ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರಪತಿಗಳು 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಮಾಡಿರುವ ಭಾಷಣವು ನಮ್ಮ ದೇಶದ ಸಾಮೂಹಿಕ ಪ್ರಗತಿ ಮತ್ತು ಮುಂದಿರುವ ಅವಕಾಶಗಳನ್ನು ತೆರೆದಿಟ್ಟಿದೆ : ಪ್ರಧಾನಮಂತ್ರಿ
Posted On:
14 AUG 2025 8:27PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಮಾಡಿರುವ ಚಿಂತನಶೀಲ ಭಾಷಣವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ನಮ್ಮ ರಾಷ್ಟ್ರದ ಸಾಮೂಹಿಕ ಪ್ರಗತಿ ಮತ್ತು ಮುಂದಿನ ಅವಕಾಶಗಳ ಬಗ್ಗೆ ಈ ಭಾಷಣ ವಿವರಿಸಿದ್ದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಪ್ರತಿಯೊಬ್ಬ ನಾಗರಿಕರಿಗೂ ಕರೆ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
“ರಾಷ್ಟ್ರಪತಿಗಳು ಸ್ವಾತಂತ್ರ್ಯ ದಿನದ ಮುನ್ನಾದಿನದಂದು, ನಮ್ಮ ರಾಷ್ಟ್ರದ ಸಾಮೂಹಿಕ ಪ್ರಗತಿ ಮತ್ತು ಮುಂದಿನ ಅವಕಾಶಗಳನ್ನು ವಿವರಿಸುತ್ತಾ ಚಿಂತನಶೀಲ ಭಾಷಣ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಟ್ಟ ತ್ಯಾಗಗಳನ್ನು ಅವರು ನೆನಪು ಮಾಡಿಕೊಟ್ಟಿದ್ದಾರೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರೂ ಕೊಡುಗೆ ನೀಡಬೇಕೆಂದು ಕರೆ ನೀಡಿದ್ದಾರೆ.
@rashtrapatibhvn”
“ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಮಾನ್ಯ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಅತ್ಯಂತ ಮುಖ್ಯವಾದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಸಾಮೂಹಿಕ ಪ್ರಯತ್ನಗಳಿಂದ ದೇಶದ ಪ್ರಗತಿ ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ವಿವರಿಸಿದ್ದಾರೆ. ಸ್ವಾತಂತ್ರ್ಯದ ಕನಸನ್ನು ನನಸಾಗಿಸಿದ ತ್ಯಾಗಗಳನ್ನು ರಾಷ್ಟ್ರಪತಿಗಳು ನಮಗೆ ನೆನಪಿಸಿದ್ದಾರೆ. ಜೊತೆಗೆ, ದೇಶವಾಸಿಗಳು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
@rashtrapatibhvn”
****
(Release ID: 2156676)