ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ಯೂನಸ್ ಐರಿಸ್‌ನಲ್ಲಿ ಜನರಲ್ ಜೋಸ್ ಡಿ ಸ್ಯಾನ್ ಮಾರ್ಟಿನ್ ಅವರಿಗೆ ಪ್ರಧಾನಮಂತ್ರಿ ಗೌರವ  ಸಲ್ಲಿಸಿದರು

प्रविष्टि तिथि: 06 JUL 2025 12:08AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಬ್ಯೂನಸ್ ಐರಿಸ್‌ನಲ್ಲಿ ಜನರಲ್ ಜೋಸ್ ಡಿ ಸ್ಯಾನ್ ಮಾರ್ಟಿನ್ ಅವರಿಗೆ ಗೌರವ ಸಲ್ಲಿಸಿದರು. ಜನರಲ್ ಜೋಸ್ ಡಿ ಸ್ಯಾನ್ ಮಾರ್ಟಿನ್ ಅವರ ಜೀವನವು ಅರ್ಜೆಂಟೀನಾದ ಜನರಿಗೆ ದೇಶಭಕ್ತಿ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ ಎಂದು ಶ್ರೀ ಮೋದಿಯವರು ತಿಳಿಸಿದ್ದಾರೆ.

ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್‌ ಮಾಡಿ;

"ಬ್ಯೂನಸ್ ಐರಿಸ್‌ನಲ್ಲಿ ಜನರಲ್ ಜೋಸ್ ಡಿ ಸ್ಯಾನ್ ಮಾರ್ಟಿನ್ ಅವರಿಗೆ ಗೌರವ ಸಲ್ಲಿಸಿದೆನು. ಅವರ ಧೈರ್ಯ ಮತ್ತು ನಾಯಕತ್ವವು ಅರ್ಜೆಂಟೀನಾದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರ ಜೀವನವು ಅರ್ಜೆಂಟೀನಾದ ಜನರಿಗೆ ದೇಶಭಕ್ತಿ ಮತ್ತು ದೃಢಸಂಕಲ್ಪದ ಸಂಕೇತವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

 

 

*****

 


(रिलीज़ आईडी: 2142631) आगंतुक पटल : 10
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu