿಕೊಳ್ಳುವುದು ಮತ್ತು ಸಾಮರ್ಥ್ಯ ವೃದ್ಧಿಸುವ ಕ್ರಮಗಳ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವಿಪತ್ತು ಒದಗುವ ಅಪಾಯಗಳನ್ನು ಕಡಿಮೆ ಮಾಡುವುದು ಮತ್ತು ಅದರ ವಿರುದ್ಧ ಸಿದ್ಧತೆ ನಡೆಸಲು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಯೋಗ (ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ ಮತ್ತು ಏಷ್ಯನ್ ವಿಪತ್ತು ಕಡಿಮೆಗೊಳಿಸುವ ಕೇಂದ್ರ ಸೇರಿದಂತೆ) ಸಾಧಿಸುವುದು.

- (5) ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗಿನ ತೃತೀಯ ದೇಶಗಳಿಗೆ ಕಡಲ ಭದ್ರತೆ ಮತ್ತು ಕಡಲ ಕಾನೂನು ಜಾರಿ ಸಹಾಯದ ಕುರಿತು ಸಮನ್ವಯ.

3. ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾದ ವಲಯಗಳಲ್ಲಿ ಸ್ಥಿತಿಸ್ಥಾಪಕತ್ವಕ್ಕಾಗಿ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪಾಲುದಾರರ ನಡುವೆ ತಾಂತ್ರಿಕ ಮತ್ತು ಕೈಗಾರಿಕಾ ಸಹಯೋಗವನ್ನು ಉತ್ತೇಜಿಸುವುದು ಮತ್ತು ಸುಗಮಗೊಳಿಸುವುದು, ಈ ಕೆಳಗಿನ ವಿಧಾನಗಳ ಮೂಲಕ:

- (1) ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ಸಹಕಾರ ಕಾರ್ಯವಿಧಾನದ ಅಡಿಯಲ್ಲಿ ಪರಸ್ಪರ ಅನುಕೂಲಕ್ಕಾಗಿ ಮತ್ತು ಬಳಕೆಗಾಗಿ ಸಹಕಾರ ಅವಕಾಶಗಳನ್ನು ಅನ್ವೇಷಿಸುವುದು. ಜತೆಗೆ ಅವುಗಳ ಪ್ರಸ್ತುತ ಮತ್ತು ಭವಿಷ್ಯದ ಭದ್ರತಾ ಅಗತ್ಯಗಳಿಗೆ ಅನುಗುಣವಾಗಿ ಉಪಕರಣಗಳು ಮತ್ತು ತಂತ್ರಜ್ಞಾನದ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗಾಗಿ ಸಹಕಾರ ನೀಡುವುದು.

- (2) ರಕ್ಷಣಾ ಮತ್ತು ಭದ್ರತಾ ಕ್ಷೇತ್ರದಲ್ಲಿ ನಿಯಮಿತವಾಗಿ ಉದ್ಯಮಗಳಿಗೆ ಭೇಟಿ ನೀಡುವುದು. ಈ ಮೂಲಕ ಪ್ರಸ್ತುತ ಸಂದರ್ಭದ ಮತ್ತು ಭವಿಷ್ಯದ ದೃಷ್ಟಿಯಿಂದ ನಿರ್ದಿಷ್ಟ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸುವ ಜತೆಗೆ, ನವೋದ್ಯಮ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಗ್ಗೆ ಹೆಚ್ಚು ಗಮನಹರಿಸುವುದು.

- (3) ಉಭಯ ದೇಶಗಳ ಕಾರ್ಯಾಚರಣೆಯ ವಿಧಾನಗಳನ್ನು ಪರಿಣಾಮಕಾರಿಯಾಗಿ ಬೆಂಬಲಿಸುವ ಹೊಸ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಹಂಚಿಕೆ ಮಾಡಿಕೊಳ್ಳುವುದು.

- (4) ಉನ್ನತ ಮಟ್ಟದ ತಂತ್ರಜ್ಞಾನ ಮತ್ತು ಉಪಕರಣಗಳು ಮತ್ತು ಪೂರೈಕೆ ಸರಪಳಿ ಸಂಪರ್ಕಗಳಲ್ಲಿ ಸಹಕಾರವನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಂಬಂಧಿತ ರಫ್ತು ನಿಯಂತ್ರಣ ನೀತಿಗಳ ಬಗ್ಗೆ ಪರಸ್ಪರ ತಿಳುವಳಿಕೆ ಹೊಂದುವುದು ಅಗತ್ಯವಿದೆ.

- (5) ಆರ್ಥಿಕ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಸಹಕಾರ ನೀಡುವುದು. ಇದರಲ್ಲಿ ಕಾರ್ಯತಂತ್ರದ ಕ್ಷೇತ್ರಗಳಲ್ಲಿನ ದೌರ್ಬಲ್ಯಗಳನ್ನು ತಗ್ಗಿಸುವುದು ಹಾಗೂ ಆರ್ಥಿಕ ದಬ್ಬಾಳಿಕೆ, ಮಾರುಕಟ್ಟೆಯೇತರ ನೀತಿಗಳು ಮತ್ತು ಅಭ್ಯಾಸಗಳು ಮತ್ತು ಅವುಗಳಿಂದ ಉಂಟಾಗುವ ಹೆಚ್ಚುವರಿ ಸಾಮರ್ಥ್ಯವನ್ನು ಪರಿಹರಿಸುವುದು, ಹಾಗೆಯೇ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು ಸೇರಿವೆ

- (6) ವಿವಿಧ ರೀತಿಯಲ್ಲಿ ಎದುರಾಗುವ ಅಪಾಯಗಳ ವಿರುದ್ಧ ಸನ್ನದ್ಧರಾಗುವ ನಿಟ್ಟಿನಲ್ಲಿ ಮಿಲಿಟರಿ ಔಷಧ ಮತ್ತು ಆರೋಗ್ಯ ಭದ್ರತೆಯಲ್ಲಿ ಪರಸ್ಪ ಸಹಕಾರ ನೀಡುವ ಅವಕಾಶಗಳನ್ನು ಅನ್ವೇಷಿಸುವುದು

- (7) ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಜಪಾನ್‌ನ ಸ್ವಾಧೀನ, ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್ ಏಜೆನ್ಸಿ (ಎಟಿಎಲ್‌ಎ) ನಡುವಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಹಕಾರವನ್ನು ವೃದ್ಧಿಸುವುದು.

- (8) ಪರಿಶೋಧನೆ, ಸಂಸ್ಕರಣೆ ಮತ್ತು ಸಂಸ್ಕರಣೆಗಾಗಿ ಮಾಹಿತಿ ವಿನಿಮಯ ಮತ್ತು ತಂತ್ರಜ್ಞಾನ ಸೇರಿದಂತೆ ಅಪರೂಪದ ಖನಿಜಗಳ ಕ್ಷೇತ್ರದಲ್ಲಿ ಸಹಕಾರ

4. ಪ್ರಮುಖವಾಗಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕವಾಗಿ ಎದುರಾಗುವ ಅಪಾಯಗಳ ವಿರುದ್ಧ ಭದ್ರತಾ ಸಹಕಾರ ವೃದ್ಧಿಸುವ ಜತೆಗೆ, ಪ್ರಸ್ತುತ ಸಂದರ್ಭ ಮತ್ತು ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಹೊಸದಾಗಿ ಮತ್ತು ನಿರ್ಣಾಯಕ ಹಾಗೂ ಹೊಸ, ಹೊಸ ತಂತ್ರಜ್ಞಾನಗಳಿಂದ ಎದುರಾಗುವ ಸವಾಲುಗಳಿಗೆ ಪ್ರತಿಕ್ರಿಯಿಸಲು ಅವಕಾಶಗಳನ್ನು ಸೃಷ್ಟಿಸಲು ಮಾರ್ಗೋಪಾಯಗಳನ್ನು ಈ ಮೂಲಕ ಕಂಡುಕೊಳ್ಳುವುದು:

- (1) ಡಿಜಿಟಲ್ ವಲಯದಲ್ಲಿ ಮತ್ತು ಮಾನವರಹಿತ ವ್ಯವಸ್ಥೆಗಳಲ್ಲಿ ಮತ್ತು ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಮೂಲಕ ಭಯೋತ್ಪಾದನೆ ಮತ್ತು ಮೂಲಭೂತ ಉಗ್ರವಾದ ನಿಗ್ರಹಿಸುವುದು ಹಾಗೂ ಸಂಘಟಿತ ಅಂತರರಾಷ್ಟ್ರೀಯ ಅಪರಾಧಗಳನ್ನು ಗುಪ್ತಚರ ಮತ್ತು ಅನುಭವಗಳನ್ನು ಕುರಿತಾದ ವಿಷಯಗಳನ್ನು ಹಂಚಿಕೊಳ್ಳುವುದು.

- (2) ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳುವಾಗ ಎಐ, ರೊಬೊಟಿಕ್ಸ್, ಕ್ವಾಂಟಮ್, ಸೆಮಿಕಂಡಕ್ಟರ್, ಸ್ವಾಯತ್ತ ತಂತ್ರಜ್ಞಾನ, ಭವಿಷ್ಯದ ನೆಟ್‌ವರ್ಕ್‌ಗಳು, ಜೈವಿಕ ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯಂತಹ ತಂತ್ರಜ್ಞಾನಗಳಲ್ಲಿನ ಪ್ರಗತಿಯೊಂದಿಗೆ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಶೈಕ್ಷಣಿಕ ಮತ್ತು ಕೈಗಾರಿಕಾ ಸಹಯೋಗವನ್ನು ಉತ್ತೇಜಿಸುವುದು.

- (3) ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ದೃಢತೆಯನ್ನು ಒಳಗೊಂಡಂತೆ ಅವರ ಸೈಬರ್ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು.

(–4) ರಾಷ್ಟ್ರೀಯ ಭದ್ರತೆ, ಉಪಗ್ರಹ ಆಧಾರಿತ ದಿಕ್ಕುಗಳನ್ನು ಗುರುತಿಸುವುದು, ಭೂ ವೀಕ್ಷಣೆ ಮತ್ತು ಬಾಹ್ಯಾಕಾಶ ವಲಯದಲ್ಲಿ ಪರಸ್ಪರ ನಿರ್ಧರಿಸಿದ ಇತರ ಕ್ಷೇತ್ರಗಳಿಗೆ ಆಯಾ ಬಾಹ್ಯಾಕಾಶ ವ್ಯವಸ್ಥೆಗಳ ಬಳಕೆಯನ್ನು ವಿಸ್ತರಿಸುವುದು

- (5) ಬಾಹ್ಯಾಕಾಶದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಬಾಹ್ಯಾಕಾಶ ಅವಶೇಷಗಳ ನಿರ್ವಹಣೆ ಮತ್ತು ನಿಗಾವಹಿಸುವುದು ಹಾಗೂ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ಸಮಾಲೋಚನೆಗಳನ್ನು ನಡೆಸುವುದು

5. ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ಉದ್ದೇಶಗಳನ್ನು ಉತ್ತೇಜಿಸುವುದು ಮತ್ತು ಸಂಬಂಧಿತ ಬಹುಪಕ್ಷೀಯ ಮತ್ತು ಬಹುಪಕ್ಷೀಯ ಗುಂಪುಗಳಲ್ಲಿ ನೀತಿಗಳು ಮತ್ತು ಸ್ಥಾನಗಳನ್ನು ಸಂಘಟಿಸುವುದು, ಇವುಗಳನ್ನು ಈ ಕೆಳಗಿನ ವಿಧಾನಗಳಲ್ಲಿ ಅನುಸರಿಸುವುದು.

- (1) ಆಸಿಯಾನ್ ಕೇಂದ್ರೀಕೃತವಾಗುವುದು ಮತ್ತು ಒಗ್ಗಟ್ಟಾಗುವುದನ್ನು ಬೆಂಬಲಿಸುವುದು, ಆಸಿಯಾನ್ ನೇತೃತ್ವದ ಚೌಕಟ್ಟುಗಳು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಆಸಿಯಾನ್ ದೃಷ್ಟಿಕೋನವನ್ನು ಬೆಂಬಲಿಸುವುದು ಮತ್ತು ಪ್ರದೇಶಕ್ಕಾಗಿ ಪರಸ್ಪರರ ಕಾರ್ಯತಂತ್ರದ ಆದ್ಯತೆಗಳಿಗೆ ಕೊಡುಗೆ ನೀಡುವುದು, ಅವುಗಳೆಂದರೆ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ ಮತ್ತು ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್ (ಎಫ್‌ಒಐಪಿ)

- (2) ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ವಿಶ್ವಾಸಾರ್ಹ, ಸುಸ್ಥಿರ, ಸ್ಥಿತಿಸ್ಥಾಪಕ ಮತ್ತು ಗುಣಮಟ್ಟದ ಮೂಲಸೌಕರ್ಯ ಹೂಡಿಕೆಯನ್ನು ಉತ್ತೇಜಿಸುವುದು

- (3) ಒತ್ತಡದಿಂದ ಅಥವಾ ಬಲವಂತದ ಮೂಲಕ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುವ ಯಾವುದೇ  ಅಸ್ಥಿರಗೊಳಿಸುವ ಅಥವಾ ಏಕಪಕ್ಷೀಯ ಕ್ರಮಗಳನ್ನು ವಿರೋಧಿಸುವುದು. ಸಮುದ್ರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ರೂಪಿಸಿದ ಕಾನೂನುಗಳ ಅನ್ವಯ ವಿವಾದಗಳ ಶಾಂತಿಯುತ ಇತ್ಯರ್ಥ ಹಾಗೂ ಅಂತರರಾಷ್ಟ್ರೀಯ ಕಾನೂನುಗಳನ್ನು ಬೆಂಬಲಿಸುವುದು.

- (4) ಕ್ವಾಡ್‌ನೊಳಗೆ ಸಹಕಾರವನ್ನು ಭದ್ರಗೊಳಿಸುವುದು ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಪ್ರಗತಿಗಾಗಿ ಕ್ವಾಡ್‌ನ ಸಕಾರಾತ್ಮಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಯನ್ನು ಮುನ್ನಡೆಸುವುದು

- (5) ಕಾಯಂ ಮತ್ತು ಕಾರ್ಯ ಅಲ್ಲದ ವರ್ಗಗಳ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಸುಧಾರಣೆಯನ್ನು ಉತ್ತೇಜಿಸುವುದು ಮತ್ತು ವಿಸ್ತೃತ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಕಾಯಂ ಸದಸ್ಯತ್ವಕ್ಕಾಗಿ ಪರಸ್ಪರರ ಉಮೇದುವಾರಿಕೆಯನ್ನು ಬೆಂಬಲಿಸುವುದು

- (6) ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ಸ್ಪರೂಪಗಳನ್ನು ಖಂಡಿಸುವುದು. ಜತೆಗೆ, ಭಯೋತ್ಪಾದಕ ಚಟುವಟಿಕೆಗಳಿಗೆ ಭೌತಿಕ ಮತ್ತು ಆರ್ಥಿಕ ಬೆಂಬಲವನ್ನು ತಕ್ಷಣವೇ ಸ್ಥಗಿತಗೊಳಿಸಲು ಒಟ್ಟಾಗಿ ಕಾರ್ಯನಿರ್ವವಹಿಸುವುದು. ಭಯೋತ್ಪಾದನೆಯನ್ನು ಎದುರಿಸಲು ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮತ್ತು ವಿಶ್ವಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಸಮಗ್ರವಾದ ನಿರ್ಣಯವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದು

- (7) ಪರಮಾಣು ಶಸ್ತ್ರಾಸ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ಹಾಗೂ  ಪರಮಾಣು ಪ್ರಸರಣ ಮತ್ತು ಪರಮಾಣು ಭಯೋತ್ಪಾದನೆಯನ್ನು ಕೊನೆಗೊಳಿಸಲು ಬದ್ಧತೆಯನ್ನು ವ್ಯಕ್ತಪಡಿಸುವುದಾಗಿದೆ. ಶಾನನ್ ಆದೇಶದ ಆಧಾರದ ಮೇಲೆ ನಿಶ್ಯಸ್ತ್ರೀಕರಣದ ಸಮ್ಮೇಳನದಲ್ಲಿ ತಾರತಮ್ಯವಿಲ್ಲದ, ಬಹುಪಕ್ಷೀಯ ಮತ್ತು ಅಂತರರಾಷ್ಟ್ರೀಯವಾಗಿ ಮತ್ತು ಪರಿಣಾಮಕಾರಿಯಾಗಿ ಪರಿಶೀಲಿಸಬಹುದಾದ ವಿದಳನ ವಸ್ತುಗಳ  ಒಪ್ಪಂದದ ಕುರಿತು ಮಾತುಕತೆಗಳನ್ನು ತಕ್ಷಣ ಪ್ರಾರಂಭಿಸುವುದು

- (8) ಜಾಗತಿಕ ಪ್ರಸರಣ ನಿಷೇಧ ಪ್ರಯತ್ನಗಳನ್ನು ಬಲಪಡಿಸುವ ಗುರಿಯೊಂದಿಗೆ ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದು

6. ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಉಭಯ ದೇಶಗಳ ವಿದೇಶಾಂಗ ಮತ್ತು ರಕ್ಷಣಾ ಸಚಿವರ 2+2 ಸಭೆಗಳ ಮೂಲಕ ಈಗಿರುವ ದ್ವಿಪಕ್ಷೀಯ ಸಮಾಲೋಚನೆಗಳನ್ನು ಮತ್ತಷ್ಟು ಬಲಪಡಿಸುವುದು ಮತ್ತು ವಿನಿಮಯ ಮಾಡಿಕೊಳ್ಳುವುದು. ಈ ವಿಷಯಗಳು ಕೆಳಗಿನಂತಿವೆ:

- (1) ಭಾರತ ಮತ್ತು ಜಪಾನ್ ಎದುರಿಸುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಸಮಗ್ರವಾಗಿ ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಪ್ರತಿ ವರ್ಷ ಮಾತುಕತೆ ಆಯೋಜಿಸುವುದು.

- (2) ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ಆರ್ಥಿಕ ಭದ್ರತೆಯ ಕುರಿತು ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ಜಪಾನ್‌ನ ವಿದೇಶಾಂಗ ವ್ಯವಹಾರಗಳ ಕುರಿತಾದ ಉಪ ಸಚಿವರ ನಡುವೆ ಮಾತುಕತೆ ಆಯೋಜಿಸುವುದು ಹಾಗೂ ಪರಸ್ಪರ ಆರ್ಥಿಕ ಭದ್ರತೆಯನ್ನು ಹೆಚ್ಚಿಸಲು ಮತ್ತು ಕೈಗಾರಿಕೆಗಳು ಮತ್ತು ತಂತ್ರಜ್ಞಾನದ ವಿನಿಯಮಯಕ್ಕಾಗಿ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಳ್ಳುವುದು.

- (3) ಜಪಾನ್ ಸ್ವಯಂ-ರಕ್ಷಣಾ ಪಡೆಗಳು ಮತ್ತು ಭಾರತೀಯ ಸಶಸ್ತ್ರ ಪಡೆಗಳ ನಡುವೆ ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಮಾತುಕತೆ

- (4) ಭಾರತೀಯ ಕರಾವಳಿ ಪಡೆ ಮತ್ತು ಜಪಾನ್ ಕರಾವಳಿ ಪಡೆ ನಡುವಿನ ಸಹಕಾರದ ಕುರಿತಾದ ಜ್ಞಾಪಕ ಪತ್ರದ ಆಧಾರದ ಮೇಲೆ ಕರಾವಳಿ ಪಡೆಯ ಕಮಾಂಡೆಂಟ್‌ಗಳ ಮಟ್ಟದಲ್ಲಿ ಸಭೆ

- (5) ವ್ಯಾಪಾರ ಸಹಯೋಗದ ಸಾಧ್ಯತೆಗಳನ್ನು ಗುರುತಿಸುವ ಮೂಲಕ ಭಾರತ-ಜಪಾನ್ ರಕ್ಷಣಾ ಉದ್ಯಮ ವೇದಿಕೆಯನ್ನು ಪುನರುಜ್ಜೀವನಗೊಳಿಸುವುದು.

- (6) ಭದ್ರತಾ ಸವಾಲುಗಳು ಮತ್ತು ಹೊಸ ಸಹಕಾರಕ್ಕಾಗಿ ಆಲೋಚನೆಗಳಿಗಾಗಿ ಭಾರತ ಮತ್ತು ಜಪಾನ್‌ನ ಚಿಂತಕರ ನಡುವೆ ಸಂವಾದ ಆಯೋಜಿಸುವುದು.

 

*****
 


(Release ID: 2162205) Visitor Counter : 22