ಪ್ರಧಾನ ಮಂತ್ರಿಯವರ ಕಛೇರಿ
ಹೀರೋಸ್ ಎಕ್ರೆ ಸ್ಮಾರಕದಲ್ಲಿ ನಮೀಬಿಯಾದ ಸಂಸ್ಥಾಪಕ ಪಿತಾಮಹ ಮತ್ತು ಮೊದಲ ರಾಷ್ಟ್ರಾಧ್ಯಕ್ಷ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
09 JUL 2025 7:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀರೋಸ್ ಎಕ್ರೆ ಸ್ಮಾರಕದಲ್ಲಿ ನಮೀಬಿಯಾದ ಸಂಸ್ಥಾಪಕ ಪಿತಾಮಹ ಮತ್ತು ಪ್ರಥಮ ರಾಷ್ಟ್ರಾಧ್ಯಕ್ಷ ಡಾ. ಸ್ಯಾಮ್ ನುಜೋಮಾ ಅವರಿಗೆ ಗೌರವ ನಮನ ಸಲ್ಲಿಸಿದರು.
ಡಾ. ಸ್ಯಾಮ್ ನುಜೋಮಾ ಅವರು ನಮೀಬಿಯಾದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೂರದೃಷ್ಟಿಯ ನಾಯಕ ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ಸ್ವತಂತ್ರ ನಮೀಬಿಯಾದ ಮೊದಲ ರಾಷ್ಟ್ರಾಧ್ಯಕ್ಷರಾಗಿ, ಡಾ. ನುಜೋಮಾ ಅವರು ಆ ದೇಶದ ರಾಷ್ಟ್ರನಿರ್ಮಾಣಕ್ಕೆ ಸ್ಪೂರ್ತಿದಾಯಕ ಕೊಡುಗೆ ನೀಡಿದ್ದಾರೆ. ಅವರ ಪರಂಪರೆಯು ಪ್ರಪಂಚದಾದ್ಯಂತ ಜನರನ್ನು ಪ್ರೇರೇಪಿಸುತ್ತದೆ.
ಡಾ. ಸ್ಯಾಮ್ ನುಜೋಮಾ ಅವರು ಭಾರತದ ಉತ್ತಮ ಸ್ನೇಹಿತರಾಗಿದ್ದರು. 1986ರಲ್ಲಿ ನವ ದೆಹಲಿಯಲ್ಲಿ ನಡೆದ ನಮೀಬಿಯಾದ ಮೊದಲ ರಾಜತಾಂತ್ರಿಕ ನಿಯೋಗ [ಆ ಸಮಯದಲ್ಲಿ ಸ್ವಪೋ ಆಗಿತ್ತು] ಸ್ಥಾಪನೆಯ ಸಂದರ್ಭದಲ್ಲಿನ ಅವರ ಘನ ಉಪಸ್ಥಿತಿಯನ್ನು ಎಂದಿಗೂ ಭಾರತದ ಜನರು ಗೌರವಿಸುತ್ತಾರೆ ಮತ್ತು ಪ್ರೀತಿಯಿಂದ ಸ್ಮರಿಸುತ್ತಾರೆ.
*****
(रिलीज़ आईडी: 2143600)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam