ಪ್ರಧಾನ ಮಂತ್ರಿಯವರ ಕಛೇರಿ
ವಿಭಜನೆ ಭಯಾನಕತೆ ಸ್ಮರಣಾರ್ಥ ದಿನದ ಅಂಗವಾಗಿ ದೇಶ ವಿಭಜನೆಯಿಂದ ಬಾಧಿತರಾದವರ ಧೈರ್ಯ ಮತ್ತು ಚೇತರಿಕೆಯ ಸ್ಥೈರ್ಯಕ್ಕೆ ಪ್ರಧಾನಮಂತ್ರಿ ಗೌರವ ನಮನ
Posted On:
14 AUG 2025 8:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತ ಇತಿಹಾಸದ ಅತ್ಯಂತ ದುರಂತ ಅಧ್ಯಾಯಗಳಲ್ಲಿ ಒಂದಾದ ವಿಭಜನೆ ಭಯಾನಕತೆಯ ನೆನಪಿನ ದಿನದ ಅಂಗವಾಗಿ ದೇಶ ವಿಭಜನೆಯ ಸಮಯದಲ್ಲಿ ಅಸಂಖ್ಯಾತ ಜನರು ಅನುಭವಿಸಿದ ಅಪಾರ ವಿಪ್ಲವ ಮತ್ತು ನೋವನ್ನು ಸ್ಮರಿಸಿದ್ದಾರೆ.
ವಿಭಜನೆಯಿಂದ ಬಾಧಿತರಾದವರ ಮನೋಸ್ಥೈರ್ಯ ಮತ್ತು ಚೇತರಿಕೆಯ ದಿಟ್ಟತನವನ್ನು ಪ್ರಧಾನಮಂತ್ರಿ ಗೌರವಪೂರ್ವಕವಾಗಿ ನಮಿಸಿದ್ದಾರೆ. ಊಹಿಸಲು ಅಸಾಧ್ಯವಾದ ನಷ್ಟವನ್ನು ಅವರು ಎದುರಿಸಿದರೂ ತಮ್ಮ ಜೀವನವನ್ನು ಮರುರೂಪಿಸಿಕೊಳ್ಳಲು ಅವರು ತೋರಿದ ಶಕ್ತಿಯ ಬಗ್ಗೆ ಪ್ರಧಾನಮಂತ್ರಿ ತಿಳಿಸಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
"ನಮ್ಮ ಇತಿಹಾಸದ ದುರಂತ ಅಧ್ಯಾಯದ ಸಮಯದಲ್ಲಿ ಅಸಂಖ್ಯಾತ ಜನರು ಅನುಭವಿಸಿದ ವಿಪ್ಲವ ಮತ್ತು ವೇದನೆಯನ್ನು ಸ್ಮರಿಸುತ್ತಾ ಭಾರತವು #PartitionHorrorsRemembranceDay ಆಚರಿಸುತ್ತದೆ. ಇದು ಅವರ ಸ್ಥೈರ್ಯವನ್ನು…. ಊಹಿಸಲಾಗದ ನಷ್ಟವನ್ನು ಎದುರಿಸುವ ಅವರ ಸಾಮರ್ಥ್ಯ ಮತ್ತು ಪುನಃ ಪುಟಿದೇಳುವ ಅವರ ಶಕ್ತಿಯನ್ನು ಗೌರವಿಸುವ ದಿನವಾಗಿದೆ... ಬಾಧಿತರಾದ ಅನೇಕರು ತಮ್ಮ ಜೀವನವನ್ನು ಮತ್ತೆ ರೂಪಿಸಿಕೊಂಡು ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಲು ಮುಂದಾದರು. ನಮ್ಮ ದೇಶವನ್ನು ಒಗ್ಗೂಡಿಸಿರುವ ಸಾಮರಸ್ಯದ ಬಂಧಗಳನ್ನು ಬಲಪಡಿಸುವ ನಮ್ಮ ನಿರಂತರ ಜವಾಬ್ದಾರಿಯನ್ನು ಈ ದಿನ ನೆನಪಿಸುತ್ತದೆ."
भारत आज विभाजन विभीषिका स्मृति दिवस के माध्यम से देश के बंटवारे की त्रासदी को याद कर रहा है। यह हमारे इतिहास के उस दुखद अध्याय के दौरान असंख्य लोगों द्वारा झेले गए दुख और पीड़ा को स्मरण करने का दिन है। यह दिन उनके साहस और आत्मबल को सम्मान देने का भी अवसर है। इन्होंने अकल्पनीय कष्ट सहने के बाद भी एक नई शुरुआत करने का साहस दिखाया। विभाजन से प्रभावित ज्यादातर लोगों ने ना सिर्फ अपने जीवन को फिर से संवारा, बल्कि असाधारण उपलब्धियां भी हासिल कीं। यह दिन हमें अपनी उस जिम्मेदारी की भी याद दिलाता है कि हम सौहार्द और एकता की भावना को सुदृढ़ बनाए रखें, जो हमारे देश को एक सूत्र में पिरोकर रखती है।
#PartitionHorrorsRemembranceDay
*****
(Release ID: 2156288)
Read this release in:
English
,
Urdu
,
Hindi
,
Marathi
,
Bengali
,
Manipuri
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam