ಪ್ರಧಾನ ಮಂತ್ರಿಯವರ ಕಛೇರಿ
ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ
ಹೆಮ್ಮೆಯ ಪ್ರಜಾಪ್ರಭುತ್ವ ಮತ್ತು ಸ್ನೇಹಪರ ರಾಷ್ಟ್ರದ ಚುನಾಯಿತ ಪ್ರತಿನಿಧಿಗಳೆ, ನಿಮ್ಮೆಲ್ಲರ ಮುಂದೆ ನಿಲ್ಲಲು ನನಗೆ ತುಂಬಾ ಗೌರವ ತಂದಿದೆ: ಪ್ರಧಾನಮಂತ್ರಿ
ಭಾರತದ ಪಾಲಿಗೆ ಪ್ರಜಾಪ್ರಭುತ್ವವು ಒಂದು ಜೀವನ ವಿಧಾನವಾಗಿದೆ: ಪ್ರಧಾನಮಂತ್ರಿ
ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ಶತಮಾನಗಳಷ್ಟು ಹಳೆಯ ಬಾಂಧವ್ಯದಲ್ಲಿ ಬೇರೂರಿರುವ ಸಂಬಂಧವನ್ನು ಹಂಚಿಕೊಂಡಿವೆ: ಪ್ರಧಾನಮಂತ್ರಿ
ಆಧುನಿಕ ಭಾರತ ನಿರ್ಮಿಸಲು ನಾವು ಮಹಿಳೆಯರ ಕೈಗಳನ್ನು ಬಲಪಡಿಸುತ್ತಿದ್ದೇವೆ: ಪ್ರಧಾನಮಂತ್ರಿ
ನಮ್ಮ ಅಭಿವೃದ್ಧಿಯನ್ನು ನಾವು ಇತರರ ಅಭಿವೃದ್ಧಿ ಕಡೆಗೂ ಜವಾಬ್ದಾರಿಯಾಗಿ ನೋಡುತ್ತೇವೆ; ನಮ್ಮ ಆದ್ಯತೆ ಯಾವಾಗಲೂ ಜಾಗತಿಕ ದಕ್ಷಿಣ ಭಾಗಕ್ಕೆ ಇದೆ: ಪ್ರಧಾನಮಂತ್ರಿ
ಜಾಗತಿಕ ದಕ್ಷಿಣ ಭಾಗವು ಉದಯಿಸುತ್ತಿದೆ; ಅವರು ಹೊಸ ಮತ್ತು ಉತ್ತಮ ವಿಶ್ವ ಕ್ರಮವನ್ನು ನೋಡಲು ಬಯಸುತ್ತಿದ್ದಾರೆ: ಪ್ರಧಾನಮಂತ್ರಿ
ಮಹಾಸಾಗರವು ಜಾಗತಿಕ ದಕ್ಷಿಣ ಭಾಗಕ್ಕೆ ಭಾರತದ ಮಾರ್ಗದರ್ಶಿ ದೃಷ್ಟಿಕೋನವಾಗಿದೆ: ಪ್ರಧಾನಮಂತ್ರಿ
Posted On:
04 JUL 2025 10:51PM by PIB Bengaluru
ಸೆನೆಟ್ ಅಧ್ಯಕ್ಷರಾದ ಗೌರವಾನ್ವಿತ ವೇಡ್ ಮಾರ್ಕ್ ಮತ್ತು ಸದನದ ಸ್ಪೀಕರ್ ಗೌರವಾನ್ವಿತ ಜಗದೇವ್ ಸಿಂಗ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನ ಮಂತ್ರಿ ಮೋದಿ ಅವರು, ಈ ಸಂದರ್ಭವು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಗುರುತಿಸಿದೆ ಎಂದರು.
ಸಂಸತ್ತಿನ ಜಂಟಿ ಅಧಿವೇಶನ(ಆಗಸ್ಟ್ ಹೌಸ್) ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ಮೋದಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸದಸ್ಯರಿಗೆ ವಿಶೇಷ ಶುಭಾಶಯಗಳನ್ನು ತಿಳಿಸಿದರು. ತಮಗೆ ಅತ್ಯುನ್ನತ ರಾಷ್ಟ್ರೀಯ ಗೌರವ ನೀಡಿದ್ದಕ್ಕಾಗಿ ಟ್ರಿನಿಡಾಡ್ ಮತ್ತು ಟೊಬಾಗೊ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಭಾರತೀಯ ಪ್ರಜಾಪ್ರಭುತ್ವದ ಚೈತನ್ಯದ ಬಗ್ಗೆ ವಿವರಿಸಿದ ಅವರು, ಪ್ರಜಾಪ್ರಭುತ್ವದ ತಾಯಿಯಾಗಿ ಭಾರತವು ಈ ಪದ್ಧತಿಯನ್ನು ತನ್ನ ಸಂಸ್ಕೃತಿ ಮತ್ತು ಜೀವನದಲ್ಲಿ ಅವಿಭಾಜ್ಯ ಅಂಗವಾಗಿಸಿಕೊಂಡಿದೆ. ಈ ವಿಧಾನವು ಭಾರತದ ವೈವಿಧ್ಯತೆಯು ಪ್ರವರ್ಧಮಾನಕ್ಕೆ ಬರಲು ಮತ್ತು ಸಮೃದ್ಧಿಯಾಗಲು, ಎಲ್ಲಾ ವಿಚಾರಗಳು ಸಹಬಾಳ್ವೆಯಿಂದ ಮುನ್ನಡೆಯಲು, ಸಂಸದೀಯ ಭಾಷಣಗಳು ಮತ್ತು ಸಾರ್ವಜನಿಕ ಚರ್ಚೆಗಳನ್ನು ಉತ್ಕೃಷ್ಟಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಟ್ರಿನಿಡಾಡ್ ಮತ್ತು ಟೊಬಾಗೊದ ಯಶಸ್ವೀ ಪ್ರಜಾಪ್ರಭುತ್ವ ಪ್ರಯಾಣಕ್ಕೆ ಪ್ರಧಾನ ಮಂತ್ರಿ ಅಭಿನಂದನೆ ಸಲ್ಲಿಸಿದರು. ಸ್ವಾತಂತ್ರ್ಯದ ಹಾದಿಯಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಸೌಭಾಗ್ಯ ಭಾರತಕ್ಕೆ ಸಿಕ್ಕಿದೆ. ಆಧುನಿಕ ರಾಷ್ಟ್ರಗಳಾಗಿ ಎರಡೂ ದೇಶಗಳ ನಡುವಿನ ಆಳವಾಗಿ ಬೇರೂರಿರುವ ಬಾಂಧವ್ಯವು ಬಲಿಷ್ಠವಾಗಿ ಮುಂದುವರಿದಿದೆ. ಭಾರತ ಉಡುಗೊರೆಯಾಗಿ ನೀಡಿದ ಸ್ಪೀಕರ್ ಕುರ್ಚಿಯಲ್ಲಿ 2 ಪ್ರಜಾಪ್ರಭುತ್ವಗಳ ನಡುವಿನ ನಿಕಟ ಸಂಬಂಧಗಳು ಸೂಕ್ತವಾಗಿ ಪ್ರತಿಫಲಿಸುತ್ತಿವೆ. ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಸಂಸದೀಯ ವಿನಿಮಯವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದರು. ಸದನದಲ್ಲಿ ಮಹಿಳಾ ಸಂಸದೀಯ ಸದಸ್ಯರ ಗಮನಾರ್ಹ ಉಪಸ್ಥಿತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು, ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಭಾರತವು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿ ತಳಮಟ್ಟದಲ್ಲಿ ಮುನ್ನಡೆಸುತ್ತಿರುವ ಮಹಿಳಾ ನಾಯಕಿಯರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ, ದೇಶದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಶಕ್ತಿ ತುಂಬಲು 1.5 ದಶಲಕ್ಷ ಮಹಿಳೆಯರು ಚುನಾಯಿತರಾಗಿದ್ದಾರೆ ಎಂದರು.
ಮಾನವತೆ ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಶಾಂತಿ ಪ್ರಿಯ ಸಮಾಜಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುವ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಜಾಗತಿಕ ಸಮುದಾಯ ಬಲಪಡಿಸಬೇಕೆಂದು ಕರೆ ನೀಡಿದರು. ಜಾಗತಿಕ ಆಡಳಿತ ಸುಧಾರಣೆಗೆ ಮತ್ತು ಜಾಗತಿಕ ದಕ್ಷಿಣ ಭಾಗಕ್ಕೆ ಅದರ ಅರ್ಹತೆ ನೀಡಬೇಕೆಂದು ಕರೆ ನೀಡಿದರು. ಭಾರತ-ಕೆರಿಬಿಯನ್ ಸಮುದಾಯ(CARICOM)ದ ನಡುವೆ ಆರ್ಥಿಕ ಸಹಕಾರ ಉತ್ತೇಜಿಸುವ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಟ್ರಿನಿಡಾಡ್‌ಗೆ ಭಾರತೀಯರ ಆಗಮನದ 180 ವರ್ಷಗಳ ಆಚರಣೆಯನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ, ಎರಡೂ ದೇಶಗಳ ನಡುವಿನ ಸಂಬಂಧಗಳು ಶತಮಾನಗಳಷ್ಟು ಹಳೆಯದಾದ ಬಾಂಧವ್ಯದ ಭದ್ರ ಅಡಿಪಾಯವನ್ನು ಆಧರಿಸಿವೆ, ಇವುಗಳು ಆಳವಾಗಿ ಮತ್ತು ಸಮೃದ್ಧಿಯಾಗಿ ಮುಂದುವರಿಯುತ್ತವೆ ಎಂದರು.
*****
(Release ID: 2142436)
Visitor Counter : 2
Read this release in:
Odia
,
English
,
Urdu
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam